More

    ಅಂತಾರಾಷ್ಟ್ರೀಯ ರಾಮ್​ಲೀಲಾ ಉತ್ಸವದಲ್ಲಿ ಉಡುಪಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ

    ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ರಾಮ್​ಲೀಲಾ ಉತ್ಸವದಲ್ಲಿ ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಭೋಪಾಲ್​ನ ರವೀಂದ್ರ ಭವನದಲ್ಲಿ ಅ. 20ರ ಸಂಜೆ ನಡೆದ ಈ ಪ್ರದರ್ಶನದಲ್ಲಿ ಉಡುಪಿಯಿಂದ ತೆರಳಿದ್ದ 16 ಕಲಾವಿದರು ಭಾಗಿಯಾಗಿದ್ದರು. ಥಾಯ್ಲೆಂಡ್​, ಮಲೇಷ್ಯಾ, ಶ್ರೀಲಂಕಾ, ಫಿಜಿ ಮಾತ್ರವಲ್ಲದೆ ದೇಶದಲ್ಲಿನ ಅಸ್ಸಾಂ, ಒಡಿಶಾ ಮುಂತಾದೆಡೆಯ ಕಲಾವಿದರ ಮಧ್ಯೆ ಕರ್ನಾಟಕದಿಂದ ಯಕ್ಷಗಾನ ಕಲಾವಿದರು ಪ್ರದರ್ಶನ ತೋರಿದ್ದಾರೆ.

    ರಾಮ, ಲಕ್ಷ್ಮಣ, ಸೀತೆ ಅರಣ್ಯಕ್ಕೆ ಪ್ರವೇಶಿಸುವುದರಲ್ಲಿಂದ ಆರಂಭವಾಗುವ ‘ಪಂಚವಟಿ’ ಪ್ರಸಂಗವನ್ನು ಇಲ್ಲಿ ಪ್ರದರ್ಶಿಸಲಾಯಿತು. ಈ ಪ್ರಸಂಗವನ್ನು ಎಲ್ಲೆಡೆಯ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥದ್ದೊಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಮಧ್ಯಪ್ರದೇಶದ ಸರ್ಕಾರಕ್ಕೆ ಯಕ್ಷಸಂಜೀವ ಯಕ್ಷಗಾನ ಕೇಂದ್ರದವರು ಧನ್ಯವಾದ ಸಲ್ಲಿಸಿದ್ದಾರೆ.

    ಅಂತಾರಾಷ್ಟ್ರೀಯ ರಾಮ್​ಲೀಲಾ ಉತ್ಸವದಲ್ಲಿ ಉಡುಪಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಅಂತಾರಾಷ್ಟ್ರೀಯ ರಾಮ್​ಲೀಲಾ ಉತ್ಸವದಲ್ಲಿ ಉಡುಪಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ

    ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ಮಂಗಳವಾರ ಕಾಡುವ ಸಮಸ್ಯೆ: ಗ್ರಾಮಸ್ಥರ ಪರವಾಗಿ ಸಚಿವರಿಗೆ ಮನವಿ

    ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೇ ನೋ ಎಂಟ್ರಿ; ಕೋಪಗೊಂಡು ವಾಪಸ್​ ಹೋದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts