More

    ಅಫ್ಘಾನಿಸ್ತಾನಕ್ಕೆ ಶಾಕ್ ನೀಡಿದ ಯುಎಇ: ಆರ್ಯನ್ ಲಾಕ್ರ ಅರ್ಧಶತಕ

    ಶಾರ್ಜಾ: ಸರ್ವಾಂಗೀಣ ನಿರ್ವಹಣೆ ತೋರಿದ ಯುಎಇ ತಂಡ ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ 11 ರನ್‌ಗಳ ಆಘಾತ ನೀಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1 ಸಮಬಲ ಕಂಡಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಯುಎಇ, ಆರ್ಯನ್ ಲಾಕ್ರ (63* ರನ್, 47 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಮುಹಮದ್ ವಾಸೀಂ (53 ರನ್,32 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ನೆರವಿನಿಂದ 7 ವಿಕೆಟ್‌ಗೆ 166 ರನ್ ಕಲೆಹಾಕಿತು. ಪ್ರತಿಯಾಗಿ ಮುಹಮದ್ ಜಾವದುಲ್ಲಾ (26ಕ್ಕೆ 4), ಅಲಿ ನಾಸೀರ್ (24ಕ್ಕೆ 4)ಬಿಗಿ ದಾಳಿಗೆ ತತ್ತರಿಸಿ 19.5 ಓವರ್‌ಗಳಲ್ಲಿ 155 ರನ್‌ಗಳಿಗೆ ಸರ್ವಪತನ ಕಂಡಿತು. ಅಂತಿಮ ಓವರ್‌ನಲ್ಲಿ ಆ್ಘನ್‌ಗೆ 19 ರನ್‌ಗಳ ಅಗತ್ಯವಿತ್ತು.

    ಯುಎಇ: 7 ವಿಕೆಟ್‌ಗೆ 166 (ವಾಸೀಂ 53, ಆರ್ಯನ್ 63*, ತನಿಶ್ 11, ಅಕ್ಿ 13*, ಅಹ್ಮದ್ 15ಕ್ಕೆ2, ಒಮರ್ಜಾಯಿ 35ಕ್ಕೆ2).
    ಆ್ಘನ್: 19.5 ಓವರ್‌ಗಳಲ್ಲಿ 155 (ಹಜರತ್ ಉಲ್ಲಾ 36, ಗುರ್ಬಾಜ್ 21, ಜದ್ರಾನ್ 12, ನಬಿ 47, ಮುಹಮದ್ 26ಕ್ಕೆ4, ನಾಸೀರ್ 24ಕ್ಕೆ4). ಪಂದ್ಯಶ್ರೇಷ್ಠ: ಅಲಿ ನಾಸೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts