More

    ನೀವು ಬೈಕ್​ ಫುಲ್​ ಟ್ಯಾಂಕ್​ ಮಾಡಿಸಿದ್ದರಂತೂ ಇವರಿಗೆ ಫುಲ್​ ಖುಷಿ.. ಮಾಡಿರದಿದ್ದರೆ ಕೂಡ; ಕೊನೆಗೂ ಸಿಕ್ಕಿಬಿದ್ದರು..

    ಬೆಂಗಳೂರು: ನೀವು ಬೈಕ್ ಫುಲ್​ ಮಾಡಿಸಿದ್ದರಂತೂ ಇವರಿಗೆ ಫುಲ್​ ಖುಷಿ, ಮಾಡಿರದಿದ್ದರೆ ಕೂಡ ಇವರಿಗೆ ಖುಷಿಯೇ. ಇವರು ಬೈಕ್​ನಲ್ಲಿ ಪೆಟ್ರೋಲ್ ಜಾಸ್ತಿ ಇದ್ದರೆ ಮನಸೋ ಇಚ್ಛೆ ಓಡಾಡಿ ಖಾಲಿಯಾದಲ್ಲಿ ಬೈಕ್​ ನಿಲ್ಲಿಸಿ ಹೋಗುತ್ತಾರೆ. ಇನ್ನು ಒಳ್ಳೆಯ ಬೈಕ್​ ಆಗಿದ್ದರೆ ಅದನ್ನು ಮಾರಾಟ ಮಾಡಿ ಬಿಡುತ್ತಿದ್ದರು. ಕೊನೆಗೂ ಇವರಿಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಹೌದು.. ಜಾಲಿ ರೈಡ್​ ಹಾಗೂ ಜಾಲಿ ಲೈಫ್​ಗೆಂದೇ ಬೈಕ್​ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರು ರಸ್ತೆ ಮಾದವಾರದ ನವೀನ್ ಕುಮಾರ್ ಮತ್ತು ನಾಗಸಂದ್ರದ ಚನ್ನನಾಯಕನಹಳ್ಳಿಯ ಗಿರೀಶ್ ಅಲಿಯಾಸ್ ಸೀನ ಬಂಧಿತರು. ಇವರಿಂದ ವಿವಿಧ ಕಂಪನಿಯ 2.25 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

    ಇದನ್ನೂ ಓದಿ: ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!? 

    ಇವರಿಬ್ಬರು ರಾಜಾಜಿನಗರದ ನವರಂಗ್ ವೃತ್ತದ ಬಳಿ ವಾಹನ ಕಳವಿಗೆ ಸಜ್ಜಾಗಿದ್ದಾಗ ಗುಮಾನಿ ಮೇರೆಗೆ ಪಿಎಸ್‌ಐ ಲತಾ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಿರೀಶ್ ಮತ್ತು ನವೀನ್ ಗೆಳೆಯರಾಗಿದ್ದು, ಮೋಜಿನ ಜೀವನಕ್ಕೆ ಹಣ ಸಂಪಾದನೆಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ವರ್ಷ ಗಿರೀಶ್‌ನನ್ನು ವಾಹನ ಕಳವು ಪ್ರಕರಣದಲ್ಲಿ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರಿಸಿದ್ದ.

    ಕಳವು ಮಾಡಿದ ವಾಹನಗಳನ್ನು ಜಾಲಿ ರೈಡಿಗೆ ಬಳಸಿ ಇಂಧನ ಖಾಲಿಯಾದ ಮೇಲೆ ಬಿಟ್ಟು ಹೋಗುವುದು ಹಾಗೂ ಕೆಲವು ವಾಹನಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಬಂಧನದಿಂದ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಹೆಂಡತಿ ಜೀನ್ಸ್​ ತೊಡುವುದಿಲ್ಲ, ಡ್ಯಾನ್ಸ್​ ಮಾಡುವುದಿಲ್ಲವೆಂದು ತಲಾಖ್​ ನೀಡಿದ ಗಂಡ! ಮಾವನ ಮನೆಗೆ ಬಂದು ಬೆಂಕಿ ಹಚ್ಚಿಕೊಂಡ!

    ಮುಸ್ಲಿಂ ಯುವಕನಿಂದ ಮೊದಲ ಕ್ರಿಸ್​ಮಸ್​ ವೈರಲ್​- ಟ್ವಿಟರ್​ನಲ್ಲಿ ಶ್ಲಾಘನೆಗಳ ಮಹಾಪೂರ

    ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇವೆ ಫೈರ್ ಇಂಜಿನಿಯರ್ ಹುದ್ದೆಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts