More

    ಪಂಚಚುಲಿ ಹಿಮ ಪರ್ವತದ ಶ್ರೇಣಿಯಲ್ಲಿರುವ ವಿಶ್ವದ ದೊಡ್ಡ ಉದ್ಯಾನ ಯಾವುದು?

    ಉತ್ತರಾಖಂಡ ಪಂಚಚುಲಿ ಹಿಮ ಪರ್ವತ ಶ್ರೇಣಿಯಲ್ಲಿರುವ ಟುಲಿಪ್​ ಉದ್ಯಾನದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ವೈರಲ್​ ಆಗಿದೆ.

    ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದ್ಯಾನವನದ ಮನಮೋಹಕ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಚಿತ್ರ ಟ್ವಿಟರ್​ನಲ್ಲಿ ಅಪ್​ಲೋಡ್​ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಕೆಲವರು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ ಲಂಡನ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ಟೆಕ್ಕಿ; 50ದಿನಗಳ ಬಳಿಕ ಊರಿಗೆ ಬರುತ್ತಿದೆ ಮೃತದೇಹ

    ಟುಲಿಪ್ ಉದ್ಯಾನ ಪಂಚಚುಲಿ ಶ್ರೇಣಿಗಳ ಹಿಮದ ಶಿಖರಗಳಿಂದ ಆವೃತ್ತವಾಗಿದೆ. ಟುಲಿಪ್​ ಉದ್ಯಾನವನ ನನ್ನ ಕನಸಿನ ಯೋಜನೆ. ಮನ್ಸಿಯಾರಿ ಗ್ರಾಮದಲ್ಲಿ ನಿರ್ಮಾಣವಾಗಿರುವ ವಿಶ್ವದ ದೊಡ್ಡ ಟುಲಿಪ್​ ಉದ್ಯಾನವನವಾಗಿದೆ. ಈ ಚಿತ್ರವನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಈ ಉದ್ಯಾನವನ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

    ಸಿಎಂ ಹಂಚಿಕೊಂಡಿರುವ ಪೋಟೋಗೆ ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಾಲೆಂಡ್​ನಲ್ಲಿರುವ ಟುಲಿಪ್​ ಉದ್ಯಾನವನ ನೋಡಿದ್ದೇನೆ. ಆಗಲೇ ಭಾರತದಲ್ಲಿ ಇದನ್ನು ಏಕೆ ಮಾಡಬಾರದು ಎಂದು ಯೋಚಿಸಿದ್ದೆ. ನೀವು ಉದ್ಯಾನವನ ನಿರ್ಮಾಣ ಮಾಡಿದ್ದೀರಿ. ಲಾಕ್​ಡೌನ್​ ಮುಗಿದ ನಂತರ ಉದ್ಯಾನವನಕ್ಕೆ ಭೇಟಿ ನೀಡುತ್ತೇನೆ ಎಂದು ನೆಟ್ಟಿಗೊರಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ರೀತಿ ನೂರಾರು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

    ಕರೊನಾ ರೋಗಿಗಳಿಗೆ ಹೊಸ ಮಾರ್ಗಸೂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts