More

    ಕುಂಜೂರು ದೇವಸ್ಥಾನದಲ್ಲಿ 13ನೇ ಶತಮಾನದ ತುಳು ಶಾಸನ

    ಪಡುಬಿದ್ರಿ: ಕಾಪು ತಾಲೂಕು ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಮುಂಭಾಗದ ಗೋಪುರದ ಇಕ್ಕೆಲಗಳಲ್ಲಿ ಇರುವ ಎರಡು ಶಾಸನಗಳು 13ನೇ ಶತಮಾನದ್ದಾಗಿದ್ದು, ತುಳು ಲಿಪಿಯಲ್ಲಿವೆ ಎಂದು ಇತಿಹಾಸ ಸಂಶೋಧಕ ಬಂಟಕಲ್ಲಿನ ಸುಭಾಷ್ ನಾಯಕ್ ತಿಳಿಸಿದ್ದಾರೆ.
    ಎರಡು ಶಾಸನಗಳಲ್ಲಿ ಒಂದರಲ್ಲಿ ಅಕ್ಷರಗಳು ನಶಿಸಿವೆ. ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿದ್ದು, ಓದಲಾಗದ ಸ್ಥಿತಿಯಲ್ಲಿದೆ. ಇನ್ನೊಂದು ಶಾಸನದ ಕೆಲವು ಅಕ್ಷರಗಳು ನಶಿಸಿದ್ದರೂ ಓದಲು ಸಾಧ್ಯವಿದೆ. ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ-ಚಂದ್ರರ ಉಬ್ಬುಶಿಲ್ಪವಿದೆ. ಶಾಸನದಲ್ಲಿ ಉಲ್ಲೇಖವಾಗಿರುವ ವಲ್ಲ ಮಹಾದೇವನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230-1250 ಆಗುತ್ತದೆ. ತುಳುಲಿಪಿಯ ಶಾಸನದ ಅಧ್ಯಯನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
    ಗುರುಪ್ರಸಾದ ನಾಯಕ್ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ್ದು, ದೇವಸ್ಥಾನದ ವ್ಯವಸ್ಥಾಪಕ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts