More

    ರೆಸಿಡೆಂಟ್ ಗ್ರೀವೆನ್ಸ್ ಆಫೀಸರ್​ಅನ್ನು ನೇಮಿಸಿದ ಟ್ವಿಟರ್; ಹೊಸ ಐಟಿ ನಿಯಮದಂತೆ ವರದಿಯೂ ಪ್ರಕಟ

    ನವದೆಹಲಿ : ಹೊಸ ಐಟಿ ನಿಯಮಗಳ ಪಾಲನೆ ಮಾಡದೆ ಕೇಂದ್ರ ಸರ್ಕಾರದ ಕೋಪಕ್ಕೆ ತುತ್ತಾಗಿರುವ ಟ್ವಿಟರ್, ಇದೀಗ ಭಾರತದಲ್ಲಿ ರೆಸಿಡೆಂಟ್​ ಗ್ರೀವೆನ್ಸ್ ಆಫೀಸರ್​ಅನ್ನು ನೇಮಕ ಮಾಡಿದೆ. ನಿಯಮಗಳು ಹೇಳುವಂತೆ ಭಾರತೀಯ ನಿವಾಸಿಯಾದ ವಿನಯ್​ ಪ್ರಕಾಶ್ ಎಂಬುವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಟ್ವಿಟರ್​ ಇಂಡಿಯ ತಿಳಿಸಿದೆ.

    ಜೊತೆಗೆ, ಹೊಸ ನಿಯಮಗಳ ಮತ್ತೊಂದು ನಿರ್ದೇಶನದಂತೆ, ಮೇ 26, 2021 ರಿಂದ ಜೂನ್ 25, 2021 ರವರೆಗೆ ಭಾರತೀಯ ಬಳಕೆದಾರರ ದೂರುಗಳನ್ನು ನಿರ್ವಹಿಸಿದ ಬಗ್ಗೆ ಒಂದು ‘ಪಾರದರ್ಶಕತೆ ವರದಿ’ಯನ್ನೂ ಟ್ವಿಟರ್​ ಪ್ರಕಟಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ವೃದ್ಧನ ಅಪಹರಣ! ಬೆದರಿಸಿ ಆಸ್ತಿಪತ್ರಕ್ಕೆ ಸಹಿ ಪಡೆದರು!

    ಅಮೆರಿಕದ ಕಂಪೆನಿಯಾದ ಟ್ವಿಟರ್​, ಭಾರತ ಸರ್ಕಾರದ ಹೊಸ ಐಟಿ ನಿಯಮಗಳ ಅನುಸಾರವಾಗಿ ಮೂರು ಮುಖ್ಯ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ವಿಳಂಬ ಪ್ರವೃತ್ತಿ ಅನುಸರಿಸುತ್ತಿತ್ತು. ಈ ಬಗ್ಗೆ ಗುರುವಾರದಂದು ದೆಹಲಿ ಹೈಕೋರ್ಟ್​ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಹೇಳಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    98 ಕೋಟಿ ರೂ. ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ಕೊಟ್ಟರೇ, ನಟ ದಿಲೀಪ್​ ಕುಮಾರ್? ವೈರಲ್ ಪೋಸ್ಟ್​ನ ಅಸಲಿಯತ್ತೇನು?

    ತಾಲಿಬಾನ್​ ಆತಂಕ: ಕಂದಹಾರ್​ನ ಭಾರತೀಯ ದೂತಾವಾಸ ತೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts