More

    ಭಾರತದ ನಕಾಶೆ ಕೆಡಿಸಿದ ಟ್ವಿಟರ್​: ಎಫ್​ಐಆರ್​ನಲ್ಲಿ ಮನೀಶ್​ ಮಹೇಶ್ವರಿ ಹೆಸರು ಉಲ್ಲೇಖ

    ನವದೆಹಲಿ: ಭಾರತದ ನಕಾಶೆಯನ್ನು ತಮ್ಮ ವೆಬ್​ಸೈಟ್​ನಲ್ಲಿ ವಿರೂಪಗೊಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಟ್ವಿಟರ್​ ಇಂಡಿಯಾ ಮುಖ್ಯಸ್ಥ ಮನೀಶ್​ ಮಹೇಶ್ವರಿ ಹೆಸರು ಕೂಡ ಉಲ್ಲೇಖವಾಗಿದೆ. ಈ ತಿಂಗಳಲ್ಲಿ ಟ್ವಿಟರ್​ ವಿರುದ್ಧ ದಾಖಲಾದ ಎರಡನೇ ಎಫ್​ಐಆರ್​ ಇದಾಗಿದೆ.

    ಭಜರಂಗದಳದ ನಾಯಕ ಪ್ರವೀಣ್ ಭತಿ ಅವರು ಸಲ್ಲಿಸಿರುವ ದೂರಿನಲ್ಲಿ “ದೇಶದ್ರೋಹದ ಈ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ ಮತ್ತು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ ಅಥವಾ ಶತೃತ್ವವನ್ನು ಸೃಷ್ಟಿಸುವುದು ಅಥವಾ ಉತ್ತೇಜಿಸುವುದು) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008ರ ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    ದೆಹಲಿಯಿಂದ 100 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ದಾಖಲಾಗಿರುವ ದೂರಿನಲ್ಲಿ ಟ್ವಿಟರ್ ಇಂಡಿಯಾದ ನ್ಯೂಸ್ ಪಾರ್ಟ್‌ನರ್‌ಶಿಪ್ ಮುಖ್ಯಸ್ಥ, ಅಮೃತ ತ್ರಿಪಾಠಿ ಹೆಸರನ್ನೂ ಕೂಡ ಉಲ್ಲೇಖಿಸಲಾಗಿದೆ.

    ಸೋಷಿಯಲ್ ಮೀಡಿಯಾಗಳಿಗೆ ಸಂಬಂಧಿಸಿದಂತೆ ಭಾರತದ ಹೊಸ ಐಟಿ ಕಾಯ್ದೆಯ ನಿಯಮಗಳನ್ನು ಪಾಲಿಸಲು ಮೀನ-ಮೇಷ ಎಣಿಸುತ್ತಿರುವ ಟ್ವಿಟರ್, ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಘರ್ಷ ಹೊಂದಿದೆ. ಇದರ ಜತೆಗೆ ಮೊನ್ನೆಮೊನ್ನೆಯಷ್ಟೇ ಕೇಂದ್ರ ಐಟಿ ಸಚಿವರ ಟ್ವಿಟರ್​ ಖಾತೆ ಕೆಲವು ಗಂಟೆಗಳ ಮಟ್ಟಿಗೆ ಬ್ಲಾಕ್ ಮಾಡಿ ವಿವಾದಕ್ಕೀಡಾಗಿ ಮತ್ತೆ ಅನ್​ಬ್ಲಾಕ್​ ಮಾಡಿತ್ತು. ನಂತರ ಇತ್ತೀಚೆಗಷ್ಟೇ ನೇಮಿಸಲಾಗಿದ್ದ ಟ್ವಿಟರ್​ ಇಂಡಿಯಾದ ಕುಂದುಕೊರತೆ ಅಧಿಕಾರಿ ನಿನ್ನೆಯಷ್ಟೇ ರಾಜೀನಾಮೆ ನೀಡಿದ್ದರು. ಇದರಿಂದ ಟ್ವಿಟರ್ ಐಟಿ ಕಾಯ್ದೆ ಪಾಲನೆಯಿಂದ ಹೊರಬಂದಂತಾಗಿದ್ದು, ಈಗ ಈ ಹಿಂದೆ ಮಾಡಿದ್ದಂಥದ್ದೇ ಎಡವಟ್ಟನ್ನು ಮತ್ತೆ ಮಾಡಿದೆ.

    ಅದೇನೆಂದರೆ ಭಾರತದ ನಕಾಶೆಯನ್ನು ಟ್ವಿಟರ್ ಮತ್ತೊಮ್ಮೆ ಕೆಡಿಸಿದೆ. ಅಂದರೆ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿ ತಪ್ಪು ನಕಾಶೆಯನ್ನು ಪ್ರಕಟಿಸಿದೆ. ಟ್ವಿಟರ್​ ವೆಬ್​ಸೈಟ್​​ನ ಕರಿಯರ್ ಸೆಕ್ಷನ್​ನಲ್ಲಿನ ‘ಟ್ವೀಪ್ ಲೈಫ್​’ ವಿಭಾಗದಲ್ಲಿ ಪ್ರಕಟಿಸಲಾಗಿರುವ ವಿಶ್ವದ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಲಾಗಿದೆ. ಈ ಹಿಂದೆಯೂ ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿದ್ದ ಟ್ವಿಟರ್​, ಕೊನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಿಗೆ ತಪ್ಪನ್ನು ತಿದ್ದಿಕೊಂಡಿತ್ತು. ಈಗ ಮತ್ತೆ ಅಂಥದ್ದೆ ತಪ್ಪು ಮರುಕಳಿಸಿದೆ. ಜತೆಗೆ ಕೇಂದ್ರ ಸರ್ಕಾರದೊಂದಿಗೆ ಟ್ವಿಟರ್​ ಸಂಘರ್ಷ ಇರುವುದರಿಂದ ಈ ಪ್ರಕರಣ ಗಂಭೀರವಾಗಿ ಪರಿಣಮಿಸಿದರೂ ಅಚ್ಚರಿ ಏನಲ್ಲ. (ಏಜೆನ್ಸೀಸ್​)

    ಟ್ವಿಟರ್​ನಿಂದ ಮತ್ತೆ ಎಡವಟ್ಟು; ಭಾರತದ ನಕಾಶೆಯನ್ನೇ ಕೆಡಿಸಿದ ಮೈಕ್ರೋಬ್ಲಾಗಿಂಗ್ ಸಂಸ್ಥೆ

    ಲ್ಯಾಗ್​ ಮಂಜು, ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್​ ವಿರುದ್ಧ ಭಾರೀ ಆಕ್ರೋಶ!

    ನನ್ನ ಪತ್ನಿ ನಾಪತ್ತೆ ಸರ್​…ನನ್ನ ಗಂಡನೂ ಕಾಣಿಸ್ತಿಲ್ಲ ಸರ್: ಕೇಸು ದಾಖಲಿಸಿದ ಪೊಲೀಸರಿಗೆ ಬಿಗ್​ ಶಾಕ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts