More

    ಕ್ಷೇತ್ರದ ಅಭಿವೃದ್ಧಿಗೆ ಬದ್ಧ

    ತಾಳಿಕೋಟೆ: ಕ್ಷೇತ್ರದ ಜನರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
    ತುಂಬಗಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 2018-19ನೇ ಸಾಲಿನ ಎಸ್‌ಎಚ್‌ಡಿಪಿ ಯೋಜನೆಯಡಿ 9.26 ಕೋಟಿ ರೂ. ವೆಚ್ಚದ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ-124 ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
    ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ತಮ್ಮ ಕ್ಷೇತ್ರಕ್ಕೆ 250 ಕೋಟಿ ರೂ. ಅನುದಾನವನ್ನು ಒದಗಿಸಿದೆ. ಈಗಾಗಲೇ ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದರೆ ಇನ್ನೂ ಕೆಲವು ಕಾಮಗಾರಿಗಳು ಟೆಂಡರ್ ಹಂತ ಮುಗಿದಿವೆ. ಅವು ಕಾಮಗಾರಿಗಳು ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿವೆ ಎಂದರು.

    ತಾಳಿಕೋಟೆ ಯಿಂದ ದೇವರ ಹಿಪ್ಪರಗಿ ಕೂಡುವ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿತ್ತು. ಆ ರಸ್ತೆ ಸುಧಾರಣೆಗಾಗಿ 4 ವರ್ಕ್‌ಗಳನ್ನಾಗಿ ಮಾರ್ಪಡಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ದೇವರ ಹಿಪ್ಪರಗಿವರೆಗೆ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.
    ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಮಂಡನೆ ಸಮಯದಲ್ಲಿ ಕೃಷ್ಣಾಕೊಳ್ಳದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಣ ಮೀಸಲಿಡುವುದನ್ನು ಕೈಬಿಟ್ಟಿದ್ದರು. ಅವಳಿ ಜಿಲ್ಲೆಯ ಶಾಸಕರೆಲ್ಲರೂ ಯಡಿಯೂರಪ್ಪನವರನ್ನು ಭೇಟಿಯಾಗಿ ಕೃಷ್ಣಾಕೊಳ್ಳದ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಿ ಕಾಲಮಿತಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯ ಮಾಡಿದ್ದೇವು. ಬಜೆಟ್ ಮಂಡನೆ ಮರುದಿನ ಅಂಗೀಕಾರಕ್ಕೂ ಮುಂಚೆ 10 ಸಾವಿರ ಕೋಟಿ ರೂ. ಯೋಜನೆಗೆ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡುವುದರ ಜತೆಗೆ ಸರ್ಕಾರದ 3 ವರ್ಷದ ಕಾಲಾವಧಿಯಲ್ಲಿ ಕಾಮಗಾರಿಯನ್ನು ಸಂಪೂರ್ಣ ಮುಗಿಸಿಕೊಡಲಾಗುವುದೆಂದು ಘೋಷಿಸಿದ್ದಾರೆ ಎಂದರು.
    ನಮ್ಮ ಕ್ಷೇತ್ರದ ಫೀರಾಪೂರ-ಬೂದಿಹಾಳ ಏತನೀರಾವರಿ ಯೋಜನೆಗೆ 650 ಕೋಟಿ ರೂ.ಯನ್ನು ಮೀಸಲಿಟ್ಟಿದ್ದಾರೆ. ಅದು ಕೂಡ ಸರ್ಕಾರದ ಕಾಲಮಿತಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡರೆ 50 ಸಾವಿರ ಎಕರೆ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದರು.

    ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಮಂಡನೆ ಸಮಯದಲ್ಲಿ ಕೃಷ್ಣಾಕೊಳ್ಳದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಣ ಮೀಸಲಿಡುವುದನ್ನು ಕೈಬಿಟ್ಟಿದ್ದರು. ಅವಳಿ ಜಿಲ್ಲೆಯ ಶಾಸಕರೆಲ್ಲರೂ ಯಡಿಯೂರಪ್ಪನವರನ್ನು ಭೇಟಿಯಾಗಿ ಕೃಷ್ಣಾಕೊಳ್ಳದ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಿ ಕಾಲಮಿತಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯ ಮಾಡಿದ್ದೇವು. ಬಜೆಟ್ ಮಂಡನೆ ಮರುದಿನ ಅಂಗೀಕಾರಕ್ಕೂ ಮುಂಚೆ 10 ಸಾವಿರ ಕೋಟಿ ರೂ. ಯೋಜನೆಗೆ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡುವುದರ ಜತೆಗೆ ಸರ್ಕಾರದ 3 ವರ್ಷದ ಕಾಲಾವಧಿಯಲ್ಲಿ ಕಾಮಗಾರಿಯನ್ನು ಸಂಪೂರ್ಣ ಮುಗಿಸಿಕೊಡಲಾಗುವುದೆಂದು ಘೋಷಿಸಿದ್ದಾರೆ ಎಂದರು.
    ನಮ್ಮ ಕ್ಷೇತ್ರದ ಫೀರಾಪೂರ-ಬೂದಿಹಾಳ ಏತನೀರಾವರಿ ಯೋಜನೆಗೆ 650 ಕೋಟಿ ರೂ.ಯನ್ನು ಮೀಸಲಿಟ್ಟಿದ್ದಾರೆ. ಅದು ಕೂಡ ಸರ್ಕಾರದ ಕಾಲಮಿತಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡರೆ 50 ಸಾವಿರ ಎಕರೆ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದರು. ಜಿಪಂ ಸದಸ್ಯರ ಪ್ರತಿನಿಧಿ ಸಿದ್ದು ಬುಳ್ಳಾ, ಭಂಟನೂರ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಹೆಗರಡ್ಡಿ, ದೇವರ ಹಿಪ್ಪರಗಿ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ರಮೇಶ ಮಸಿಬಿನಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಿ.ಬಿ.ಪಾಟೀಲ ಮಾತನಾಡಿದರು.

    ತುಂಬಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾಹೇಬಗೌಡ ಪಾಟೀಲ(ಸಾಸನೂರ), ತಾಪಂ ಸದಸ್ಯರಾದ ಸೋಮನಗೌಡ ಹಾದಿಮನಿ, ರಾಜುಗೌಡ ಕೊಳೂರ, ಬಸನಗೌಡ ಬಿರಾದಾರ, ತುಂಬಗಿ ಗ್ರಾಪಂ ಅಧ್ಯಕ್ಷ ಭೀಮನಗೌಡ ಪಾಟೀಲ, ಮುಖಂಡರಾದ ನಿಂಗನಗೌಡ ಬಿರಾದಾರ(ಗಡಿಸೋಮನಾಳ), ಪ್ರಶಾಂತ ಹಾವರಗಿ, ಶೇಖರಗೌಡ ತಂಗಡಗಿ, ಸಾಯಬಣ್ಣ ಆಲ್ಯಾಳ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರಡ್ಡಿ, ಸಾಹೇಬಗೌಡ ಬಿರಾದಾರ(ಗೊಟಗುಣಕಿ), ಸಿದ್ದನಗೌಡ ಕಾರಗನೂರ, ಎಚ್.ಎಸ್.ಢವಳಗಿ, ಅನೀಲ ಪಾಟೀಲ(ಗುತ್ತಿಗೆದಾರ), ಶರಣಪ್ಪ ಕೊಳ್ಳಿ, ಮಾಳಪ್ಪ ಮಾಳಳ್ಳಿ, ಎಚ್.ಎಸ್.ಢವಳಗಿ, ಪ್ರಕಾಶ ಯರನಾಳ, ಗುತ್ತಿಗೆದಾರ ಎಸ್.ಎಂ.ಅವತಾಡೆ ಉಪಸ್ಥಿತರಿದ್ದರು. ರಾಜೇಶ ಮಸರಕಲ್ಲ ಸ್ವಾಗತಿಸಿದರು. ನ್ಯಾಯವಾದಿ ಪ್ರಭಾಕರ ಗುಡಗುಂಟಿ ನಿರೂಪಿಸಿದರು. ಪ್ರಭುಗೌಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts