More

    ಡೆಡ್ಲಿ ಕೊರೊನಾ ವೈರಸ್​ ತಗುಲಿರುವ ಶಂಕೆಯಿಂದ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದ ಇಬ್ಬರು ಸೇಫ್​; ಇನ್ನೋರ್ವನ ರಕ್ತದ ಮಾದರಿ ಪುಣೆಯ ಎನ್​ಐವಿಗೆ

    ಮುಂಬೈ: ಕೊರೊನಾ ವೈರಸ್​ ತಗುಲಿರುವ ಶಂಕೆಯಲ್ಲಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಮೂವರಲ್ಲಿ ಇಬ್ಬರ ವೈದ್ಯಕೀಯ ವರದಿ ಬಂದಿದೆ. ಈ ಇಬ್ಬರಿಗೂ ಕೊರೊನಾ ವೈರಸ್​ ಸೋಂಕು ತಗುಲಿಲ್ಲ ಎಂದು ವರದಿಯಿಂದ ಗೊತ್ತಾಗಿದೆ. ಆದರೆ ಅವರಿಬ್ಬರ ಆರೋಗ್ಯದ ಮೇಲೆ ಇನ್ನೂ ಕೆಲವು ದಿನಗಳ ಕಾಲ ನಿಗಾ ವಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

    ಹಾಗೇ ಶುಕ್ರವಾರ ಅಡ್ಮಿಟ್ ಆಗಿರುವ ಓರ್ವನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​​ ವೈರಾಲಜಿ ಕೇಂದ್ರಕ್ಕೆ ಕಳಿಸಲಾಗಿದ್ದು ಇನ್ನೂ ರಿಪೋರ್ಟ್​ ಬಂದಿಲ್ಲ.

    ಸದ್ಯ ಕೊರೊನಾ ವೈರಸ್​ ನೆಗೆಟಿವ್​ ಎಂದು ವರದಿ ಬಂದಿರುವ ಇಬ್ಬರನ್ನೂ ಬೃಹನ್ಮುಂಬೈ ಕಸ್ತೂರ ಬಾ ಮುನ್ಸಿಪಲ್​ ಕಾರ್ಪೋರೇಷನ್​ನ ಕಸ್ತೂರ್​ ಬಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಅಬ್ಸರ್ವೇಶನ್​ನಲ್ಲಿ ಇಡಲಾಗಿದೆ. ಅವರನ್ನು ಡಿಸ್​ಚಾರ್ಜ್​ ಮಾಡುವ ಬಗ್ಗೆ ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೇ ಮೂರನೇ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫರ್​ ವೈರಾಲಜಿ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಮುಂಬೈ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಕೊರೊನಾ ಭೀತಿಯಿಂದ ಪಾರಾಗಿರುವ ಇಬ್ಬರು ಚೀನಾಕ್ಕೆ ಪ್ರವಾಸ ಹೋಗಿ ಬಂದಿದ್ದರು. ಅವರು ಜ.23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೇ ಇನ್ನೋರ್ವ ವ್ಯಕ್ತಿ ಹಾಂಗ್​ಕಾಂಗ್​ನಿಂದ ಬಂದು ನಿನ್ನೆ ಅಡ್ಮಿಟ್​ ಆಗಿದ್ದರು.
    ಕೊರೊನಾ ವೈರಸ್​ ಪತ್ತೆಹಚ್ಚಲು ಜನವರಿ 19ರಿಂದ ಜ.24ರವರೆಗೆ ಮುಂಬೈನ ಛತ್ರಪತಿ ಶಿವಾಜಿ ವಿಮಾನನಿಲ್ದಾಣದಲ್ಲಿ ಒಟ್ಟು 2056 ಪ್ರಯಾಣಿಕರನ್ನು ಥರ್ಮಲ್​ ಸ್ಕ್ರೀನಿಂಗ್​ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts