More

    ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌

    ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಡಿಜಿಟಲೀಕರಣವಾಗುತ್ತಿದೆ. ಇದರ ಮುಂದುವರೆದಿರುವ ಭಾಗವಾಗಿ ಇದೀಗ ಜನರೇ ಖುದ್ದಾಗಿ ತಮಗೆ ಬೇಕಾಗಿರುವ ಚಾನೆಲ್‌ಗಳನ್ನು ಆಯ್ಕೆ ಮಾಡಿ ಬೇಡದಿದ್ದಾಗ ಅದನ್ನು ಡಿಲೀಟ್‌ ಮಾಡಬಹುದು!

    ಹೌದು. ಇಲ್ಲಿಯವರೆಗೆ ನಿಮಗೆ ಯಾವುದಾದರೂ ಚಾನೆಲ್‌ ಬೇಕು ಅಥವಾ ಬೇಡ ಎಂದಾಗಿದ್ದರೆ ನಿಮ್ಮ ಆಪರೇಟ್‌ಗಳ ಸಹಾಯ ಕಡ್ಡಾಯವಾಗಿ ಬೇಕಿತ್ತು. ಅವರಿಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಇಷ್ಟಾನಿಷ್ಟಗಳ ಬಗ್ಗೆ ವಿವರಿಸಬೇಕಿತ್ತು.

    ಅದೆಷ್ಟೋ ಸಂದರ್ಭಗಳಲ್ಲಿ ಒಳ್ಳೆಯ ಚಾನೆಲ್‌ ಎಂದು ಹಾಕಿಸಿಕೊಂಡು ನಂತರ ಅದು ಬೇಡ ಎನ್ನಿಸಿದಾಗ ಪುನಃ ಆಪರೇಟರ್‌ ಮೊರೆ ಹೋಗಬೇಕಿತ್ತು. ಪದೇ ಪದೇ ಅವರಿಗೆ ಕರೆ ಮಾಡುವುದು ಮುಜುಗರವಾಗಿ ಇಷ್ಟವಿಲ್ಲದ ಚಾನೆಲ್‌ಗಳನ್ನೂ ಇಟ್ಟುಕೊಳ್ಳುವ ಪರಿಸ್ಥಿತಿ ಇತ್ತು.

    ಇವೆಲ್ಲಕ್ಕೂ ತೆರೆ ಎಳೆದಿರುವ ಟ್ರಾಯ್‌ ಇದೀಗ ನಿಮಗಿಷ್ಟವಾದ ಚಾನೆಲ್‌ಗಳಿಗೆ ನೀವೇ ಮಾಲೀಕರನ್ನಅಗಿ ಮಾಡಿದೆ. ಅಂದರೆ ನಿಮಗಿಷ್ಟವಾದ ಚಾನೆಲ್ ಬೇಕು ಅಂದರೆ ಅದನ್ನ ನೀವೇ ಸೆಲೆಕ್ಟ್ ಮಾಡಬಹುದು. ಬೇಡ ಎಂದರೆ ತೆಗೆದು ಹಾಕಬಹುದು.

    ಇದನ್ನೂ ಓದಿ: ಅಮೆರಿಕದ ನ್ಯಾಯಾಧೀಶರನ್ನಾಗಿ ಭಾರತೀಯನ ನೇಮಕ ಮಾಡಿದ ಟ್ರಂಪ್‌

    ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟು. ಇದಕ್ಕಾಗಿ ಟ್ರಾಯ್‌ ಆ್ಯಪ್‌ ಒಂದನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಟ್ರಾಯ್‌ ಚಾನೆಲ್‌ ಸೆಲೆಕ್ಟರ್‌ (TRAI channel selector) ಎಂದು. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿಯೂ ಸಿಗುತ್ತದೆ.

    ಇದನ್ನು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಟೀವಿಯಲ್ಲಿ ಇರುವ ಚಾನೆಲ್‌ಗಳು ಯಾವುವು? ಅವುಗಳಲ್ಲಿ ನಿಮಗೆ ಬೇಕಾಗಿರುವವು ಯಾವುವು? ಬೇಡದ್ದು ಯಾವುವು? ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಹೊಸದಾಗಿ ಯಾವುದಾದರೂ ಚಾನೆಲ್‌ ಬೇಕಿದ್ದರೆ ಅಲ್ಲಿಂದಲೇ ಆಯ್ಕೆ ಮಾಡಿಕೊಳ್ಳಬಹುದು.

    ಬಳಸುವ ಕ್ರಮ ಹೀಗಿದೆ: ಮೊದಲು ಅಪ್ಲಿಕೇಷನ್ ಡೌನ್ ‌ಲೋಡ್ ಮಾಡಿ. ನಂತರ ನಿಮ್ಮ ನೋಂದಾಯಿತ ಸಂಖ್ಯೆ ನೀಡಿದರೆ ಅದಕ್ಕೊಂದು ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಬರುತ್ತದೆ. ಒಟಿಪಿ ಹಾಕಿದರೆ ನೋಂದಾಯಿತರಾದಂತೆ. ಅಥವಾ ನೀವು ತಮ್ಮ ಸಂಖ್ಯೆಯನ್ನು ಸೇವಾ ಪೂರೈಕೆದಾರರೊಂದಿಗೆ ನೋಂದಾಯಿಸದಿದ್ದರೆ ಈ ಒಟಿಪಿ ಅವರ ಟಿವಿ ಪರದೆಯಲ್ಲಿ ಕಾಣಿಸುತ್ತದೆ.

    ಲಾಕಪ್‌ಡೆತ್‌ಗೆ ಭಯಾನಕ ಟ್ವಿಸ್ಟ್‌: ಠಾಣೆಯಲ್ಲಿ ಅಪ್ಪ-ಮಗನ ಮೇಲೆ ಲೈಂಗಿಕ ದೌರ್ಜನ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts