More

    ಪುರಾತನ ಆಭರಣ ಕೊಡ್ತೀವಿ ಅಂತ ಹೇಳಿ 35 ಲಕ್ಷ ರೂ. ತಗೊಂಡ್ರು; ಆದ್ರೆ ಕೊಟ್ಟಿದ್ದೇ ಬೇರೆ!

    ಬೆಂಗಳೂರು: ಕಡಿಮೆ ಬೆಲೆಗೆ ಪುರಾತನ ಆಭರಣ ಕೊಡುವ ಆಮಿಷವೊಡ್ಡಿ ಬಟ್ಟೆ ವ್ಯಾಪಾರಿಯಿಂದ 35 ಲಕ್ಷ ರೂ. ಪಡೆದ ವಂಚಕರು ಕೊನೆಗೆ ಬೇರೆಯದನ್ನೇ ಕೊಟ್ಟು ಯಾಮಾರಿಸಿದ್ದಾರೆ. ರಾಮಮೂರ್ತಿನಗರದ ಬಟ್ಟೆ ವ್ಯಾಪಾರಿ ಪೃಥ್ವಿ ಸಿಂಗ್ (44) ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ಅರ್ಜುನ್ ಮತ್ತು ಮೋಹನ್ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿ ರಾಮಮೂರ್ತಿನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಕೆ. ಚನ್ನಸಂದ್ರದಲ್ಲಿ ಬಟ್ಟೆ ಅಂಗಡಿ ಹೊಂದಿರುವ ಪೃಥ್ವಿ ಸಿಂಗ್ ಅವರನ್ನು ರಾಜಸ್ಥಾನ ಮೂಲದವರು ಎಂದು ಇಬ್ಬರು ಅಪರಿಚಿತರು ಪರಿಚಯ ಮಾಡಿಕೊಂಡಿದ್ದರು. ಪುರಾತನ ಕಾಲದ 1 ಕೆಜಿ ತೂಕದ ಚಿನ್ನದ ಸರವಿದೆ. ಅದರ ಅಂದಾಜು ಬೆಲೆ 45 ರಿಂದ 50 ಲಕ್ಷ ರೂಪಾಯಿ. ಆದರೆ, ತುರ್ತಾಗಿ ಹಣ ಬೇಕಿರುವುದರಿಂದ 35 ಲಕ್ಷ ರೂ. ಕೊಟ್ಟರೆ ಕೊಡುವುದಾಗಿ ಹೇಳಿದ್ದಾರೆ. ಪೃಥ್ವಿ ಸಿಂಗ್ ಖರೀದಿ ಮಾಡುವುದಿಲ್ಲ ಎಂದರೂ ಒತ್ತಾಯ ಮಾಡಿ ಆರೋಪಿಗಳು ಒಪ್ಪಿಸಿದ್ದರು. ಕಡಿಮೆ ಬೆಲೆಗೆ ಚಿನ್ನದ ಸರ ದೊರೆಯುತ್ತದೆ ಎಂಬ ಆಸೆಯಿಂದ ವ್ಯಾಪಾರಿ ಸಹ ಹಣ ಹೊಂದಿಸಿದ್ದರು.

    ಜ.13ರ ಸಂಜೆ 4 ಗಂಟೆಯಲ್ಲಿ ಅರ್ಜುನ್ ಮತ್ತು ಮೋಹನ್ ಅವರಿಗೆ 35 ಲಕ್ಷ ರೂ. ಕೊಟ್ಟು ಚಿನ್ನದ ಸರವನ್ನು ತೆಗೆದುಕೊಂಡಿದ್ದರು. ಹಣ ಪಡೆದ ಕೂಡಲೇ ಆರೋಪಿಗಳು ತೆರಳಿದ್ದರು. ಅನುಮಾನ ಬಂದು ಸರವನ್ನು ಪರೀಕ್ಷೆಗೆ ಒಳಪಡಿಸಿದಾಗ ನಕಲಿ ಚಿನ್ನ ಎಂಬುದು ಗೊತ್ತಾಗಿದೆ. ಹಣ ಪಡೆದ ಅಪರಿಚಿತರ ಮೊಬೈಲ್‌ಫೋನ್​ಗೆ ಕರೆ ಮಾಡಿದಾಗ ಸಂಪರ್ಕ ಕಡಿತವಾಗಿತ್ತು. ದಿಕ್ಕು ತೋಚದೆ ಠಾಣೆಗೆ ಬಂದು ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts