More

    ಮಾಸ್ಕ್​ ಧರಿಸಿದ್ರೆ, ಕರೊನಾ ವೈರಸ್​ ಎಂದು ಮಾತನಾಡಿದ್ರೆ ಪೊಲೀಸರು ಬಂಧಿಸ್ತಾರೆ ಎಚ್ಚರ

    ಕರೊನಾ ಸೋಂಕು ವಿಶ್ವದ 185ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಕೋವಿಡ್​-19 ಹುಟ್ಟಿಕೊಂಡ ಚೀನಾದಲ್ಲಿ ಇದರ ಅಬ್ಬರ ಇಳಿದಿದ್ದರೆ, ಅಮೆರಿಕದಲ್ಲಿ ಇನ್ನಿಲ್ಲದ ವೇಗದಲ್ಲಿ ಹಬ್ಬುತ್ತಿದೆ. ಇಟಲಿಯಲ್ಲಿ ನಿಯಂತ್ರಣಕ್ಕೆ ಸಿಗದೆ, ನಿತ್ಯ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಅಂಟಾರ್ಟಿಕಾ ಹಿಮ ಪ್ರದೇಶವನ್ನು ಹೊರತುಪಡಿಸಿದರೆ ಎಲ್ಲ ಖಮಡಗಳಲ್ಲೂ ಇದು ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಇಂಥ ವಿಷಮ ಸಮಯದಲ್ಲಿಯೇ ಈವರೆಗೂ ಕರೊನಾ ಕಾಣಿಸಿಕೊಳ್ಳದ ಹಲವು ರಾಷ್ಟ್ರಗಳು ಇವೆ.

    ಮಧ್ಯ ಏಷ್ಯಾದ ಹಾಗೂ ಸೋವಿಯತ್​ ರಷ್ಯಾದಿಂದ ಬೇರ್ಪಟ್ಟ ರಾಷ್ಟ್ರವಾದ ತುರ್ಕಮೇನಿಸ್ತಾನ್​ನಲ್ಲಿ ಈವರೆಗೆ ಒಂದೂ ಕರೊನಾ ಪ್ರಕಟರಣಗಳು ವರದಿಯಾಗಿಲ್ಲ. ತನ್ನ ನೆರೆಯ ದೇಶವಾದ ಇರಾನ್​ 44,000 ಕರೊನಾ ಪೀಡಿತರಿದ್ದರೂ ತನ್ನಲ್ಲಿ ಮಾತ್ರ ಒಂದು ಸೋಂಕನ್ನು ಈ ರಾಷ್ಟ್ರ ಬಿಟ್ಟುಕೊಂಡಿಲ್ಲ. ಕೋವಿಡ್​-19 ಪ್ರವೇಶ ತಡೆಗಟ್ಟಲು ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತೆಯನ್ನು ಇಲ್ಲಿ ಅನುಸರಿಸಲಾಗುತ್ತದೆ.

    ಎಲ್ಲಕ್ಕಿಂತ ಅಚ್ಚರಿ ವಿಚಾರವೆಂದರೆ ಈ ರಾಷ್ಟ್ರದಲ್ಲಿ ಕರೊನಾ ವೈರಸ್​ ಎಂಬ ಪದವನ್ನೇ ಬಳಸುವಂತಿಲ್ಲ. ಮಾಧ್ಯಮಗಳಲ್ಲಿ ಈ ಪದ ಬಳಸದಂತೆ ನಿಷೇಧ ಹಾಕಲಾಗಿದೆ. ಜತೆಗೆ, ಈ ರೋಗದ ಕುರಿತಾಗಿ ಹೊರಡಿಸಲಾಗಿರುವ ಮಾಹಿತಿ ಪುಸ್ತಕ, ಕೈಪಿಡಿ ಹಾಗೂ ಶಾಲೆಗಳಲ್ಲಿ ವಿತರಿಸಲಾಗಿರುವ ಪುಸ್ತಕಗಳಲ್ಲೂ ಕರೊನಾ ಎಂಬ ಪದ ಬಳಸಿಲ್ಲವಂತೆ.

    ಇದಷ್ಟೇ ಅಲ್ಲ, ತುರ್ಕಮೇನಿಸ್ತಾನದಲ್ಲಿ ಜನರು ಮಾಸ್ಕ್​ ಧರಿಸಿಕೊಂಡು ಕರೊನಾ ವೈರಸ್​ ಕುರಿತಾಗಿ ಮಾತನಾಡಿದ್ದೇ ಆದಲ್ಲಿ ಮಫ್ತಿ ಪೊಲೀಸರು ಅವರನ್ನು ವಶಕ್ಕೆ ಪಡೆಯುವುದು ಗ್ಯಾರಂಟಿ ಎಂದು ಫ್ರೆಂಚ್​ ಮೂಲದ ರಿಪೋರ್ಟರ್ಸ್​ ವಿಥೌಟ್​ ಬಾರ್ಡರ್ಸ್​ ಸಂಸ್ಥೆ ವರದಿ ಮಾಡಿದೆ.

    ಇಷ್ಟಕ್ಕೂ ತುರ್ಕಮೇನಿಸ್ತಾನ್​ ಅತ್ಯಂತ ನಿರ್ಬಂಧಿತ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಜತೆಗೆ, 2006ರಿಂದ ಈ ದೇಶದಲ್ಲಿ ಗರ್ಬಾಂಗುಲಿ ಬೆರ್ಡಿಮುಖಾಮದೊವ್​ ಅಧ್ಯಕ್ಷನಾಗಿ ಆಡಲಿತ ನಡೆಸುತ್ತಿದ್ದಾನೆ. ತನ್ನನ್ನು ತಾನು ತುರ್ಕಮೇನಿಸ್ತಾನದ ಅರ್ಕಾದಕ್​ ಅಥವಾ ರಕ್ಷಕ ಎಂದು ಕರೆದುಕೊಳ್ಳುತ್ತಾನೆ ಎಂದು ವರದಿಯಾಗಿದೆ.

    ಲಾಕ್‌ಡೌನ್‌: ವಿಷು ಹಬ್ಬಕ್ಕೆ ಶಬರಿಮಲೆಗೆ ನೋ ಎಂಟ್ರಿ

    ತಬ್ಲಿಘಿ ಜಮಾತ್​ ಸಂಘಟನೆಯ ಧಾರ್ಮಿಕ ಸಭೆಯನ್ನು ತಾಲಿಬಾನ್​ ಉಗ್ರಕೃತ್ಯಕ್ಕೆ ಹೋಲಿಸಿದ ಮುಕ್ತಾರ್​ ಅಬ್ಬಾಸ್​ ನಖ್ವಿ; ಕ್ಷಮಿಸಲು ಸಾಧ್ಯವೇ ಇಲ್ಲವೆಂದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts