More

    ರಸ್ತೆಯಲ್ಲಿ ಟಿವಿ, ಬೈಕ್, ಫ್ರಿಜ್ ಇಟ್ಟು ಪ್ರತಿಭಟನೆ

    ರಾಣೆಬೆನ್ನೂರ: ಟಿವಿ, ಬೈಕ್ ಹಾಗೂ ಫ್ರಿಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದಾಗಿ ಆಹಾರ ಸಚಿವ ಉಮೇಶ ಕತ್ತಿ ನೀಡಿರುವ ಹೇಳಿಕೆ ಖಂಡಿಸಿ ತಾಲೂಕಿನ ಮಾಕನೂರ ಗ್ರಾಮಸ್ಥರು ರಸ್ತೆಯಲ್ಲಿ ಟಿವಿ, ಬೈಕ್, ಫ್ರಿಜ್ ಇಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.

    ನೇತೃತ್ವ ವಹಿಸಿದ್ದ ಈರಣ್ಣ ಹಲಗೇರಿ ಮಾತನಾಡಿ, ಸಚಿವ ಉಮೇಶ ಕತ್ತಿ ಅವರು ಟಿವಿ, ಬೈಕ್, ಫ್ರೀಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಇವರ ಪ್ರಕಾರ, ಬಡವರು ಟಿವಿ ತೆಗೆದುಕೊಳ್ಳಬಾರದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಟಿವಿ, ಬೈಕ್, ಫ್ರಿಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ವಿಚಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

    ಗ್ರಾಮಸ್ಥರಾದ ಭೀಮೇಶ ಪೂಜಾರ, ನರೇಂದ್ರ ನಾಯಕ, ಸುರೇಶ ಮಲ್ಲಾಪುರ, ಬಸನಗೌಡ ನಂದಿಗಾವಿ, ಉಜ್ಜಪ್ಪ ಕಾಶ್ಯರ, ಹನುಮಂತಪ್ಪ ಚೌಡಣ್ಣನವರ, ಹನುಮಂತ ತಾವರಗೊಂದಿ, ಗಂಗಪ್ಪ ಕುರುಬರ, ಹನುಮಂತ ಸಾರಥಿ, ಕುಮಾರ ನೇಕಾರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts