More

    ಬೆಂಕಿ ನಂದಿಸಲು ಬಂದಿದೆ ಹೊಸ ರೋಬಾಟ್! ಏನಿದರ ವಿಶೇಷತೆ?

    ಮಂಗಳೂರು: ಆಳ್ವಾಸ್ ಕಾಲೇಜ್​​ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಬೆಂಕಿ ನಂದಿಸುವ ರೋಬಾಟ್ ಸದ್ದು ಮಾಡುತ್ತಿದೆ.

    ಮೂಡಬಿದರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಜೇಷ್ಠ ಮತ್ತು ಮನೀಶ್ ರೂಪಿಸಿರುವ ಬೆಂಕಿ ನಂದಿಸುವ ರೋಬಾಟ್ ವಿನ್ಯಾಸ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ.

    ರೋಬಾಟ್​ನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದೆ. ಬೆಂಕಿ ಬಿದ್ದ ಸ್ಥಳಕ್ಕೆ ಈ ರೋಬಾಟ್ ತಕ್ಷಣವೇ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತದೆ. ರೋಬಾಟ್​​ನಲ್ಲಿ ಅಳವಡಿಸಲಾಗಿರುವ ಫ್ಲೇಮ್​ ಸೆನ್ಸಾರ್ ಮೂಲಕ ಘಟನಾ ಸ್ಥಳವನ್ನು ಪತ್ತೆ ಹಚ್ಚಿ, ಆರ್ಡಿಯೋನೋ ಯು.ಎನ್.ಒ ಬೋರ್ಡ್​ ಎಲ್ಟೋನೈಂಟಿ ಮೋಟಾರ್‌ಗೆ ಸಂದೇಶ ಕಳುಹಿಸುತ್ತದೆ. ​​ಈ ವೇಳೆ ಅಳವಡಿಸಲಾಗಿರುವ ನೀರಿನ ಕಂಟೈನರ್​ನಿಂದ ನೀರನ್ನು ಹೊತ್ತು ಸ್ವಯಂಚಾಲಿತವಾಗಿ ಮುಂದೆ ಸಾಗುತ್ತಾ ಬೆಂಕಿ ನಂದಿಸುವ ಕೆಲಸ ಮಾಡುತ್ತದೆ.

    ಬೆಂಕಿ ನಂದಿಸಲು ಬಂದಿದೆ ಹೊಸ ರೋಬಾಟ್! ಏನಿದರ ವಿಶೇಷತೆ?

    ಪ್ರದರ್ಶನಕ್ಕಿಡಲಾಗಿರುವ ಬೆಂಕಿ ನಂದಿಸುವ ರೋಬಾಟ್​ನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಪಡಿಸಬೇಕಾಗಿದೆ. ಇದರಿಂದ ಕೈಗಾರಿಕಾ ಪ್ರದೇಶ, ಸಾರ್ವಜನಿಕ ಪ್ರದೇಶ ಸೇರಿದಂತೆ ವಿವಿಧೆಡೆ ಬೆಂಕಿ ಅವಘಡ ಸಂಭವಿಸಿದಾಗ ತತ್‌ಕ್ಷಣದಲ್ಲಿ ಸುಲಭವಾಗಿ ಬೆಂಕಿ ನಂದಿಸಬಹುದು ಎನ್ನುತ್ತಾರೆ ಈ ರೋಬಾಟ್ ವಿನ್ಯಾಸ ರೂಪಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು.

    ಈ ಬೆಂಕಿ ನಂದಿಸುವ ರೋಬಾಟ್ ತಯಾರಿಸಲು ಆರ್ಡಿಯೋನೋ ಯು.ಎನ್.ಒ ಬೋರ್ಡ್, ಎಲ್.293 ಮೋಟಾರ್ ಡ್ರೈವ್, ಸರ್ವೊ ಮೋಟಾರ್, ಬಯೋ ಮೋಟಾರ್, ಸಣ್ಣ ನೀರಿನ ಪಂಪ್, ಕಂಟೈನರ್, ಬ್ರೆಡ್ ಬೋರ್ಡ್, ಫ್ಲೇಮ್ ಸೆನ್ಸಾರ್, 4 ಚಕ್ರಗಳು, ಜಂಪ್ ಕೇಬಲ್ಸ್, 3.7 ವೋಲ್ಟ್ ಲಿ-ಲಿಯೋನ್ ಮತ್ತು ಬ್ಯಾಟರಿ ಹೋಲ್ಡರ್‌ಗಳನ್ನು ಬಳಸಲಾಗಿದೆ.

    ಚಿತ್ರ ಮತ್ತು ವರದಿ: ಶಶಿಧರ ನಾಯ್ಕ ಎ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ
    ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts