More

    ರೀಲ್ ಕಥೆ ರಿಯಲ್​ ಆಯ್ತಾ? ಅನುಮಾನ ಹುಟ್ಟಿಸುತ್ತಿದೆ ತುನಿಷಾ ಶರ್ಮಾ ಇನ್​ಸ್ಟಾಗ್ರಾಂ ಪೋಸ್ಟ್​…

    ಬೆಂಗಳೂರು: ಕಿರುತೆರೆ ನಟಿ ತುನಿಷಾ ಶರ್ಮಾ(20) ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇದೀಗ ಹೊಸ ತಿರುವನ್ನು ಪಡೆದಿದೆ. ಅದರ ರಹಸ್ಯ ಇರೋದು ಆಕೆಯ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ! ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್​​ನಲ್ಲೇ ನೇಣು ಹಾಕಿಕೊಂಡಿದ್ದಳು. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಘಟನೆಯಿಂದ ಸೆಟ್​ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ಖಚಿತವಾಗಿ ತಿಳಿಯಬೇಕಿದೆ. ಇಂತಹ ಸಂದಭದಲ್ಲಿ ಆಕೆಯ ಇನ್​ಸ್ಟಾ ಸ್ಟೋರಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ನಟಿ ತುನಿಷಾ, ಇನ್​ಸ್ಟಾ ಸ್ಟೋರಿಯಲ್ಲಿ ಮೇಕಪ್​ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಆತ್ಮಹತ್ಯೆ ಮಾಡಿಕೊಳ್ಳುವ 6 ಗಂಟೆ ಹಿಂದೆ ಅಷ್ಟೇ ನಡೆದದ್ದು. ಈ ವಿಡಿಯೋದಲ್ಲಿ ಆಕೆ ಮಣಿಗಂಟನ್ನು ಕಟ್​ ಮಾಡಿಕೊಳ್ಳುವ ರೀತಿ ಮೇಕಪ್​ ಮಾಡಿಸಿಕೊಳ್ಳುತ್ತಿದ್ದರು.

    ಅಂದರೆ ಆಕೆಯ ಪಾತ್ರ ಸೂಸೈಡ್​ ಮಾಡಿಕೊಳ್ಳಲಿತ್ತಾ ಎನ್ನುವ ಪ್ರಶ್ನೆ ಎದ್ದಿದೆ. ರೀಲ್ ಬದುಕಿನ ಕಥೆಯನ್ನೇ ರಿಯಲ್​ ಎಂದು ನಂಬಿ ಜೀವನವನ್ನೇ ಕೊನೆಗೊಳಿಸಿದ್ರಾ ಎನ್ನುವಂತಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆಕೆಯ ಆತ್ಮಹತ್ಯೆಯ ಹಿಂದಿನ ರಹಸ್ಯ ತನಿಖೆಯಿಂದಲೇ ಹೊರಬರಬೇಕಿದೆ.
    ರೀಲ್ ಕಥೆ ರಿಯಲ್​ ಆಯ್ತಾ? ಅನುಮಾನ ಹುಟ್ಟಿಸುತ್ತಿದೆ ತುನಿಷಾ ಶರ್ಮಾ ಇನ್​ಸ್ಟಾಗ್ರಾಂ ಪೋಸ್ಟ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts