More

    ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ

    ಬೆಂಗಳೂರು: ಪವರ್​ಸ್ಟಾರ್ ಪುನೀತ್​ ರಾಜಕುಮಾರ್​ ಅವರಿಗೆ ಮರಣೋತ್ತರವಾಗಿ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್​ಸ್ಟಾರ್ ರಜನಿಕಾಂತ್, ನಟ ಜೂ.ಎನ್​ಟಿಆರ್ ಜತೆಯಾಗಿ ಪ್ರದಾನ ಮಾಡಿದರು. ಈ ಮೂಲಕ ರಾಜ್​ ಕುಟುಂಬ ಎರಡನೇ ಸಲ ಕರ್ನಾಟಕ ರತ್ನಕ್ಕೆ ಭಾಜನವಾದಂತಾಗಿದೆ.

    ಡಾ.ರಾಜಕುಮಾರ್ ಅವರಿಗೆ 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅದಾಗಿ 30ನೇ ವರ್ಷದಲ್ಲಿ ಪುತ್ರ ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಕರ್ನಾಟಕ ರತ್ನಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಮೂರು ದಶಕಗಳಲ್ಲಿ 2 ಕರ್ನಾಟಕ ರತ್ನಗಳಿಗೆ ಭಾಜನವಾದ ಹೆಗ್ಗಳಿಕೆ ಡಾ.ರಾಜ್ ಕುಟುಂಬದ್ದಾಗಿದೆ.

    ಮೂವತ್ತು ವರ್ಷಗಳ ಅಂತರದಲ್ಲಿ ತಮ್ಮ ಕುಟುಂಬ ಎರಡು ಕರ್ನಾಟಕ ರತ್ನಕ್ಕೆ ಪಾತ್ರವಾದ ಸಂಗತಿಯನ್ನು ಶಿವರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​ಕುಮಾರ್ ಇಬ್ಬರೂ ಇಂದು ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದರು.

    ಅಪ್ಪು ಪರವಾಗಿ ಕರ್ನಾಟಕ ರತ್ನ ಸ್ವೀಕರಿಸಿದ ಅಶ್ವಿನಿ: ವರುಣ ಸಿಂಚನದ ನಡುವೆ ಪ್ರಶಸ್ತಿ ಪ್ರದಾನ

     

    ಅಪ್ಪು ಬಗ್ಗೆ ಜಾಸ್ತಿ ಮಾತನಾಡುವುದಿದೆ ಎಂದು ರಜನಿಕಾಂತ್ ಹೇಳಿದ್ದಿಷ್ಟು..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts