More

    ಸಕ್ರಿಯ ಪ್ರಕರಣ 207ಕ್ಕೆ ಇಳಿಕೆ, ಉಡುಪಿಯಲ್ಲಿ 2 ಪಾಸಿಟಿವ್ ಪತ್ತೆ

    ಉಡುಪಿ: ಜಿಲ್ಲೆಯಲ್ಲಿ ಸೋಮವಾರ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 57 ಮಂದಿ ವರದಿ ನೆಗೆಟಿವ್ ಬಂದಿದೆ.

    ಇದರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರು, ಇನ್ನೊಬ್ಬರು ಸ್ಥಳೀಯರು. ಇಬ್ಬರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಯಲ್ಲಿ ಕೋವಿಡ್ ಲಕ್ಷಣ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಸೋಮವಾರವೂ 11 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 820 ಮಂದಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 207ಕ್ಕೆ ಇಳಿಕೆಯಾಗಿದೆ. ಕೆಲವರಿಗೆ ವರದಿಯಲ್ಲಿ ಪಾಸಿಟಿವ್ ಮರುಕಳಿಸುತ್ತಿದೆ. ಸೋಮವಾರ 8 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 52 ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ವಿದೇಶ, ಹೊರ ರಾಜ್ಯಗಳಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿರುವ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಈ ರೀತಿಯ ಕ್ವಾರಂಟೈನ್ ಇರುವ ಮನೆಗೆ ಹೊರಗಿನವರು ಯಾರು ತೆರಳಬಾರದು. ಮನೆಯವರು ಹೊರಗೆ ಸುತ್ತಾಡಬಾರದು. ಯಾರೇ ಹೊರ ರಾಜ್ಯದಿಂದ ಆಗಮಿಸಿ, ಹೊರಗೆ ಸುತ್ತಾಡುತ್ತ ಕ್ವಾರಂಟೈನ್ ನಿಯಮ ಪಾಲಿಸದಿದ್ದಲ್ಲಿ ಸ್ಥಳೀಯಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

    ಒಬ್ಬನಿಂದ ಮೂವರಿಗೆ ಸೋಂಕು!
    ಹತ್ತು ದಿನಗಳ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಲ್ಯಾಬ್ ಟೆಕ್ನಿಷಿಯನ್ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಒಂದು ದಿನ ಬಳಿಕ ಅವರ ಮಗುವಿಗೂ ತಗುಲಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯ ಹಿರಿಯರನ್ನು ಪರೀಕ್ಷೆ ನಡೆಸಿದ್ದು, ಶುಕ್ರವಾರ 75 ವರ್ಷದ ಹಿರಿಯೊರೊಬ್ಬರಿಗೆ ಸೋಂಕು ದೃಢಗೊಂಡಿತ್ತು. ಈಗ ಇನ್ನೊಬ್ಬ ಸದಸ್ಯರಿಗೂ ಕರೊನಾ ಪಾಸಿಟಿವ್ ಖಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts