More

    ಮರಗಳೇ ಮಕ್ಕಳೆಂದ ವಿಶ್ವದ ಏಕೈಕ ತಾಯಿ ಸಾಲುಮರದ ತಿಮ್ಮಕ್ಕ

    ಚಿತ್ರದುರ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ,ಪ್ರತಿಯೊಬ್ಬರೂ 75 ಸಸಿಗಳನ್ನು ನೆಡುವ ಮೂಲಕ ಅಮೃತ ಮಹೋತ್ಸ ವವನ್ನು ಅರ್ಥಪೂರ್ಣಗೊಳಿಸಬೇಕಿದೆ ಎಂದು ಪರಿಸರ ಪ್ರೇಮಿ ಉಮೇಶ್ ವನಸಿರಿ ಅಭಿಪ್ರಾಯಪಟ್ಟರು.

    ನಗರದ ಶ್ರೀ ಅಹೋಬಲ ಟಿವಿಎಸ್ ಮತ್ತು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯಅಮೃತ ಮ ಹೋ ತ್ಸವದ ಅಂಗವಾಗಿ ಭಾನುವಾರ ವಿದ್ಯಾನಗರದ ಹನುಮಂತಪ್ಪ ಬಡಾವಣೆ ವೀರ ಸಾವರ್ಕರ್ ಉದ್ಯಾನದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ‌್ಯಕ್ರಮದಲ್ಲಿ ಮಾತನಾಡಿ,ಪರಿಸರ ರಕ್ಷಣೆ ಹೊಣೆ ಇಂದು ಎಲ್ಲರ ಮೇಲಿದೆ. ಮರಗಳೇ ನನ್ನ ಮಕ್ಕಳೆಂದು ಹೇಳಿದ ಏಕೈಕ ತಾಯಿ ವಿಶ್ವದಲ್ಲಿ ಯಾರಾದರೂ ಇದ್ದರೆ ಅದು ಸಾಲುಮರದ ತಿಮ್ಮಕ್ಕ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲೂ ಅವರು ಹೆಸರಿದೆ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ,ಸಮಾಜದಲ್ಲಿರುವ ಉತ್ತಮ ವ್ಯಕ್ತಿಗಳಿಗೆ ಬೆಂಬಲ ವಾಗಿ ನಿಲ್ಲೋಣವೆಂದರು.

    ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರತಾಪ್‌ರೆಡ್ಡಿ ಮಾತನಾಡಿ,ಎಲ್ಲೆಡೆ ಈಗ ಕಾಂಕ್ರಿಟ್ ರಸ್ತೆಗಳು ನಿರ್ಮಾಣವಾಗುತ್ತಿರುವುದು ತಾಪ ಮಾ ನ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಪರಿಸರ ಸಮತೋಲನಕ್ಕಾಗಿ ಗಿಡ-ಮರಗಳನ್ನು ಬೆಳೆಸಬೇಕಾದ ಅಗತ್ಯವಿದೆ ಎಂದರು. ನಾಡೋಜ ಪುರಸ್ಕೃತೆ ಡಾ.ಸಾಲುಮರದ ತಿಮ್ಮಕ್ಕ ಅವರು ಕಾರ‌್ಯಕ್ರಮವನ್ನು ಉದ್ಘಾಟಿಸಿದರು.

    ಶ್ರೀ ಅಹೋಬಲ ಟಿವಿಎಸ್ ಶೋ ರೂಂ ಮಾಲೀಕ ಅರುಣ್‌ಕುಮಾರ್,ಮೆದೇಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಮಂಜಪ್ಪ,ಸದಸ್ಯರಾ ದ ಆರ್.ನಿರಂಜನ್,ರಮೇಶ್‌ಮೋತ್ಕೂರ್,ಸುಲೋಚನಾ ಎಂ.ಸಿ.ಶಂಕರ್,ವನಜಾಕ್ಷಿ ಅನಂತರಾಜ್,ನಗರಸಭೆ ಸದಸ್ಯ ಸುರೇಶ್ ಹಾಗೂ ಪರಿಸರ ಕಾರ್ಯಕರ್ತ ಸಿದ್ದರಾಜ ಜೋಗಿ ಮತ್ತಿತರರು ಇದ್ದರು.

    ಉದ್ಯಾನದಲ್ಲಿ 275 ಸಸಿಗಳನ್ನು ನೆಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts