More

    ಏಪ್ರಿಲ್​ 30ರೊಳಗಾಗಿ ನಿಮ್ಮವರನ್ನು ಕರೆಯಿಸಿಕೊಳ್ಳಿ: ಭಾರತೀಯರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಯುಎಇ

    ದುಬೈ: ಗಲ್ಫ್​ ರಾಷ್ಟ್ರಗಳಲ್ಲಿ ಇನ್ನೂ ನೆಲೆಸಿರುವ ನೆಲೆಸಿರುವ ಭಾರತೀಯರನ್ನು ಏಪ್ರಿಲ್ 30ರೊಳಗಾಗಿ ವಾಪಸ್​ ಕರೆಯಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಯುನೈಟೆಡ್​ ಅರಬ್​ ಎಮಿರೇಟ್ಸ್​ ಎಚ್ಚರಿಕೆ ನೀಡಿದೆ.

    ಕುವೈತ್​, ದುಬೈ, ಒಮನ್​ ಸೇರಿ ಹಲವು ಕೊಲ್ಲಿ ರಾಷ್ಟ್ರಗಳಲ್ಲಿ ಇನ್ನೂ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ಸೇರಿ ವಿದೇಶಿಯರು ಉಳಿದುಕೊಂಡಿದ್ದಾರೆ. ಆಯಾ ರಾಷ್ಟ್ರಗಳು ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅಂಥ ರಾಷ್ಟ್ರಗಳ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಮುಖ್ಯವಾಗಿ ಭವಿಷ್ಯದಲ್ಲಿ ಅಲ್ಲಿನ ಪ್ರಜೆಗಳು ಯುಎಇಯಲ್ಲಿ ಉದ್ಯೋಗ ಕೈಗೊಳ್ಳಲು ನಿರ್ಬಂಧಿಸಲಾಗುತ್ತದೆ ಹಾಗೂ ಮೀಸಲು ಪದ್ಧತಿಯನ್ನು ರೂಪಿಸಲಾಗುವುದು ಎಂದು ಯುಎಇ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ.

    ಇದಷ್ಟೇ ಅಲ್ಲದೆ, ಆಯಾ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

    ಯುಎಇಯಲ್ಲಿ ಉಳಿದುಕೊಂಡು ಅಕ್ರಮ ವಲಸಿಗರು, ಈಗಾಗಲೇ ವೀಸಾ ಅವಧಿ ಮುಗಿದಿರುವವರು ಏಪ್ರಿಲ್​ 30ರೊಳಗಾಗಿ ದೇಶ ಬಿಡುವಂತೆ ಸೂಚಿಸಿದೆ. ಅಂಥವರಿಗೆ ಯಾವುದೇ ದಂಡ ವಿಧಿಸದೇ ಉದಾರತೆ ತೋರುವುದಾಗಿ ಕುವೈತ್​ ಹೇಳಿದೆ. ಈ ನಿಟ್ಟಿನಲ್ಲಿ ಭಾರತೀಯ ರಾಯಭಾರ ಅಧಿಕಾರಿಗಳು ಕುವೈಟ್​ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

    ಗಲ್ಫ್​ ದೇಶಗಳಲ್ಲಿ 33 ಲಕ್ಷಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ. ಅಲ್ಲಿನ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.30 ಭಾರತೀಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಕೇರಳದವರೇ ಆಗಿದ್ದಾರೆ. ನಂತರದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದವರಿದ್ದಾರೆ.

    ವಿದೇಶಿಯರು ತಮ್ಮ ದೇಶಕ್ಕೆ ತೆರಳಲು ಇಚ್ಛಿಸಿದಲ್ಲಿ ಅವರನ್ನು ಕರೆಯಿಸಿಕೊಳ್ಳುವ ಸಂಪೂರ್ಣ ಹೊಣೆಗಾರಿಕೆ ಆಯಾ ದೇಶಗಳದ್ದಾಗಿದೆ ಎಂದು ಯುಎಇ ಸ್ಪಷ್ಟಪಡಿಸಿದೆ.

    ಉದ್ಯೋಗಿಗಳು ವಾರ್ಷಿಕ ರಜೆ ಮೇಲೆ ತಮ್ಮ ದೇಶಗಳಿಗೆ ತೆರಳಲು ಅವಕಾಶವಿದೆ. ಅಥವಾ ವೇತನರಹಿತ ರಜೆಯನ್ನು ನೀಡಲಾಗುತ್ತದೆ. ಉದ್ಯೋಗಿಗಳ ನೆರವಿಗೆ ಬಂದಿರುವ ಕೆಲ ಕಂಪನಿಗಳು ಮೂರು ವೇತನವನ್ನು ಮುಂಗಡವಾಗಿ ನೀಡುವುದಾಗಿಯೂ ಘೋಷಿಸಿವೆ.

    ವಿದೇಶಕ್ಕೆ ತೆರಳುವವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದ್ದರೆ, ನಮ್ಮ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ತಮ್ಮ ದೇಶಗಳಿಗೆ ತೆರಳುವವರು ಭಯಪಡಬೇಕಿಲ್ಲ. ಭಾರತವೂ ಸೇರಿ ಯುಎಇಯಲ್ಲಿರುವ ಎಲ್ಲ ದೇಶಗಳ ರಾಯಭಾರ ಕಚೇರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಯುಎಇಯ ಭಾರತದ ರಾಯಭಾರಿ ಅಬ್ದುಲ್​ ರಹ್ಮಾನ್​ ಅಲ್​ ಬನ್ನಾ ತಿಳಿಸಿದ್ದಾರೆ.

    ಲಾಕ್​​ಡೌನ್​ ಹಿನ್ನೆಲೆಯಲ್ಲಿ ಭಾರತದಲ್ಲಿ ವಿದೇಶಿ ವಿಮಾನಗಳ ಹಾರಾಟ ನಿಷೇಧಿಸಿರುವ ಕಾರಣ ಪ್ರವಾಸಕ್ಕೆ ಬಂದವರು ಇಲ್ಲಿಯೇ ಉಳಿದುಕೊಂಡಿದ್ದಾರೆ. ಅವರೆಲ್ಲರೂ ಪ್ರಯಾಣಕ್ಕೆ ಯೋಗ್ಯರಾಗಿದ್ದಾರೆ ಎಂದು ಬನ್ನಾ ಹೇಳಿದ್ದಾರೆ. ಆದಷ್ಟು ಬೇಗ ತಮ್ಮವರನ್ನು ಕರೆಯಿಸಿಕೊಳ್ಳಲು ಮುಂದಾಗುವಂತೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಈ 21 ದಿನಗಳಲ್ಲಿ ನಿಮ್ಮ ಆರೋಗ್ಯ ಹೇಗೆ ಸುಧಾರಿಸಿರುತ್ತೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts