More

    ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

    ನವದೆಹಲಿ : ಮೈಕ್ರೊಬ್ಲಾಗಿಂಗ್ ಮತ್ತು ಸೋಷಿಯಲ್​ ನೆಟ್​ವರ್ಕಿಂಗ್​ ಸೇವೆ ಒದಗಿಸುವ ಟ್ವಿಟರ್​, ಭಾರತದಲ್ಲಿ ತನಗಿದ್ದ ಕಾನೂನು ಸಂರಕ್ಷಣೆಯನ್ನು ಕಳೆದುಕೊಂಡಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸಿ ಸ್ಟಾಚುಟರಿ ಆಫೀಸರುಗಳನ್ನು ನೇಮಕ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಿಸುತ್ತಿದೆ ಎನ್ನಲಾಗಿದೆ.

    ಮೇ 25 ರಂದು ಜಾರಿಯಾದ ಸರ್ಕಾರಿ ಆದೇಶದ ಪ್ರಕಾರ ಭಾರತದಲ್ಲೇ ವಾಸಿಸುವ ಚೀಫ್​ ಕಂಪ್ಲೆಯನ್ಸ್​ ಆಫೀಸರ್, ನೋಡಲ್ ಆಫೀಸರ್ ಮತ್ತು ಗ್ರೀವೆನ್ಸ್ ಆಫೀಸರ್​ಅನ್ನು ಟ್ವಿಟರ್ ನೇಮಕ ಮಾಡಬೇಕಿತ್ತು. ಈ ತೆರನ ನಿರ್ದೇಶನವನ್ನು ಟ್ವಿಟರ್​ನೊಂದಿಗೆ ವಾಟ್ಸ್​ಆ್ಯಪ್, ಫೇಸ್​ಬುಕ್, ಗೂಗಲ್ ಮತ್ತಿತರ ಕಂಪೆನಿಗಳಿಗೂ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ ನೀಡಿತ್ತು.

    ಇದನ್ನೂ ಓದಿ: 5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

    ವಾಟ್ಸ್​​ಆ್ಯಪ್ ಮತ್ತು ಫೇಸ್​ಬುಕ್​ ಈಗಾಗಲೇ ಅಗತ್ಯ ಅಧಿಕಾರಿಗಳನ್ನು ನೇಮಕ ಮಾಡಿವೆಯಾದರೂ ಈವರೆಗೆ ಟ್ವಿಟರ್ ಆ ಕೆಲಸ ಮಾಡಿಲ್ಲ. ಬದಲಿಗೆ ಮಧ್ಯಂತರ ಚೀಫ್​ ಕಂಪ್ಲೈಯನ್ಸ್​ ಅಧಿಕಾರಿಯನ್ನು ಮಾತ್ರ ನೇಮಿಸಿರುವುದಾಗಿ ನಿನ್ನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್​ಗೆ ಈವರೆಗೆ ಲಭಿಸಿದ್ದ ‘ಇಂಟರ್​ಮೀಡಿಯರಿ’ ಸ್ಟೇಟಸ್ಸನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಏನಿದು ಕಾನೂನು ಸಂರಕ್ಷಣೆ ? : ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ‘ಇಂಟರ್​ಮೀಡಿಯರಿ’ ಸ್ಟೇಟಸ್​ ಇದ್ದರೆ, ಐಟಿ ಕಾಯ್ದೆಯ ಸೆಕ್ಷನ್ 79 ರಡಿ, ಮೂರನೇ ವ್ಯಕ್ತಿಗಳು ಪೋಸ್ಟ್​ ಮಾಡುವ ಡೇಟಾ ಬಗ್ಗೆ ಯಾವುದೇ ದಾಯಿತ್ವ ಇರುವುದಿಲ್ಲ. ಆದರೆ ಈ ಕಾನೂನು ಸಂರಕ್ಷಣೆ ಇಲ್ಲವೆಂದರೆ, ಈ ವೇದಿಕೆಯಲ್ಲಿ ಪ್ರಕಟವಾಗುವ ಯಾವುದಾದರೂ ಆಕ್ಷೇಪಾರ್ಹ ಮಾಹಿತಿಗಾಗಿ ಒಬ್ಬ ಪ್ರಕಾಶಕನಂತೆ ಟ್ವಿಟರ್ ನೇರವಾಗಿ ಹೊಣೆಯಾಗುತ್ತದೆ; ದೇಶದ ಯಾವುದೇ ಕಾನೂನು ಉಲ್ಲಂಘನೆಯಾದ ಪಕ್ಷದಲ್ಲಿ ಟ್ವಿಟರ್​ ಕಂಪೆನಿಯ ಮುಖ್ಯಸ್ಥ ಮತ್ತು ಸಿಬ್ಬಂದಿ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.

    ಇದನ್ನೂ ಓದಿ: ಭೂಮಿ ಖರೀದಿಯಲ್ಲಿ ಅಕ್ರಮವಾಗಿಲ್ಲ: ರಾಮಮಂದಿರ ಟ್ರಸ್ಟ್​ಗೆ ಜಮೀನು ಮಾರಿದ ಸುಲ್ತಾನ್​ ಅನ್ಸಾರಿ ಸ್ಪಷ್ಟ ನುಡಿ

    ಮೊದಲನೇ ಕೇಸ್ : ಟ್ವಿಟರ್​ ಈ ಕಾನೂನು ಸಂರಕ್ಷಣೆಯನ್ನು ಕಳೆದುಕೊಂಡಿರುವುದಕ್ಕೆ ಕುರುಹಾಗಿ, ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಿನ್ನೆ ಮೊದಲನೇ ಕ್ರಿಮಿನಲ್ ಕೇಸ್​ ದಾಖಲಾಗಿದೆ. ಟ್ವಿಟರ್​ ಬಳಕೆದಾರರೊಬ್ಬರು ಒಂದು ಹಲ್ಲೆಯ ಘಟನೆ ಬಗ್ಗೆ ಪೋಸ್ಟ್​ ಮಾಡಿರುವ ಕಂಟೆಂಟ್​ ಬಗ್ಗೆ ಈ ದೂರು ನೀಡಲಾಗಿದೆ. ಎಫ್​.ಐ.ಆರ್​.ನಲ್ಲಿ ‘ಜನರ ದಾರಿತಪ್ಪಿಸುವಂತಹ ಸಾಮಗ್ರಿ’ಯನ್ನು ತೆಗೆದುಹಾಕದಿರುವ ಆರೋಪವನ್ನು ಟ್ವಿಟರ್​ ಮೇಲೆ ಹೊರಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. (ಏಜೆನ್ಸೀಸ್)

    ಮಾಫಿಯಾದಿಂದ ಜೀವಕ್ಕೆ ಅಪಾಯವಿದೆ ಎಂದ ಪತ್ರಕರ್ತ ‘ಅಪಘಾತ’ದಲ್ಲಿ ಮೃತ!

    ಆಸ್ತಿಗಾಗಿ ತಂದೆತಾಯಿ ಕೊಲೆ ಮಾಡಿದ… ದರೋಡೆ ನಡೆದಿರುವಂತೆ ನಟಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts