More

    ಭಾರತದಲ್ಲಿರುವ ಶೇಕಡ 90 ಟ್ವಿಟರ್​ ನೌಕರರನ್ನು ಕಿತ್ತು ಹಾಕಿದ ಮಸ್ಕ್​!

    ನವದೆಹಲಿ: ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡಿದ್ದೇ ಮಾಡಿದ್ದು, ದಿನವೂ ಹೊಸ ಸುದ್ದಿ ಮಾಡುತ್ತಿದ್ದಾರೆ. ಒಮ್ಮೆ ಬ್ಲೂ ಟಿಕ್​ಗೆ ಹಣ ಪಡೆಯುವುದು, ಇನ್ನೊಮ್ಮೆ ಸಿಇಒ ವಜಾ ಹೀಗೆ ನಿರಂತರವಾಗಿ ಟ್ವಿಟರ್​ ಸುದ್ದಿಯಲ್ಲಿದೆ.

    ಈಗ ಭಾರತದಲ್ಲಿರುವ ಶೇಕಡ 90ರಷ್ಟು ಉದ್ಯೋಗಿಗಳನ್ನು ಮಸ್ಕ್​ ವಜಾ ಮಾಡುತ್ತಿದ್ದಾರೆ. ಇಡಿ ತಂಡಗಳನ್ನೇ ಕಿತ್ತು ಹಾಕುತ್ತಿರುವ ಕಾರಣ ಟ್ವಿಟರ್​ ಯಾವ ಕಡೆ ಸಾಗುತ್ತಿದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ ಎಲಾನ್​ ಮಸ್ಕ್​ ತಾನು ಹೂಡಿದ ಹಣವನ್ನು ಕಾಪಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ಮಾಡುತ್ತಿರುವುದು ಎಂಬುದು ಸ್ಪಷ್ಟ.

    ಈಗ ವಜಾಗೊಂಡಿರುವ ಬಹುತೇಕ ಉದ್ಯೋಗಿಗಳು ಮಾರ್ಕೆಟಿಂಗ್​, ಪ್ರಾಡಕ್ಟ್​ ಟೀಮ್​ ಮತ್ತು ಸಂವಹನ ವಿಭಾಗದವರು ಎಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಟ್ವಿಟರ್​ ಉದ್ಯೋಗಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕೆಲವೇ ಕೆಲವರು ಕಂಪೆನಿಯಲ್ಲಿ ಉಳಿದುಕೊಂಡಿದ್ದಾರೆ. ಈಗಾಗಲೇ ಜಗತ್ತಿನಾದ್ಯಂತ ಶೇಕಡ 70ರಷ್ಟು ಉದ್ಯೋಗಿಗಳನ್ನು ಮಸ್ಕ್​ ವಜಾಗೊಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts