More

    ರಾಷ್ಟ್ರ ಧ್ವಜಕ್ಕೆ ಪಾಲಿಸ್ಟರ್ ಬಟ್ಟೆ ಬಳಕೆ; ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದ ಯು.ಟಿ.ಖಾದರ್

    ಮಂಗಳೂರು: ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಟ್ಟೆ ಬಳಕೆಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ತೀರ್ಮಾನ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ. ಪಾಲಿಸ್ಟರನ್ನು ವಿದೇಶದಿಂದ ಅಮದಿಗೆ ಅವಕಾಶ ಕೊಡಲಾಗಿದೆ. ಇದರಿಂದ ಚೀನಾಗೆ ಲಾಭವಾಗಲಿದೆ. ಆದ್ದರಿಂದ ಕೇಂದ್ರ ಇದನ್ನು ಮರುಪರಿಶೀಲಿಸಿ ಖಾದಿಗೆ ಮಹತ್ವ ಕೊಡಬೇಕು ಎಂದು ವಿಧಾನ ಸಭಾ ಪ್ರತಿಪಕ್ಷ ನಾಯಕ, ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
    ರಾಷ್ಟ್ರಧ್ವಜ ಎಂದರೆ ಅದು ಕೇಲವ ಬಟ್ಟೆಯಲ್ಲ, ಸ್ವಾತಂತ್ರೃ ಹೋರಾಟದ ತಾಯಿ ಬೇರು. ವಿದೇಶದಿಂದ ಪಾಲಿಸ್ಟರ್ ಬಟ್ಟೆ ತಂದು ಅದನ್ನು ಗುಡ್ಡೆ ಹಾಕುವ ಸಂದರ್ಭದಲ್ಲಿ ಗಾಂಧೀಜಿಯವರ ಸ್ವದೇಶಿ ಆಂದೋಲನದ ನೆನಪಾಗಿಲ್ಲವೇ? ಕೇಂದ್ರ ಸರ್ಕಾರ ಮಾತಿನಲ್ಲಿ ಮಾತ್ರ ಸ್ವದೇಶಿ ಎನ್ನುತ್ತಿದ್ದು, ಕೆಲಸದ ಅನುಷ್ಠಾನದಲ್ಲಿ ವಿದೇಶಿ ತಂತ್ರ ಅನುಸರಿಸುತ್ತಿದೆ. ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಈ ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ದತಿ ಇತ್ತು. ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವಕ್ಕೆ ಖಾದಿ ತೊಡುವ ಸಂದೇಶವನ್ನು ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಕೊಡಬೇಕಿತ್ತು. ಆಗ ಎಲ್ಲರೂ ಮೆಚ್ಚುತ್ತಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸೂಚನೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು. ಈಗ ಬಂದಿರುವ ಬಾಟಗಳಲ್ಲೂ ಸಮಸ್ಯೆ ಇದೆ. ದರವೂ ಒಂದೊಂದು ಕಡೆ ಒಂದೊಂದು ರೀತಿ ಇದೆ. ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯೂ ಆಗಿಲ್ಲ. ಸರ್ಕಾರ ಘೋಷಣೆ ಮತ್ತು ಪ್ರಚಾರ ಮಾಡುವ ಮೊದಲು ಅನುಷ್ಠಾನ ಹೇಗೆ ಎಂದು ಚಿಂತನೆ ನಡೆಸಲಿ. ಅತಿವೃಷ್ಠಿಯಿಂದ ಮನೆ ಕಳೆದುಕೊಂಡವರು ಎಲ್ಲಿ ಧ್ವಜ ಹಾರಿಸಬೇಕು. ಆದ್ದರಿಂದ ಅಮೃತ ಮಹೋತ್ಸವ ಕೊಡುಗೆಯಾಗಿ ಮನೆ, ನಿವೇಶನ ಇಲ್ಲದವರಿಗೆ ಅದನ್ನು ಕಲ್ಪಿಸುವ ಯೋಜನೆ ರೂಪಿಸಲಿ ಎಂದರು.
    ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮೊಹಮ್ಮದ್ ಮೋನು, ಈಶ್ವರ್ ಉಳ್ಳಾಲ್,ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts