More

    ಇಸ್ರೇಲ್ ಪರ ಬೇಹುಗಾರಿಕೆ: ಟರ್ಕಿಯಲ್ಲಿ 33 ಮಂದಿ ಸೆರೆ

    ಇಸ್ತಾನ್ ಬುಲ್: ಇಸ್ರೇಲ್‌ನ ವಿದೇಶಿ ಗುಪ್ತಚರ ಸೇವೆ(ಮೊಸಾದ್) ಪರ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ.

    ಬಂಧಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

    ಇದನ್ನೂ ಓದಿ: 12 ಅಂತಸ್ತಿನ ಕಟ್ಟಡದ ಮೂಲಕ ಹಾದುಹೋಗಲಿದೆ ಚೆನ್ನೈ ಮೆಟ್ರೋ ರೈಲು

    ಟರ್ಕಿಯ 8 ಪ್ರಾಂತ್ಯಗಳ 57 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ದಾಳಿಗಳಲ್ಲಿ ಶಂಕಿತರನ್ನು ಸೆರೆಹಿಡಿಯಲಾಗಿದೆ. ಉಳಿದ 13 ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿವೆ. ಬಂಧಿತರ ಬಗ್ಗೆ ಟರ್ಕಿ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ.

    ಲೆಬನಾನ್, ಟರ್ಕಿ ಮತ್ತು ಕತಾರ್ ಸೇರಿದಂತೆ ಎಲ್ಲ ಕಡೆ ಹಮಾಸ್ ಉಗ್ರರನ್ನು ಸದೆಬಡಿಯಲು ಸಿದ್ಧವಾಗಿದ್ದೇವೆ ಎಂದು ಇಸ್ರೇಲ್‌ನ ದೇಶೀಯ ಭದ್ರತಾ ಸಂಸ್ಥೆಯ ಮುಖ್ಯಸ್ಥ ಶಿನ್ ಬೆಟ್ ಹೇಳಿಕೆ ನೀಡಿದ ಕೆಲವು ವಾರಗಳ ನಂತರ ಈ ಬಂಧನದ ವರದಿ ಬಂದಿದೆ.

    ಕೆಂಪು ಸಮುದ್ರದಲ್ಲಿ ಮುಂದುವರಿದ ಹೌತಿ ಬಂಡುಕೋರರ ಹಾವಳಿ- ಮತ್ತೊಂದು ಕಾರ್ಗೋ ಶಿಪ್ ಮೇಲೆ ಕ್ಷಿಪಣಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts