More

    ಕೊಬ್ಬರಿ ಖರೀದಿಗೆ ನೋಂದಣಿ ಮತ್ತಷ್ಟು ತಡ!?

    *ಜವಬ್ಧಾರಿ ಮರೆತ ಜಿಲ್ಲಾಡಳಿತ; ತೆಂಗು ಬೆಳೆಗಾರರಲ್ಲಿ ಆತಂಕ

    ತುಮಕೂರು: ಕನಿಷ್ಟ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿಗೆ ಜ.20ರಿಂದ ಆರಂಭವಾಗಬೇಕಿದ್ದ ರೈತರ ನೋಂದಣಿ ಪ್ರಕ್ರಿಯೆ ಮತ್ತಷ್ಟು ದಿನ ಮುಂದಕ್ಕೆ ಹೋಗಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

    ಕೊಬ್ಬರಿ ಖರೀದಿಗೆ ಜ.20ರಿಂದ ನೋಂದಣಿ ಆರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಸೂಚಿಸಿದೆಯಾದರೂ ನೋಂದಣಿ ಪ್ರಕ್ರಿಯೆಗೆ ಅಗತ್ಯವಾದ ತಂತ್ರಾAಶ ಅಭಿವೃದ್ಧಿ ಪಡಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ತಡಮಾಡಿರುವುದು ಸಮಸ್ಯೆ ತಂದೊಡ್ಡಿದೆ.

    ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸೂಚನೆಯಂತೆ ಜಿಲ್ಲೆಯ 21 ಖರೀದಿ ಕೇಂದ್ರಗಳಲ್ಲಿ ಜ.20ರಿಂದಲೇ ನೋಂದಣಿ ಹಾಗೂ ಖರೀದಿ ಪ್ರಕಿಯೆಗಳು ಏಕಕಾಲದಲ್ಲಿ ಆರಂಭವಾಗಬೇಕಿತ್ತು ಆದರೆ, ಈ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಮಾಹಿತಿ ಇಲ್ಲದಿರುವುದು ತೆಂಗು ಬೆಳೆಗಾರರ ಆತಂಕ ಹೆಚ್ಚಿಸಿದೆ.

    ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಒಟ್ಟು 21 ಖರೀದಿ ಕೇಂದ್ರ ತೆರೆಯಲು ನಿರ್ಣಯಿಸಲಾಗಿದ್ದು ನೋಂದಣಿ ಆರಂಭದ ಯಾವುದೇ ಕುರುಹುಗಳೂ ಎಪಿಎಂಸಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

    ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆಯಲ್ಲಿ ತಲಾ 6 ಖರೀದಿ ಕೇಂದ್ರ, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿನಲ್ಲಿ ತಲಾ 2, ತುಮಕೂರು, ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ತಲಾ 1 ಸೇರಿ ಒಟ್ಟು 21 ಖರೀದಿ ಕೇಂದ್ರಗಳನ್ನು ತೆರೆಯಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಿತ್ತು.

    https://www.vijayavani.net/tumakuru-registration-for-purchase-copra-jan20-only-three-months

    ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ.

    ಖರೀದಿ ಸಂಸ್ಥೆಗಳು ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಜ.20ರಿಂದ 45 ದಿನ ನೋಂದಣಿ ಮಾಡಬೇಕು, ನೋಂದಣಿಯ ಜತೆಗೆ ಖರೀದಿ ಕೂಡ ನಡೆಯಬೇಕು ಎಂದು ಆದೇಶಿಸಲಾಗಿದ್ದು ಈಗ ಖರೀದಿ ಅವದಿ ಕಡಿಮೆಯಾಗಲಿದೆ ಎಂಬ ಆತಂಕ ರೈತರಲ್ಲಿದ್ದು ಇದರ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ.

    ಖರೀದಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಅಳವಡಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ತಂತ್ರಾAಶ ಅಭಿವೃದ್ಧಿ ಪಡಿಸಲು ಸ್ವಲ್ಪ ತಡವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದ್ದು ನೋಂದಣಿ ದಿನಾಂಕ ಮುಂದೂಡಿ ಆದೇಶಿಸಬಹುದು. ನೋಂದಣಿ ತಡವಾದರೆ ಖರೀದಿಗೂ ಸಹಜವಾಗಿಯೇ ದಿನಾಂಕ ವಿಸ್ತರಣೆಯಾಗಲಿದೆ.
    ಕಿರಣ್
    ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ

    https://www.vijayavani.net/wp-admin/post.php?post=1948744&action=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts