More

    ವಾಹನ ಚಾಲನೆ ವೇಳೆ ನಿಯಮಗಳನ್ನು ಪಾಲಿಸಿ

    ವಾಹನ ಚಾಲನೆ ವೇಳೆ ನಿಯಮಗಳನ್ನು ಪಾಲಿಸಿಮಕ್ಕಳಿಗೆ ವಾಹನ ಕೊಡಿಸುವ ಯೋಚನೆ ಮಾಡಿದಲ್ಲಿ ಎಚ್ಚರವಾಗಿರ ಬೇಕಾಗುತ್ತದೆ. ಯಾಕೆಂದರೆ, ಅವರಿಗೆ ವಾಹನ ಚಲಾಯಿಸುವ ಹೊಸ ಹುರುಪು. ಇದು ಅಪಘಾತಕ್ಕೆ ಕಾರಣವಾಗಲೂಬಹುದು. ಆದ್ದರಿಂದ ಚಾಲಕನನ್ನು ನೇಮಿಸಿ ವಾಹನ ಕೊಡಿಸುವುದು ಒಳಿತು.

    ‘ಟೇಲ್ ಗೇಟಿಂಗ್ ಅಂದ್ರೆನು? ನಿಮ್ಮ ಹಾಗೂ ಮುಂದಿನ ವಾಹನದ ನಡುವೆ ಎಷ್ಟು ಅಂತರವಿರಬೇಕು? ಲಾರಿಗಳು ರೈಟ್ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರೆ ಏನರ್ಥ? ಡ್ರೖೆವರ್ ಸೀಟ್ ಅಡಿಯಲ್ಲಿ ಬಾಟಲಿಗಳನ್ನು ಯಾಕಿಡಬಾರದು? ಸಡನ್ನಾಗಿ ಬ್ರೇಕ್ ಹಾಕಿದ ಎದುರುಗಡೆ ವಾಹನಕ್ಕೆ ನೀವು ಡಿಕ್ಕಿ ಹೊಡೆದಲ್ಲಿ ತಪ್ಪು ಯಾರದು?…

    ಹೊಸದಾಗಿ ಬಿಜಿನೆಸ್ ಪ್ರಾರಂಭಿಸಿದ ಯುವಕ ನಿಖಿಲ್ ಆರ್ಡರ್​ಗಾಗಿ ಕೇಳಿಕೊಂಡಾಗ ನಾಳೆ ಹತ್ತು ಗಂಟೆಗೆ ಸರಿಯಾಗಿ ಸ್ಯಾಂಪಲ್ ತಂದರೆ ಆರ್ಡರನ್ನು ಕೊಡುವುದಾಗಿ ಹೇಳಿದ್ದೆ. ಹನ್ನೊಂದು ಗಂಟೆ ತನಕ ಕಾದು ಬೇರೆಯವರಿಗೆ ಆರ್ಡರ್ ಕೊಟ್ಟಿದ್ದೆ. ವಾರದ ನಂತರ ತಿಳಿಯಿತು ಆತ ವೇಗವಾಗಿ ಬೈಕಿನಲ್ಲಿ ಬರುತ್ತಿರಬೇಕಾದರೆ ಮುಂದಿದ್ದ ಕಾರ್ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಇವನು ಬ್ರೇಕ್ ಹಾಕಿದರೂ ನಿಲ್ಲದೆ ಬೈಕ್ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ, ಕೆಳಗೆ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ. ಇಲ್ಲಿ ನಿಖಿಲ್ ಏನೋ ಕಾಲು ಮುರಿದುಕೊಂಡ, ಆದರೆ ಎಷ್ಟೋ ಸವಾರರು ಪ್ರಾಣವನ್ನೇ ಕಳೆದುಕೊಳ್ಳುವುದಲ್ಲದೆ ಇತರರ ಪ್ರಾಣವನ್ನೂ ಕಳೆಯುತ್ತಾರೆ. ಆದ್ದರಿಂದ ‘ರಸ್ತೆ ಸುರಕ್ಷತೆ’ ಬಗ್ಗೆ ಕೆಲವು ಉಪಯುಕ್ತ ಸಲಹೆಗಳನ್ನು ಕೊಡುತ್ತಿದ್ದೇನೆ.

    ವಾಹನ ಚಾಲನೆ ಮಾಡುವಾಗ ‘ಟೇಲ್ ಗೇಟಿಂಗ್’ ಅಂದರೆ ಕಡಿಮೆ ಅಂತರವಿಟ್ಟು ವಾಹನ ಚಲಾಯಿಸುವುದನ್ನು ಮಾಡಬೇಡಿ. ಅಮೆರಿಕದಲ್ಲಿ ಇದು ಅಕ್ಷಮ್ಯ ಅಪರಾಧ. ಎದುರುಗಡೆ ವಾಹನಕ್ಕೆ ನೀವು ಡಿಕ್ಕಿ ಹೊಡೆದಲ್ಲಿ ತಪು್ಪ ನಿಮ್ಮದೇ. ನಿಮ್ಮ ವಾಹನಕ್ಕೂ ಮುಂದಿನ ವಾಹನಕ್ಕೂ ಮೂರು ಸೆಕೆಂಡ್​ಗಳ ಅಂತರವನ್ನು ಯಾವಾಗಲೂ ಇಡಬೇಕು. ಅಂದರೆ ನಿಮ್ಮ ವಾಹನ ಅವರ ವಾಹನ ಇರುವ ಜಾಗವನ್ನು ಕ್ರಮಿಸಲು ಕನಿಷ್ಠ ಮೂರು ಸೆಕೆಂಡ್​ಗಳಿರಬೇಕು.

    ತುಂಬ ಜನ, ‘ಆತ ಸಡನ್ನಾಗಿ ಅಡ್ಡ ಬಂದ, ಅದಕ್ಕೆ ಡಿಕ್ಕಿ ಹೊಡೆದೆ’ ಅನ್ನೋದನ್ನ ಕೇಳಿರುತ್ತೀರಾ. ಇದು ತಪು್ಪ. ಡ್ರೖೆವಿಂಗ್ ಮಾಡುವಾಗ ಪಕ್ಕದಲ್ಲಿ ಬರುತ್ತಿರುವ ಅಥವಾ ಎದುರಿಂದ ಬರುತ್ತಿರುವ ವಾಹನಗಳ ಮೇಲೆ ನಿಮ್ಮ ಮನಸ್ಸು ಜಾಗೃತವಾಗಿರಬೇಕು. ಅವರು ಅನಿರೀಕ್ಷಿತವಾಗಿ ಯಾವುದೋ ಕಾರಣಕ್ಕೆ ನಿಮ್ಮ ವಾಹನಕ್ಕೆ ಅಡ್ಡ ಬರಬಹುದು. ಆಗ ವಾಹನವನ್ನು ನಿಯಂತ್ರಿಸಲು ನೀವು ಸಮರ್ಥರಾಗಿರಬೇಕು. ಕಣ್ಣುಗಳು ಸುತ್ತಮುತ್ತ ನಡೆಯುವ ಎಲ್ಲ ಘಟನೆಗಳನ್ನು ‘ಸ್ಕಾ್ಯನಿಂಗ್’ ಮಾಡುತ್ತಿರಬೇಕು. ವಾಹನಗಳ ನಡುವೆ ಸಾಕಷ್ಟು ಅಂತರ ಕಾಪಾಡಿಕೊಂಡಲ್ಲಿ ಅಡ್ಡ ಬರುವ ವಾಹನದಿಂದ ಸಡನ್ನಾಗಿ ಘಟಿಸುವ ಘಟನೆಗಳನ್ನು ನಿಯಂತ್ರಿಸಬಹುದು.

    ಹಾಗೆಯೇ ಟ್ರಾಫಿಕ್ ಸಿಗ್ನಲ್​ನಲ್ಲಿ ಎದುರಿನ ವಾಹನ ಕೆಟ್ಟು ನಿಂತಲ್ಲಿ, ನಿಮ್ಮ ವಾಹನವನ್ನು ರಿವರ್ಸ್ ತೆಗೆದುಕೊಳ್ಳದೆ ಮುಂದೆ ಹೋಗಲು ಸಾಧ್ಯವಾಗುವಷ್ಟು ಜಾಗ ಬಿಟ್ಟು ನಿಲ್ಲಿಸಬೇಕು. ಹೈವೇಗಳಲ್ಲಿ ಲಾರಿ ಅಥವಾ ಟ್ರಕ್ ಚಾಲಕರು ಬಲಗಡೆ ಇಂಡಿಕೇಟರ್ ಹಾಕಿ ಹೋಗುತ್ತಿರುತ್ತಾರೆ. ಇದು ತಾನು ಬಲಗಡೆಗೆ ತಿರುಗುತ್ತೇನೆಂಬ ಸೂಚನೆ ಅಥವಾ ಹಿಂದಿನ ವಾಹನ ಎಡಗಡೆಯಿಂದ ಓವರ್​ಟೇಕ್ ಮಾಡಬಹುದೆಂಬ ಸೂಚನೆ ಅಥವಾ ತಾನು ಎದುರುಗಡೆಯ ವಾಹನವನ್ನು ಓವರ್​ಟೇಕ್ ಮಾಡುತ್ತೇನೆಂಬ ಸೂಚನೆಯಾಗಿರುತ್ತದೆ. ಕೆಲವೊಮ್ಮೆ ಚಾಲಕರು ಇಂಡಿಕೇಟರ್ ಹಾಕಿದ ನಂತರ ಅದನ್ನು ಆಫ್ ಮಾಡೋದಕ್ಕೆ ಮರೆತುಬಿಡುತ್ತಾರೆ. ಆದ್ದರಿಂದ ಓವರ್​ಟೇಕ್ ಮಾಡುವಾಗ ಎಚ್ಚರವಿರಲಿ.

    ದೃಷ್ಟಿ ಯಾವಾಗಲೂ ಮುಂದಿನ ರಸ್ತೆ ಮೇಲೆ ಇರಲಿ. 2 ಸೆಕೆಂಡ್​ಗಿಂತ ಹೆಚ್ಚು ಸಮಯ ದೃಷ್ಟಿಯನ್ನು ಬೇರೆಡೆಗೆ ಹರಿಸಬೇಡಿ. ವೇಗದಲ್ಲಿ ಚಲಾಯಿಸುವಾಗ ಅರ್ಧ ಸೆಕೆಂಡ್ ಕೂಡ ಆಚೀಚೆ ದೃಷ್ಟಿಯನ್ನು ಹರಿಸಬೇಡಿ. ವೇಗವಾಗಿ ವಾಹನ ಚಲಾಯಿಸುವುದು ಅಪಾಯಕಾರಿ. ಒಬ್ಬ ಬೈಕ್ ಸವಾರ ಗಂಟೆಗೆ 120 ಕಿ.ಮೀ. ಅಂದರೆ ನಿಮಿಷಕ್ಕೆ ಎರಡು ಕಿಲೋಮೀಟರ್ ವೇಗದಲ್ಲಿ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದ. ತುಂಬ ಬಿಸಿಲು. ಬೆವರೊರೆಸಿಕೊಳ್ಳಲು ಬೈಕಿನ ವೇಗವನ್ನು ತಗ್ಗಿಸದೆ ಎಡಗೈಯಿಂದ ಕರವಸ್ತ್ರ ತೆಗೆದು ಮುಖ ಒರೆಸಿಕೊಳ್ಳತೊಡಗಿದ. ಎರಡು ಸೆಕೆಂಡ್​ಗಳ ಕಾಲ ಅವನ ಕಣ್ಣುಗಳು ಮುಚ್ಚಿಕೊಂಡಿದ್ದವು. ಪರಿಣಾಮ- ಮುಂದೆ ರಸ್ತೆ ತಿರುವು ಇತ್ತು. ಎದುರಿಗಿದ್ದ ಪ್ರಪಾತದ ಅರಿವಿಲ್ಲದೆ ಬಿದ್ದು ಪ್ರಾಣ ಕಳೆದುಕೊಂಡ.

    ಇನ್ನು ಕೆಲವರಿರುತ್ತಾರೆ, ರಸ್ತೆಬದಿಯಲ್ಲಿ ದೇವಸ್ಥಾನ ಕಂಡ ತಕ್ಷಣ ಡ್ರೖೆವಿಂಗ್​ನ ಪರಿವೆಯಿಲ್ಲದೆ ಎರಡೂ ಕೈಗಳನ್ನು ಸ್ಟೀರಿಂಗ್ ಮೇಲಿಂದ ತೆಗೆದು ನಮಸ್ಕಾರ ಮಾಡುತ್ತಾರೆ. ಇವರೇನೋ ತನಗೆ ಒಳ್ಳೆಯದಾಗಲಿ ಅಂದುಕೊಂಡು ದೇವರಿಗೆ ನಮಸ್ಕಾರ ಮಾಡುತ್ತಾರೆ ನಿಜ, ಆದರೆ ಸ್ವಲ್ಪ ಎಚ್ಚರ ತಪ್ಪಿದಲ್ಲಿ ಬೇರೆ ವಾಹನಗಳು ಡಿಕ್ಕಿ ಹೊಡೆದು ತಾವೇ ಸ್ವತಃ ದೇವರ ಪಾದ ಸೇರುವ ಸಾಧ್ಯತೆಯೂ ಇಲ್ಲದಿಲ್ಲ. ಬದುಕಿದ್ದರೆ ಕೋಟಿ ರೂಪಾಯಿ ಗಳಿಸುವ ಚಾನ್ಸ್ ಪ್ರತಿಯೊಬ್ಬರಿಗೂ ಇದೆ. ಆದರೆ ಸತ್ತು ಹೋದರೆ…?

    ಹಾಗೆಯೇ ಡ್ರೖೆವಿಂಗ್ ಮಾಡುವಾಗ ದೂರ ನೋಡಿ ಡ್ರೖೆವಿಂಗ್ ಮಾಡಿ. ಇತರ ದಿಕ್ಕುಗಳಿಂದ ಬರುವ ವಾಹನಗಳ ಬಗ್ಗೆಯೂ ಎಚ್ಚರ ಇರಲಿ. ವಾಹನದ ಬ್ರೇಕ್ ಸರಿ ಇಲ್ಲದಿದ್ದಲ್ಲಿ ಅದನ್ನು ತಕ್ಷಣ ಸರಿಪಡಿಸಿ. ‘ವಾಹನದ ಬ್ರೇಕ್ ಕಡಿಮೆ ಇದ್ದಲ್ಲಿ, ನಿಧಾನವಾಗಿ ವಾಹನ ಚಲಾಯಿಸುತ್ತೇನೆ, ಆದ್ದರಿಂದ ಇಷ್ಟು ಬ್ರೇಕ್ ಸಾಕು’ ಎಂದು ಅಸಡ್ಡೆ ಮಾಡಬೇಡಿ. ಯಾವುದಾದರೂ ಇಳಿಜಾರಿನಲ್ಲಿ ಅಥವಾ ತುರ್ತಾಗಿ ಹೋಗಬೇಕಾದ ಸಂದರ್ಭಗಳಲ್ಲಿ ವಾಹನವನ್ನು ವೇಗವಾಗಿ ಚಲಾಯಿಸಬೇಕಾದಾಗ ವಾಹನ ನಿಯಂತ್ರಣಕ್ಕೆ ಸಿಗದೆ ಅಪಾಯಗಳಾಗುವ ಸಾಧ್ಯತೆಗಳಿವೆ. ಮಾತ್ರವಲ್ಲ, ಚಿಕ್ಕ ಚಿಕ್ಕ ರಿಪೇರಿ ಕೆಲಸಗಳನ್ನು ತಕ್ಷಣ ಮಾಡಿಸದಿದ್ದರೆ ದೊಡ್ಡ ದೊಡ್ಡ ಖರ್ಚುಗಳನ್ನು ಮಾಡಬೇಕಾದ ಸಂದರ್ಭಗಳೇ ಜಾಸ್ತಿ. ‘ಖಠಿಜಿಠ್ಚಿಜ ಜ್ಞಿ ಠಿಜಿಞಛಿ ಠಚಡಛಿಠ ್ಞ್ಞ‘ ಎಂಬ ಮಾತಿನಂತೆ ಮಾಡಬೇಕಾದ ರಿಪೇರಿ ಕೆಲಸವನ್ನು ತಕ್ಷಣ ಮಾಡಿಸಿದಲ್ಲಿ ಹೆಚ್ಚು ಸುರಕ್ಷಿತ.

    ಚಾಲಕನ ಆಸನದ ಅಡಿಯಲ್ಲಿ ಯಾವುದೇ ಬಾಟಲ್​ಗಳನ್ನು ಇಡಬೇಡಿ. ಏಕೆಂದರೆ, ಅವು ಉರುಳಿಬಂದು ಬ್ರೇಕ್ ಪ್ಯಾಡಿನ ಕೆಳಗೆ ಸಿಕ್ಕಿಹಾಕಿಕೊಂಡಲ್ಲಿ ಬ್ರೇಕ್ ಹಾಕಲು ಸಾಧ್ಯವಾಗುವುದಿಲ್ಲ.

    ಮಕ್ಕಳಿಗೆ ವಾಹನ ಕೊಡಿಸುವ ಯೋಚನೆ ಮಾಡಿದಲ್ಲಿ ಎಚ್ಚರವಾಗಿರ ಬೇಕಾಗುತ್ತದೆ. ಯಾಕೆಂದರೆ, ಅವರಿಗೆ ವಾಹನ ಚಲಾಯಿಸುವ ಹೊಸ ಹುರುಪು. ಇದು ಅಪಘಾತಕ್ಕೆ ಕಾರಣವಾಗಲೂಬಹುದು. ಆದ್ದರಿಂದ ಚಾಲಕನನ್ನು ನೇಮಿಸಿ ವಾಹನ ಕೊಡಿಸುವುದು ಒಳಿತು. ಅಲ್ಲದೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡ್ರೖೆವಿಂಗ್ ಲೈಸೆನ್ಸ್ ಸಿಗುವುದಿಲ್ಲ. ಅಂಥವರೇನಾದರೂ ಅಪಘಾತ ಮಾಡಿದಲ್ಲಿ ಅದು ದೊಡ್ಡ ಅಪರಾಧ. ವಾಹನ ಕೊಡಿಸಿದ ತಪ್ಪಿಗೆ ನೀವು ಶಿಕ್ಷಾರ್ಹರಾಗುತ್ತೀರಿ.

    ಶೂ/ಚಪ್ಪಲಿಗಳನ್ನು ಹಾಕಿಕೊಂಡೇ ಡ್ರೖೆವಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ವಾಹನ ಇಳಿದು ಎಲ್ಲೇ ಹೋಗಬೇಕಾದ ಸಂದರ್ಭದಲ್ಲಿ ಕೆಲಸಕ್ಕೆ ಹಿಡಿಸುವ ಸಮಯಕ್ಕಿಂತ ಶೂ ಕಟ್ಟುವ/ಬಿಚ್ಚುವ ಕೆಲಸಕ್ಕೆ ಹೆಚ್ಚು ಸಮಯ ಹಾಳು ಮಾಡಬೇಕಾಗುತ್ತದೆ.

    ಜೋಕು: ಯಾವತ್ತೂ ಮೂವತ್ತು ಕಿಲೋಮೀಟರ್ ಸ್ಪೀಡ್ ದಾಟದೆ ಜಾಗ್ರತೆಯಿಂದ ಹೋಗುವ ರಾಮಪ್ಪ ಅಂದು ನೂರು ಕಿಲೋಮೀಟರ್ ವೇಗದಲ್ಲಿ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿದ್ದ. ಅಡ್ಡಗಟ್ಟಿದ ಇನ್ಸ್​ಪೆಕ್ಟರ್​ಗೆ ಸಮಜಾಯಿಶಿ ಕೊಟ್ಟ-

    ‘ಸರ್, ಫುಲ್ ಟೈಟ್ ಆಗ್ಬಿಟ್ಟಿದ್ದೀನಿ, ರಸ್ತೆಯಲ್ಲಿ ಹೆಚ್ಚು ಹೊತ್ತು ಇರ್ಬಾರ್ದು, ಆದಷ್ಟು ಬೇಗ ಮನೆ ಸೇರ್ಕೆಂಬಿಟ್ರೆ ಸೇಫು ಅಂತ ನಮ್ಮಪ್ಪ ಸಾಯೊಕ್ಮುಂಚೆ ಬುದ್ಧಿ ಹೇಳಿದ್ದ’.

    ‘ಒಳ್ಳೆ ಅಪ್ಪ, ಅವ್ನು ಹೆಂಗಯ್ಯಾ ಸತ್ತ?’

    ‘ಅದೆ ಸರ್, ಕುಡ್ದು ನಿಧಾನಕ್ಕೆ ಗಾಡಿ ಓಡಿಸ್ತಿರ್ಬೇಕಾದ್ರೆ ಲಾರಿ ಅಡಿ ಬಿದ್ದು ಹೋಗ್ಬಿಟ್ಟ’.

    ಸುರಕ್ಷತೆಯೇ ಆದ್ಯತೆ

    • ವಾಹನದ ಒಳಗೆ ಏರ್ ಕಂಡೀಷನ್ ಹಾಕಿ ಜೋರಾಗಿ ಮ್ಯೂಜಿಕ್ ಹಾಕಬೇಡಿ. ಹೀಗೆ ಮಾಡಿದಾಗ ಹಿಂದಿನಿಂದ ಬರುವ ವಾಹನಗಳ ಹಾರ್ನ್ ಕೇಳಿಸುವುದಿಲ್ಲ.
    • ಹಾಗೆಯೇ ಕಿಟಿಕಿ ಗಾಜುಗಳಿಗೆ ಕಪು್ಪಫಿಲ್ಮನ್ನು ಹಾಕಿಸಬೇಡಿ. ಇದರಿಂದ ಹೊರಗೆ ಸರಿಯಾಗಿ ಕಾಣಿಸದು. ರಾತ್ರಿ ವೇಳೆ ಡ್ರೖೆವ್ ಮಾಡಲು ಕಷ್ಟವಾಗುತ್ತದೆ.
    • ಕಾರನ್ನು ಹೊರಗಡೆಯಿಂದಲೇ ಕೀ ಮೂಲಕ ಲಾಕ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲದಿದ್ದಲ್ಲಿ ಕಾರ್ ಕೀ ಒಳಗಡೆಯೇ ಉಳಿದು ಬಾಗಿಲು ಲಾಕ್ ಆಗೋ ಸಾಧ್ಯತೆ ಇದೆ.
    • ವಾಹನಕ್ಕೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ರಿಮೋಟ್ ಲಾಕಿಂಗ್ ಸಿಸ್ಟಮ್ ಹೆಚ್ಚು ಸುರಕ್ಷಿತ.
    • ಕಾರನ್ನು ನಿಲ್ಲಿಸಿದ ನಂತರ ಎಲ್ಲ ಕಿಟಿಕಿಗಳನ್ನು ಮುಚ್ಚಲು ಮರೆಯಬೇಡಿ. ತೆರೆದೇ ಇದ್ದಲ್ಲಿ ಒಳಗಿನ ವಸ್ತುಗಳು ಕಳವಾಗುವ ಸಾಧ್ಯತೆ ಇದೆ.
    • ರಾತ್ರಿ ವೇಳೆ ಪ್ರಯಾಣಿಸುವಾಗ ಗಾಜನ್ನೂ ಮೇಲೆ ಮಾಡಿ ಎಲ್ಲ ಡೋರ್​ಗಳನ್ನು ಲಾಕ್ ಮಾಡಿ ಡ್ರೖೆವ್ ಮಾಡಿ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

    ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ

    ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts