More

    ಟಿಎಸ್​ಎಸ್​ನಲ್ಲಿ ಹಸಿ ಅಡಕೆ ಟೆಂಡರ್

    ಶಿರಸಿ: ಇಲ್ಲಿನ ಟಿಎಸ್​ಎಸ್ ಸಂಸ್ಥೆ ಹಸಿ ಅಡಕೆ ಟೆಂಡರ್ ವ್ಯವಸ್ಥೆಗೆ ಚಾಲನೆ ನೀಡಿದೆ. ಸಂಘದಲ್ಲಿ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಪ್ರತಿ ದಿನ ನಡೆಸುವ ವ್ಯವಸ್ಥೆ ಒದಗಿಸಲಾಗಿದೆ.
    ಒಂದು ವೇಳೆ ರೈತ ಸದಸ್ಯರು ಇಚ್ಛಿಸಿದಲ್ಲಿ ಸಂಘದಿಂದ ಹಸಿ ಅಡಕೆ ಪಡೆದು ಸುಲಿಸಿ, ಬೇಯಿಸಿ, ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಿ ಕೆಂಪು ಅಡಕೆಯನ್ನು ನೀಡುವ ಹಾಗೂ ಗೋಟು ಅಡಕೆ ಪಡೆದು ಒಣಗಿಸಿ, ಸುಲಿಸಿ ಆರಿಸಿದ ಚಾಲಿ ಅಡಕೆಯನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೈತ ಸದಸ್ಯರು ಕೂಲಿಕಾರ್ವಿುಕರ ತೊಂದರೆಯಿಂದಾಗಿ ತಾವು ಬೆಳೆದ ಬೆಳೆಯನ್ನು ಫಸಲು ಗುತ್ತಿಗೆ ನೀಡುತ್ತಿರುವುದರಿಂದ ಸಂಘದಲ್ಲಿ ಸದಸ್ಯರ ಪತ್ತು ಬೆಳೆಯದೇ ಇರುವುದನ್ನು ಗಮನಿಸಿ ಸಂಘದಿಂದ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ರೈತ ಸದಸ್ಯರು ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಪ್ರಯೋಜನ ಪಡೆಯಬೇಕು. ಸಂಘದಲ್ಲಿ ತಮ್ಮ ಪತ್ತನ್ನು ಸ್ಥಿರವಾಗಿಟ್ಟುಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.
    ಚಾಲನೆ: ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸಿ.ಎನ್. ಹೆಗಡೆ ಹೂಡ್ಲಮನೆ, ಗಣಪತಿ ರಾಯ್ಸದ್ ಕಲ್ಸಳ್ಳಿ, ಬಾಲಚಂದ್ರ ಹೆಗಡೆ ಕೊಡಮೂಡು ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ವ್ಯಾಪಾರಸ್ಥರಿಗೆ ಟೆಂಡರ್ ಫಾಮ್ರ್ ನೀಡುವುದರ ಮೂಲಕ ಗುರುವಾರ ಚಾಲನೆ ನೀಡಿದರು. ಈ ವೇಳೆ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
    ಮೊದಲ ದಿನ 15 ಕ್ವಿಂಟಾಲ್ ವ್ಯಾಪಾರ
    ಹಸಿ ಅಡಕೆ ಟೆಂಡರ್​ನ ಮೊದಲ ದಿನ 15 ಕ್ವಿಂಟಾಲ್ ಅಡಕೆ ವ್ಯಾಪಾರವಾಗಿದೆ. ಕ್ವಿಂಟಾಲ್ ಹಸಿರು ಅಡಕೆಗೆ ಕನಿಷ್ಠ 4,610 ರೂ. ಗರಿಷ್ಠ 4,759 ರೂ, ಗೋಟಡಕೆಗೆ ಕನಿಷ್ಠ 5,299 ರೂ., ಗರಿಷ್ಠ 5890 ರೂ., ಹಾಗೂ ತೆರಿ (ಉದುರು) ಅಡಕೆಗೆ ಕನಿಷ್ಠ 4, 700 ರೂ. ಹಾಗೂ ಗರಿಷ್ಠ 5101 ರೂ. ದರ ನಿಗದಿಪಡಿಸಲಾಗಿದೆ. ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 8277289728, 8088312312, 7760030888 ಸಂರ್ಪಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts