More

    ಚುನಾವಣಾ ಕರಪತ್ರಗಳಲ್ಲಿ ಮುದ್ರಕರ ಹೆಸರು ಕಡ್ಡಾಯ

    ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಕರಪತ್ರಗಳಲ್ಲಿ ಮುದ್ರಕರ ಹೆಸರು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾನ್ಯತೆ ಪಡೆದ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಸೂಚನೆಗಳನ್ನು ನೀಡಿದರು.

    ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 127-ಎ ಪ್ರಕಾರ ಮುದ್ರಣ ಮಾಡುವ ಚುನಾವಣಾ ಕರಪತ್ರಗಳು, ಪೋಸ್ಟರ್, ಪ್ಲೆಕಾರ್ಡ್ಗಳ ಮುಂಭಾಗದಲ್ಲಿ ಮುದ್ರಕ, ಪ್ರಕಾಶಕನ ಹೆಸರು, ವಿಳಾಸ ಹೊಂದಿರುವುದು ಕಡ್ಡಾಯ ಎಂದರು.

    ಚುನಾವಣೆಗೆ ಸಂಬAಧಿಸಿದAತೆ ಕೈಯಿಂದ ನಕಲು ಮಾಡುವುದನ್ನು ಹೊರತುಪಡಿಸಿ ಮುದ್ರಿಸುವ ಅಥವಾ ಯಾವುದೇ ಬಹುಗ್ರಾಫ್ ಮಾಡಲಾದ ಚುನಾವಣಾ ಕರಪತ್ರ, ಪೋಸ್ಟರ್‌ಗಳ ಮುಂಭಾಗದಲ್ಲಿ ಮುದ್ರಕ, ಪ್ರಕಾಶಕನ ಹೆಸರು, ವಿಳಾಸ ಹೊಂದಿರುವುದು ಕಡ್ಡಾಯ ಎಂದು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

    ಚುನಾವಣಾ ಕರಪತ್ರಗಳ ಮುದ್ರಕ, ಪ್ರಕಾಶಕರಿಂದ ದೃಢೀಕರಣ(ದ್ವಿಪ್ರತಿಯಲ್ಲಿ) ಪತ್ರ ಹಾಗೂ ಮುದ್ರಕನನ್ನು ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ಸಹಿ ಮಾಡಲ್ಪಟ್ಟ ಗುರುತಿನ ದಾಖಲಾತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.

    ಆಯೋಗದ ನಿರ್ದೇಶನವನ್ನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 2000 ರೂ. ವರೆಗೆ ದಂಡ ಅಥವಾ ಎರಡೂ ದಂಡನೆಗೆ ಗುರಿಯಾಗಬೇಕಾಗುತ್ತದೆ. ಮುದ್ರಕರು ಮುದ್ರಿತ ವಸ್ತುಗಳ 4 ಪ್ರತಿಗಳನ್ನು ಹಾಗೂ ಮುದ್ರಣವಾದ 10 ದಿನಗಳೊಳಗೆ ಘೋಷಣೆಯನ್ನು ಸಲ್ಲಿಸಬೇಕು. ಕರಪತ್ರಗಳನ್ನು ರಾಜ್ಯ ರಾಜಧಾನಿಯಲ್ಲಿ ಮುದ್ರಿಸಿದ್ದರೆ ಮುದ್ರಕನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಹಾಗೂ ಜಿಲ್ಲೆಯಲ್ಲಿ ಮುದ್ರಿಸಿದ್ದರೆ ಜಿಲ್ಲಾ ಮ್ಯಾಜಿಸ್ಟೆçÃಟ್ ಅವರಿಗೆ ತನ್ನ ಘೋಷಣಾ ಪತ್ರವನ್ನು ಸಲ್ಲಿಸಬೇಕು ಎಂದರು.

    ಘೋಷಣೆಯನ್ನು ಸಲ್ಲಿಸದಿದ್ದರೆ ನಿಬಂಧನೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಿಬಂಧನೆಗಳನ್ನು ಉಲ್ಲಂಘಿಸಿದವರ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಚುನಾವಣೆ ಸಭೆಯ ದಿನಾಂಕ, ಸಮಯ, ಸ್ಥಳ ಮತ್ತಿತರ ವಿವರ ಅಥವಾ ಚುನಾವಣಾ ಏಜೆಂಟ್, ಕಾರ್ಯಕರ್ತರಿಗೆ ದಿನನಿತ್ಯದ ಸೂಚನೆಗಳನನು ಪ್ರಕಟಿಸುವ ಕರಪತ್ರ, ಫಲಕ ಅಥವಾ ಪೋಸ್ಟರ್‌ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲವೆಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

    ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ರೇಷ್ಮ, ಚುನಾವಣಾ ಶಿರಸ್ತೇದಾರ್ ಮಂಜುನಾಥ, ರವಿಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts