More

    ಎರಡು ರೈಲುಗಳ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 32 ಜನ ಸಾವು

    ಕೈರೊ: ಎರಡು ರೈಲುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ 32 ಜನ ಮೃತಪಟ್ಟು, 66 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಜಿಪ್ತ್​ ದೇಶದಲ್ಲಿ ಇಂದು ಸಂಭವಿಸಿದೆ.

    ಈಜಿಪ್ತ್​ ರಾಜಧಾನಿ ಕೈರೊದಿಂದ ದಕ್ಷಿಣಕ್ಕಿರುವ ಸೊಹಾಗ್ ವಲಯದ ತಹ್ತಾ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸುಮಾರು 12 ಕ್ಕೂ ಹೆಚ್ಚು ಅಂಬ್ಯುಲೆನ್ಸ್​ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ತಹ್ತಾದಿಂದ ಕೈರೊಕ್ಕೆ ತೆರಳುತ್ತಿದ್ದ ಎಕ್ಸಪ್ರೆಸ್ ರೈಲು ಹಾಗೂ ಕೈರೊಂದಿದ ತಹ್ತಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಮುಖಾಮುಖಿ ಡಿಕ್ಕಿ ಸಂಭವಿಸಿ ಅಪಘಾತ ಉಂಟಾಗಿದೆ. ರೈಲು ಹಳಿಯ ಅಸಮರ್ಪಕ ನಿರ್ವಹಣೆಯೇ ಘಟನೆಗೆ ಕಾರಣ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

    2002 ರಲ್ಲಿ ಕೈರೊದಲ್ಲಿ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ 373 ಜನ ಮೃತಪಟ್ಟಿದ್ದ ನಂತರ ಇದು ಈಜಿಪ್ತ್​ನಲ್ಲಿ ಸಂಭವಿಸಿದ ಅತಿ ದೊಡ್ಡ ಅಪಘಾತವಾಗಿದೆ.

    ಕಿರಿದಾಗುತ್ತಿರುವ ಜನನಾಂಗ: ಪುರುಷರ ಕಾಲೆಳೆದ ನಟಿ ದಿಯಾ ಮಿರ್ಜಾ!

    ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಯಿತು ಎಫ್​ಐಆರ್: ಸಾಹುಕಾರ್ ಬಂಧನವಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts