More

    ವೃದ್ಧ ದಂಪತಿ ಕೊಲೆ ಪ್ರಕರಣ: ಪುತ್ರನೇ ಹಂತಕ!

    ಶ್ರೀರಂಗಪಟ್ಟಣ: ಬೆಂಗಳೂರಿನಲ್ಲಿ ಬುಧವಾರ ವರದಿಯಾಗಿದ್ದ ವೃದ್ಧ ದಂಪತಿಯ ನಿಗೂಢ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅವರ ಪುತ್ರನೇ ಕೊಲೆಗಾರ ಎಂಬುದು ಗುರುವಾರ ದೃಢಪಟ್ಟಿದೆ.

    ಬೆಂಗಳೂರಿನ ಕಾಮಾಕ್ಷಿಪಾಳ್ಯದ ರಂಗನಾಥಪುರ ಬಡಾವಣೆಯ ಮನೆಯಲ್ಲಿ ತನ್ನ ವೃದ್ಧ ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ ಎಂ. ಸಂತೋಷ್ (35) ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದ. ಇಲ್ಲಿ ಆತ್ಮಹತ್ಯೆಗೆ ಯತ್ನಿಸಿ ತನ್ನ ಎರಡೂ ಕಾಲುಗಳನ್ನು ಮುರಿದುಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆತನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗುತ್ತಾ? ಸರ್ಕಾರಕ್ಕೆ ಸಿದ್ದು ಸಲಹೆ ಇಲ್ಲಿದೆ…

    ಸಂತೋಷ್ ಬೆಂಗಳೂರಿನ ನಾಗರಬಾವಿಯಲ್ಲಿ 45 ಲಕ್ಷ ರೂ.ಗಳಿಗೆ ನಿರ್ಮಾಣ ಹಂತದಲ್ಲಿದ್ದ ಫ್ಲಾಟ್ ಒಂದನ್ನು ಬಿಲ್ಡರ್‌ಗಳಿಂದ ಖರೀದಿಸಿದ್ದ. ಇದಕ್ಕಾಗಿ ತಮ್ಮ ಕುಟುಂಬ ಕೂಡಿಟ್ಟಿದ್ದ 25 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿದ್ದ. ಆದರೆ ಬಿಲ್ಡರ್‌ಗಳು ವಂಚಿಸಿದ್ದಲ್ಲದೇ, ಕಿರುಕುಳ ನೀಡಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದ ಮೂವರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

    ಅದರಂತೆ ತಂದೆ ನರಸಿಂಹರಾಜು (70), ತಾಯಿ ಸರಸ್ವತಿ (65) ಅವರನ್ನು ಮಂಗಳವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಬಳಿಕ ಅಲ್ಲಿಂದ ಬುಧವಾರ ಮುಂಜಾನೆ ಶ್ರೀರಂಗಪಟ್ಟಣಕ್ಕೆ ಸಂತೋಷ್ ಬಂದಿದ್ದಾನೆ. ಕಾವೇರಿ ನದಿ ತೀರದಲ್ಲಿ ಮುಡಿ ಮಾಡಿಸಿಕೊಂಡು ಪಾಲಕರಿಗೆ ಪಿಂಡ ಪ್ರದಾನ ಮಾಡಿದ್ದಾನೆ. ಅಷ್ಟರಲ್ಲಿ ದಂಪತಿ ಕೊಲೆ ವಿಚಾರ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ತಿಳಿದು ತನಿಖೆ ಕೈಗೊಂಡಿದ್ದರು. ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿ ಸ್ನೇಹಿತ ಹರೀಶ್‌ಗೆ ಕಾಲ್ ಮಾಡಿ ನಡೆದ ಎಲ್ಲ ವಿಷಯ ತಿಳಿಸಿದ್ದಾನೆ. ಹರೀಶ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿ ಎಲ್ಲರೂ ಶ್ರೀರಂಗಪಟ್ಟಣಕ್ಕೆ ಬಂದಿದ್ದಾರೆ.

    ಇದನ್ನೂ ಓದಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಇತ್ತ ಆರೋಪಿ ಬುಧವಾರ ಸಂಜೆ 6.30ರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಉತ್ತರ ಕಾವೇರಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿದ್ದ ರಭಸಕ್ಕೆ ಸಂತೋಷನ ಎರಡು ಕಾಲುಗಳ ಮೂಳೆ ಮುರಿದು ನದಿಯ ದಡದಲ್ಲಿ ನರಳಾಡುತ್ತಾ ಬಿದ್ದಿದ್ದ. ಆ ವೇಳೆಗೆ ಪಟ್ಟಣಕ್ಕೆ ಆಗಮಿಸಿದ ಬೆಂಗಳೂರು ಪೊಲೀಸರು, ಶ್ರೀರಂಗಪಟ್ಟಣ ಪೊಲೀಸರ ಸಹಕಾರದೊಂದಿಗೆ ಹುಡುಕಾಟ ನಡೆಸಿ, ಘಟನಾ ಸ್ಥಳಕ್ಕೆ ಬಂದು ನದಿ ದಡದಲ್ಲಿ ಬಿದ್ದಿದ್ದ ಗಾಯಾಳುವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸರು ಆರೋಪಿಯಿಂದ ಹೇಳಿಕೆ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದು ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಸಂಜಯಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಇದನ್ನೂ ಓದಿ ಆನ್​ಲೈನ್ ತರಗತಿ ಆಫ್: ವಿಜಯವಾಣಿ ಅಭಿಯಾನಕ್ಕೆ ಜಯ

    VIDEO| ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts