More

    ಮನೆಯೊಂದರ ಮುಂದೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!

    ಮೆಕ್ಸಿಕೋ: ಮನೆಯೊಂದರ ಮುಂದೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್ ಅನ್ನು ಎಚ್ಚರಿಕೆ ಕರೆಯೊಂದರೆ ಮೇರೆಗೆ ಸ್ಥಳಕ್ಕೆ ಆಗಮಿಸಿ ತೆರೆದು ನೋಡಿದ ಅಮೆರಿಕದ ಮೆಕ್ಸಿಕೋ ನಗರ ಪೊಲೀಸರಿಗೆ ಆಘಾತವೊಂದು ಕಾದಿತ್ತು.

    ಮನೆಯೊಂದರ ಮುಂದೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!
    ಅಲೆಸ್ಸಂಡ್ರೋ ಕೊಲೆಯಾದ ಬಾಲಕ

    ಸೂಟ್​ಕೇಸ್​ನಲ್ಲಿ 14 ವರ್ಷದ ಬಾಲಕನ ಕತ್ತರಿಸಿ ತುಂಡು ತುಂಡು ಮಾಡಿದ ಶವ ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಕೊಲೆ ಎಂಬುದು ಖಚಿತವಾಗಿದೆ. ಬಾಲಕನನ್ನು ಅಪಹರಿಸಿದ್ದ ದುಷ್ಕರ್ಮಿಗಳು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಬಾಲಕನ ಪಾಲಕರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕೋಪಗೊಂಡ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.

    ಇನ್ನು ಪ್ರಕರಣ ಸಂಬಂಧ 15 ವರ್ಷದ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ. ಕಾರಣ ಶವವಿದ್ದ ಸೂಟ್​ಕೇಸ್​​ ತಂದಿಟ್ಟಿದ್ದೇ ಅವರು. ಸೂಟ್​ಕೇಸ್​ ತಂದಿಟ್ಟ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿರುವುದರ ಆಧಾರದ ಮೇಲೆ ಬಂಧಿಸಲಾಗಿದೆ.

    ಇದನ್ನೂ ಓದಿ: ರವಿ ಬೆಳೆಗೆರೆ ವೃತ್ತಿ ಬದುಕಿನಲ್ಲಿ ಎಷ್ಟು ಅಪಾಯಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!

    ಕೊಲೆಯಾದ ಬಾಲಕನನ್ನು ಅಲೆಸ್ಸಂಡ್ರೋ ಎಂದು ಗುರುತಿಸಲಾಗಿದೆ. ಜೋಸ್​ ರೊಡ್ರಿಗೋ ಮತ್ತು ದಾರ್ವಿನ್​ ಅಜೀಲ್ ಬಂಧಿತ ಬಾಲಕರು. ಕಳೆದ ಬುಧವಾರ ಮೆಕ್ಸಿಕನ್​ ಕ್ಯಾಪಿಟಲ್​ ಸಿ5 ಸ್ಟ್ರೀಟ್​ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕರಿಬ್ಬರು ಸೂಟ್​ಕೇಸ್​ ಎಳೆಯಲು ಹೋರಾಟ ನಡೆಸುತ್ತಿದ್ದ ದೃಶ್ಯ ದಾಖಲಾಗಿತ್ತು. ​

    ಬಾಲಕರು ನಿರ್ಜನ ಮನೆಯೊಂದರ ಮುಂದೆ ಸೂಟ್​ಕೇಸ್​ ಇಟ್ಟು ಪರಾರಿಯಾಗಿದ್ದರು. ಅದನ್ನು ನೋಡಿದ ಸಿಸಿಟಿವಿ ನಿರ್ವಹಣಾ ಘಟಕವು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಏರಿಯಾದಲ್ಲಿ ಗಸ್ತುನಲ್ಲಿದ್ದ ಪೊಲೀಸರು ಸೂಟ್​ಕೇಸ್​ ತೆರೆದಾಗ ಅಲೆಸ್ಸಂಡ್ರೋ ಶವ ಪತ್ತೆಯಾಗಿತ್ತು. ಬಳಿಕ ಸೂಟ್​ಕೇಸ್​ ಇಟ್ಟು ಹೋದ ಬಾಲಕರಿಗಾಗಿ ಶೋಧ ಕಾರ್ಯ ನಡೆಸಿದ ಪೊಲೀಸರು ಬಹುಬೇಗನೇ ಅವರನ್ನು ಬಂಧಿಸಿದರು. ಈ ಘಟನೆ ಬುಧವಾರ ನಸುಕಿನ ಜಾವ ಸ್ಥಳೀಯ ಕಾಲಮಾನ 3 ಗಂಟೆ ಸಮಯದಲ್ಲಿ ನಡೆದಿತ್ತು.

    ಪ್ರಕರಣಕ್ಕೆ ರೋಚಕ ತಿರುವು
    ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ ಅಲೆಸ್ಸಂಡ್ರೋನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇದೀಗ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ಜಾರಿಯಲ್ಲಿದೆ. ಇದರ ನಡುವೆ ಮೆಕ್ಸಿಕನ್​ ಮಾಧ್ಯಮ ವರದಿಯ ಪ್ರಕಾರ ಬಂಧಿತ ಬಾಲಕರಾದ ಜೋಸ್​ ರೊಡ್ರಿಗೋ ಮತ್ತು ದಾರ್ವಿನ್​ ಅಜೀಲ್ ತಪ್ಪೊಪ್ಪಿಕೊಂಡಿದ್ದಾರೆ. ನಾವು ಕೊಲೆ ಮಾಡಿಲ್ಲ. 97 ಡಾಲರ್​ (7,243 ರೂಪಾಯಿ) ಗೆ ಸೂಟ್​ಕೇಸ್​ ಅನ್ನು ಅವರು ಹೇಳಿದ ಜಾಗಕ್ಕೆ ತೆಗೆದುಕೊಂಡು ಹೋಗಿ ಇಟ್ಟೆವು. ಅದರಲ್ಲಿ ಏನಿದೆ ಎಂಬುದು ನಮಗೆ ತಿಳಿದಿರಲಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ ಕಾರ್ಮೋಡ!

    ಅಲೆಸ್ಸಂಡ್ರೋ ಮಂಗಳವಾರ ರಾತ್ರಿ 8 ಗಂಟೆಗೆ ಕಾಣೆಯಾಗುತ್ತಾನೆ. ಮೆಕ್ಸಿಕೋ ನಗರದ ವೆನುಸ್ಟಿಯಾನೊ ಕಾರಂಜ ಪಟ್ಟಣದಲ್ಲಿರುವ ಸಾಸರ್​ ಮೈದಾನದ ಬಳಿ ಕೆಲ ಶಸ್ತ್ರಸಜ್ಜಿತ ವ್ಯಕ್ತಿಗಳು ಎರಡು ಬೈಕ್​ಗಳಲ್ಲಿ ಅಲೆಸ್ಸಂಡ್ರೋನನ್ನು ಅಡ್ಡಗಟ್ಟಿ ಆತನನ್ನು ಬಲವಂತವಾಗಿ ಟ್ಯಾಕ್ಸಿ ಒಳಗೆ ಕೂರಿಸಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.

    ಅಪಹರಣಕಾರರು ಪಾಲಕರ ಬಳಿ ಮಗನ ಬಿಡುಗಡೆಗೆ 39,000 ಡಾಲರ್​ (29,12,406 ರೂ.)ಗೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಒಪ್ಪದಿದ್ದಾಗ ಅಪಹರಣಕಾರರು ದಿಢೀರನೇ ಫೋನ್​ ಕಾಲ್​ ಕಟ್​ ಮಾಡಿದ್ದರು. ಅದಾದ ಮಾರನೇ ದಿನ ಬಾಲಕ ಶವವಾಗಿ ಪತ್ತೆಯಾಗಿದ್ದಾರೆ. ಬಾಲಕರಿಬ್ಬರನ್ನು ಬಿಟ್ಟು ಈವರೆಗೂ ಯಾರನ್ನು ಬಂಧಿಸಲಾಗಿಲ್ಲ. ಪ್ರಕರಣ ದಾಖಲಿಸಿರುವ ಪೊಲೀಸರು ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ. ನಗರದ ಸಿಸಿಟಿವಿ ವಿಡಿಯೋಗಳನ್ನು ಜಾಲಾಡುತ್ತಿದ್ದಾರೆ. (ಏಜೆನ್ಸೀಸ್​)

    ಬದುಕಿಡೀ ಬರೆದ ರವಿ ಬೆಳಗೆರೆ; ಬರೆಯುತ್ತಲೇ ಬದುಕು ಮುಗಿಸಿದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts