More

    ಕೋವಿಡ್​- 19 ಲಾಕ್​ಡೌನ್​ ಮಾರ್ಗಸೂಚಿ ಉಲ್ಲಂಘನೆ: ಮಧುಮಕ್ಕಳ ಬಂಧನ

    ಭುವನೇಶ್ವರ್​: ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಬಾರದು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮದುವೆ ಕಾರ್ಯ ನಡೆಸುತ್ತಿದ್ದ ಆರೋಪದ ಮೇಲೆ ಮಧುಮಕ್ಕಳಿಬ್ಬರನ್ನು ಒಡಿಶಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಕಂದಮಲ್​ ಜಿಲ್ಲೆಯ ನೌಪಾಡ ಗ್ರಾಮದ ಪರಮೇಶ್ವರ್​ ಭುಕ್ತ ತಮ್ಮ ಮದುವೆಯ ಆರತಕ್ಷತೆಗೆ 60 ರಿಂದ 80 ಮಂದಿಗೆ ಆಹ್ವಾನಿಸಿದ್ದರು. ಇದೀಗ ಭುಕ್ತ ಬಂಧಿತರಾಗಿದ್ದಾರೆ. ಇನ್ನೊರ್ವ ಗೊಚ್ಚಪಡ ಪೊಲೀಸ್​ ಠಾಣಾ ವ್ಯಾಪ್ತಿಯ ಖಜರಿಗಾಂವ್​ ಗ್ರಾಮದ ಬುಡಕಟ್ಟು ಜನಾಂಗದ ವರ ಬಿಜು ಕನ್ಹಾರ್​ ಮದುವೆ ಮೆರವಣಿಗೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ.

    ಇಬ್ಬರ ವರರಲ್ಲದೆ, ಅಂಗಡಿ ಬಾಗಿಲು ಮುಚ್ಚದಿದ್ದಕ್ಕೆ ಕಂದಮಲ್​ ಜಿಲ್ಲೆಯಲ್ಲಿ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಭದ್ರಕ್​ ಜಿಲ್ಲೆಯಲ್ಲೂ 5 ಮಂದಿಯನ್ನು ಬಂಧಿಸಿದ್ದಾರೆ.

    ಲಾಕ್​ಡೌನ್​ ಮಾರ್ಗಸೂಚಿಯ ಪ್ರಕಾರ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡಸಂಹಿತೆ ಸೆಕ್ಷನ್​ 188 ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಅಲ್ಲದೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕ ಜೀವನ ತೊಂದರೆ ನೀಡಿದರೆ ಸೆಕ್ಷನ್​ 269ರ ಅಡಿಯಲ್ಲೂ ಕೇಸು ವಿಧಿಸಲಾಗುತ್ತದೆ. ಕ್ವಾರಂಟೈನ್​ ನಿಯಮ ಉಲ್ಲಂಘಿಸಿದರೆ ಸೆಕ್ಷನ್​ 271ರ ಅಡಿಯಲ್ಲಿ ಪ್ರಕರಣ ದಾಖಲಾಗುವುದು. ಇಂತಹ ಪ್ರಕರಣಗಳಿಗೆ 6 ತಿಂಗಳು ಸಜೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.

    ದೇಶದಲ್ಲಿ ಈವರೆಗೆ 470ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 10 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ಕರೊನಾ ವೈರಸ್​ ಆರಂಭವಷ್ಟೇ, ಭವಿಷ್ಯದ ಬಗ್ಗೆ ವಿಜ್ಞಾನಿಗಳ ಖಡಕ್​ ಎಚ್ಚರಿಕೆ: ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ನಾಶ ಖಂಡಿತ

    ನಿಮ್ಮಿಂದ ದೇಶವೇ ಬಲಿಯಾಗುವಂತೆ ಮಾಡದಿರಿ, ನಾಗರಿಕರಂತೆ ವರ್ತಿಸಿ ಎಂದು ನಟ ದರ್ಶನ್​ ಹೇಳಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts