More

    ಪರಸ್ಪರ ಸಮಾಧಾನಿಸಿಕೊಳ್ಳುತ್ತಿರುವ ಸಮಾನ ದುಃಖಿಗಳು!

    ಮೆಲ್ಬೋರ್ನ್​: ಮನುಷ್ಯರಲ್ಲಿ ಇರುವಂತೆ ಪ್ರಾಣಿಗಳಲ್ಲೂ ಮಾನವೀಯತೆ ಅಂಶ ಇದೆ ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಬೆಕ್ಕಿನ ಮರಿಗೆ ನಾಯಿ ಮೊಲೆಯೂಡಿಸುವುದು ಸೇರಿ ಹಲವು ಆಶ್ಚರ್ಯದಾಯಕ ಕಥನಗಳನ್ನು ಓದಿದ್ದೇವೆ, ವಿಡಿಯೋ ತುಣುಕುಗಳಲ್ಲಿ ನೋಡಿ ಆಸ್ವಾದಿಸಿದ್ದೇವೆ. ಆದರೆ, ದೂರದ ಆಸ್ಟ್ರೇಲಿಯಾದ ಕಡಲತಡಿಯ ಈ ದೃಶ್ಯ ತುಂಬಾ ವಿಶಿಷ್ಟ ಹಾಗೂ ಹೃದಯಸ್ಪರ್ಶಿಯಾಗಿದೆ.

    ಏಕೆ? ಏಕೆಂದರೆ ಇಲ್ಲಿ ಜತೆಗಾರನನ್ನು ಕಳೆದುಕೊಂಡು ಹೆಣ್ಣು ಪೆಂಗ್ವಿನ್​ಗಳೆರಡು ಪರಸ್ಪರ ಸಂತೈಸಿಕೊಳ್ಳುತ್ತಾ, ದುಃಖವನ್ನು ಮರೆಯಲು ಪ್ರಯತ್ನಿಸುತ್ತಿವೆ.

    ಇದನ್ನೂ ಓದಿ: VIDEO: ನೀವೂ ಒಮ್ಮೆ ಮನೆಯಲ್ಲಿ ಮಾಡಿನೋಡಿ ಈ ‘ಭಯಾನಕ ಚಹಾ’ವನ್ನು…!

    ಹೌದು, ಇಲ್ಲಿ ಒಂದು ಹಿರಿಯ ಹೆಣ್ಣು ಪೆಂಗ್ವಿನ್​ ಮತ್ತು ಒಂದು ಕಿರಿಯ ಹೆಣ್ಣು ಪೆಂಗ್ವಿನ್​ಗಳು ಇತ್ತೀಚೆಗೆ ತಮ್ಮ ತಮ್ಮ ಜತೆಗಾರನನ್ನು ಕಳೆದುಕೊಂಡಿವೆ. ಹಿರಿಯ ಪೆಂಗ್ವಿನ್​ ಕಡಲ ತಡಿಯಲ್ಲಿನ ಬಂಡೆಯ ಮೇಲೆ ಕೂತು, ಮೆಲ್ಬೋರ್ನ್ ನಗರದಲ್ಲಿ ರಾತ್ರಿ ವೇಳೆ ಬೆಳಗುವ ದೀಪಗಳ ಸಾಲನ್ನು ನೋಡುತ್ತಾ ತನ್ನ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿತ್ತು.

    ಇದನ್ನು ಗಮನಿಸಿದ ಕಿರಿಯ ಹೆಣ್ಣು ಪೆಂಗ್ವಿನ್​ ಕೂಡ ಅದರ ಪಕ್ಕ ಹೋಗಿ ಕುಳಿತು, ಹಿರಿಯ ಹೆಣ್ಣು ಪೆಂಗ್ವಿನ್​ನ ಬೆನ್ನಮೇಲೆ ತನ್ನ ಬಲರೆಕ್ಕೆಯನ್ನು ಹರವಿ ಸಂತೈಸಲಾರಂಭಿಸಿತು. ಇದರಿಂದ ಹಿರಿಯ ಹೆಣ್ಣು ಪೆಂಗ್ವಿನ್​ಗೆ ಸ್ವಲ್ಪ ಸಮಾಧಾನವಾಯಿತು ಎನಿಸುತ್ತದೆ. ಪ್ರೀತಿಯಿಂದ ಕಿರಿಯ ಪೆಂಗ್ವಿನ್​ ಮುಖದ ಮೇಲೆ ತನ್ನ ಕೊಕ್ಕಿನಿಂದ ತಿವಿಯುತ್ತಾ, ಆಗಾಗ್ಗೆ ಸಂತೋಷದ ಧ್ವನಿ ಹೊರಡಿಸುತ್ತಾ, ಅದನ್ನೂ ಸಂತೈಸ ತೊಡಗಿತು.

    ಈ ಪ್ರದೇಶದಲ್ಲಿ ಪೆಂಗ್ವಿನ್​ಗಳ ದೊಡ್ಡ ಗುಂಪೇ ಇದೆ. ಈ ಎರಡು ಪೆಂಗ್ವಿನ್​ಗಳ ಪ್ರೀತಿ, ಬಾಂಧವ್ಯ, ಮಾನವೀಯತೆಯ ಗುಣ ಆ ಎಲ್ಲ ಪೆಂಗ್ವಿನ್​ಗಳಿಗೂ ಮಾದರಿಯಾಗಿ ಮಾರ್ಪಟ್ಟಿದೆ. ಹಾಗಾಗಿಯೇ ಈ ಎರಡು ಪೆಂಗ್ವಿನ್​ಗಳನ್ನು ನೋಡಿ ಅವುಗಳು ಕೂಡ ಆಗಾಗ ಸಂತಸದ ಧ್ವನಿ ಹೊರಡಿಸುತ್ತವೆ ಎಂದು 2019ರ ವಿಶ್ವ ಪೆಂಗ್ವಿನ್​ ದಿನದಂದು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು, ಛಾಯಾಚಿತ್ರವನ್ನು ತೆಗೆದುಕೊಂಡಿರುವ ಟೊಬಿಯಾಸ್​ ಬೌಮ್ಗೇಟ್ನರ್​ ಎಂಬುವರು ಹೇಳಿದ್ದಾರೆ.

    ಇದನ್ನೂ ಓದಿ: ಪಂಚಚುಲಿ ಹಿಮ ಪರ್ವತದ ಶ್ರೇಣಿಯಲ್ಲಿರುವ ವಿಶ್ವದ ದೊಡ್ಡ ಉದ್ಯಾನ ಯಾವುದು?

    ಇದೀಗ ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಇಡೀ ವಿಶ್ವವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪರಸ್ಪರ ಸಾಂತ್ವನ ಹೇಳಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸಲು ತಾವು ಈ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಮತ್ತು ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ.

    ಪೆಂಗ್ವಿನ್​ಗಳ ಔದಾರ್ಯಕ್ಕೆ ಮನಸೋತಿರುವ ವ್ಯಕ್ತಿಯೊಬ್ಬರು, ನಿಮ್ಮ ಈ ಸೂಕ್ಷ್ಮಗ್ರಹಿಕೆ ಮತ್ತು ಸಂವೇದನೆಗಾಗಿ ಧನ್ಯವಾದಗಳು. ಪೆಂಗ್ವಿನ್​ಗಳ ಬಗ್ಗೆ ನೀವು ತೋರಿರುವ ಹೃದಯವಂತಿಕೆ ಮತ್ತು ಆಪ್ತತೆಯನ್ನು ಕರೊನಾ ಲಾಕ್​ಡೌನ್​ ಅವಧಿಯಲ್ಲಿ ಪ್ರತಿಯೊಬ್ಬರಲ್ಲೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts