More

    ಕೋವಿಡ್​ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಕ್ರಮ ಕೈಗೊಂಡ ಟ್ವಿಟ್ಟರ್ ಮತ್ತು ಫೇಸ್​ಬುಕ್

    ನವದೆಹಲಿ: ಪ್ರಸ್ತುತ ದೇಶದಲ್ಲಿ ಎದ್ದಿರುವ ಕೋವಿಡ್ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿರುವ ಆರೋಪದ ಮೇಲೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಟ್ವಿಟ್ಟರ್ ಮತ್ತು ಫೇಸ್​​ಬುಕ್​ ಸುಮಾರು 100 ಕ್ಕೂ ಹೆಚ್ಚು ಪೋಸ್ಟ್​​ಗಳನ್ನು ಡಿಲೀಟ್ ಮಾಡಿದೆ.

    ಸುಳ್ಳು ಸುದ್ದಿಗಳನ್ನು ಹರಡಿ ಜನರ ದಾರಿ ತಪ್ಪಿಸಲಾಗುತ್ತಿದೆ. ಇಂತವರ ಮೇಲೆ ಕ್ರಮ ಕೈಗೊಳ್ಳಿ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಪ್ರಸಾರ ಸಚಿವಾಲಯದ ಕಟ್ಟುನಿಟ್ಟಿನ ಆದೇಶದ ಮೇಲೆ ಟ್ವಿಟ್ಟರ್ ಮತ್ತು ಫೇಸ್​ಬುಕ್​ ಈ ಕ್ರಮ ಕೈಗೊಂಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್, ಭಾರತ್ ಸರ್ಕಾರದ ಸೂಚನೆ ಮೇರೆಗೆ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಡಿಲೀಟ್ ಮಾಡಲಾಗಿದೆ. ಅಂತಹ ಅಕೌಂಟ್​ಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೆ ಆಕ್ಷೇಪಾರ್ಹ ಸಂಗತಿಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದೆ. ಆದರೆ ಫೇಸ್​ಬುಕ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

    ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲೂ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಟ್ವಿಟ್ಟರ್ ಸುಮಾರು 500 ಟ್ವಿಟ್ಟರ್ ಹ್ಯಾಂಡಲ್​ಗಳನ್ನು ಡಿಲೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

    ಕರೊನಾ ಸೋಂಕಿತರ ನೆರವಿಗೆ ನಿಂತ ನಟ ಅಕ್ಷಯ್​ ಕುಮಾರ್; 1 ಕೋಟಿ ರೂಪಾಯಿ ದೇಣಿಗೆ

    ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ: 82 ಜನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts