More

    ತುಂಗಭದ್ರ ನದಿ ನೀರಿನ ಮಟ್ಟ ಏರಿಕೆ

    ಗುತ್ತಲ: ಸತತ ಮಳೆಗೆ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಪ್ರತಿ ಗಂಟೆಗೆ 1 ಸೆಂಟಿ ಮೀಟರ್​ನಷ್ಟು ಏರುತ್ತಿದೆ. ಶನಿವಾರ ಸಂಜೆ ವೇಳೆಗೆ ತುಂಗಭದ್ರಾ ನದಿಯ ನೀರಿನ ಮಟ್ಟ 4 ಮೀ. ತಲುಪಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.

    ಶನಿವಾರ ಬೆಳಗ್ಗೆಯಿಂದ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಗಾಜನೂರ ಜಲಾಶಯದಿಂದ ಶನಿವಾರ 18-20 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರ ಮತ್ತು ಹಾವೇರಿ ತಾಲೂಕಿನಲ್ಲಿ ಸತತ ಮಳೆಯಾಗುತ್ತಿದೆ. ತುಂಗಭದ್ರಾ ನದಿಗೆ ಹಳ್ಳ, ಕೊಳ್ಳದ ನೀರು, ಜಮೀನುಗಳ ನೀರು ಸೇರಿದಂತೆ, ಕುಮದ್ವತಿ, ವರದಾ ನದಿಯ ನೀರು ಸೇರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ನದಿ ದಂಡೆಯಲ್ಲಿರುವ ಪಂಪ್​ಸೆಟ್​ಗಳನ್ನು ರೈತರು ಸ್ಥಳಾಂತರ ಮಾಡುತ್ತಿದ್ದಾರೆ.

    ನದಿಯ ನೀರು ಏರಿಕೆಯಾಗುತ್ತಿದ್ದಂತೆ ನದಿ ದಂಡೆಯ ಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಾರಿ ಮುಂಚಿತವಾಗಿ ಪ್ರವಾಹದ ಸ್ಥಿತಿ ನಿರ್ವಣವಾಗಿದ್ದು ನದಿ ಪಾತ್ರಗಳ ಜನರಿಗೆ ತಲೆನೋವಾಗಿದೆ.

    ಪ್ರವಾಹದ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಜಿಲ್ಲೆಯಲ್ಲಿ 82 ಗ್ರಾಪಂ ವ್ಯಾಪ್ತಿಯ 141 ಗ್ರಾಮಗಳು ನದಿಗಳ ಪಾತ್ರದಲ್ಲಿ ಬರುತ್ತವೆ. ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ದಿನಕ್ಕೆ ಮೂರು ಬಾರಿ ವೀಕ್ಷಣೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಪೊಲೀಸರನ್ನು ಹೊರತ ಪಡಿಸಿ 150 ಹೋಂ ಗಾರ್ಡ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಗಂಜೀ ಕೇಂದ್ರ ತೆರೆಯಲು ಎತ್ತರ ಪ್ರದೇಶದಲ್ಲಿರುವ ಶಾಲೆಗಳನ್ನು ಈಗಾಗಲೇ ಗುರ್ತಿಸಲಾಗಿದೆ. ವೈದ್ಯರನ್ನು ಸಹ ನಿಯೋಜಿಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹದ ಸ್ಥಿತಿಯಲ್ಲಿ ಜನ ಜಾನುವಾರುಗಳಿಗೆ ಬೇಕಾದ ಔಷಧ ಸಂಗ್ರಹಿಸಿದ್ದೇವೆ. ನದಿಯ ಪಾತ್ರಗಳಲ್ಲಿ ಬರುವ ಗ್ರಾಮಗಳ ಒಟ್ಟು 1.32 ಲಕ್ಷ ಜಾನುವಾರು ಸ್ಥಳಾಂತರಕ್ಕೆ ವಾಹನಗಳನ್ನು ಕಾಯ್ದಿರಿಸಿದ್ದೇವೆ. ಪ್ರವಾಹದ ಪರಿಹಾರಕ್ಕಾಗಿ ಜಿಲ್ಲೆಗೆ 53 ಕೋಟಿ ರೂ. ಇದ್ದು, 29 ಕೋಟಿ ರೂ. ತಹಸೀಲ್ದಾರರ ಬಳಿ ಇದೆ. ಉಳಿದಂತೆ 14 ಕೋಟಿ ರೂ. ಜಿಲ್ಲಾಡಳಿತ ಬಳಿ ಇದೆ.

    | ಯೋಗೀಶ್ವರ, ಎಡಿಸಿ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts