More

    ಎರಡು ತಲೆ ಹಾವು ಮಾರಾಟ ಯತ್ನ: ಐವರು ಆರೋಪಿಗಳ ಬಂಧನ

    ಮೈಸೂರು: ಕೆಂಪುಮಣ್ಣು ಮುಕ್ಕ ಹಾವನ್ನು (ರೆಡ್‌ಸ್ಯಾಂಡ್ ಬೋವ) ಎರಡು ತಲೆಯ ಹಾವೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಶುಕ್ರವಾರ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

    ದಾವಣೆಗೆರೆ ಜಿಲ್ಲೆಯ ಹೊನ್ನಾಳಿಯ ಹೇಮಂತ್, ಬರ್ಮೆಗೌಡ, ಯೋಗೇಶ್ ಹಾಗೂ ಕೆ.ಆರ್.ನಗರದ ರವಿ ಮತ್ತು ದೊಡ್ಡಯ್ಯ ಬಂಧಿತರು. ಆರೋಪಿಗಳಿಂದ 5 ಮೊಬೈಲ್, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ರಿಂಗ್‌ರಸ್ತೆ ಜಂಕ್ಷನ್ ಬಳಿ ಹಾವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.

    ಆರೋಪಿಗಳು ನಗರಕ್ಕೆ ಆಗಮಿಸಿ ಮೂವರು ವ್ಯಕ್ತಿಗಳೊಂದಿಗೆ ಹಾವು ಮಾರಾಟ ಕುರಿತು ಮಾತುಕತೆ ನಡೆಸಿದ್ದಾರೆ. ಒಟ್ಟು 10 ಲಕ್ಷ ರೂ.ಗೆ ಹಾವನ್ನು ಮಾರಾಟ ಮಾಡುವ ಮಾತುಕತೆ ನಡೆಸಿದ್ದರು. ಆದರೆ, ಹಾವಿಗೆ ದುಬಾರಿ ದರ ನಿಗದಿ ಮಾಡಿದ್ದರಿಂದ ಯಾರು ಕೊಂಡುಕೊಳ್ಳಲು ಮುಂದಾಗಲಿಲ್ಲ. ಮತ್ತೆ ಕೆಲವು ಗಿರಾಕಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ವಿಚಾರ ತಿಳಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಅರಣ್ಯ ಸಂಚಾರಿ ದಳದ ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ವಿವೇಕ್, ಡಿಆರ್‌ಎಫ್‌ಓಗಳಾದ ಮೋಹನ್‌ಕುಮಾರ್, ಲಕ್ಷ್ಮೀಶ್, ಪ್ರಮೋದ್, ಸುಂದರ್, ಸಿಬ್ಬಂದಿ ಗೋವಿಂದ್, ಚನ್ನಬಸವಯ್ಯ, ರವಿಕುಮಾರ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts