More

    ಭಾರತಕ್ಕೆ ಫೆ.24-25ರಂದು ಭೇಟಿ ನೀಡಲಿದ್ದಾರೆ ಟ್ರಂಪ್​: ಖಚಿತ ಪಡಿಸಿದೆ ವೈಟ್​ಹೌಸ್

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಈ ತಿಂಗಳ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವೈಟ್​ಹೌಸ್ ಮಂಗಳವಾರ ಘೋಷಿಸಿದೆ. ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲ ಭಾರತ ಪ್ರವಾಸ.

    ಅಧ್ಯಕ್ಷ ಟ್ರಂಪ್ ಮತ್ತು ಫಸ್ಟ್ ಲೇಡಿ ಮೆಲೆನಿಯಾ ಟ್ರಂಪ್​ ಫೆ.24-25ರಂದು ನವದೆಹಲಿ ಮತ್ತು ಅಹಮದಾಬಾದ್​ಗೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ವ್ಯಾಪಾರೋದ್ದೇಶದ ಪ್ರವಾಸ ಇದಾಗಿದ್ದು, ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು, ವಿವಿಧ ರೀತಿಯ ಪಾಲುದಾರಿಕೆ ಮತ್ತು ಪರಸ್ಪರ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದು ಕೂಡ ಇದೇ ವೇಳೆ ನಡೆಯಲಿದೆ ಎಂದು ವೈಟ್ ಹೌಸ್ ನ ಪತ್ರಿಕಾ ಕಾರ್ಯದರ್ಶಿ ಸ್ಟೀಫನಿ ಗ್ರಿಶಮ್ ಹೇಳಿದ್ದಾರೆ.

    ಕಳೆದ ವಾರಾಂತ್ಯದಲ್ಲಿ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ದೂರವಾಣಿ ಸಂಭಾಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಭಾರತ-ಅಮೆರಿಕದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ದೃಷ್ಟಿಯಿಂಧ ಮತ್ತು ಅಮೆರಿಕನ್ ಮತ್ತು ಭಾರತೀಯರ ನಡುವಿನ ಬಾಂಧವ್ಯ ವೃದ್ಧಿಸುವ ದೃಷ್ಟಿಯಿಂದ ಈ ಭೇಟಿ ನಿಗದಿಯಾಗಿದೆ ಎಂದು ಗ್ರಿಶಮ್ ಹೇಳಿದ್ದಾರೆ.

    ಟ್ರಂಪ್ ಅವರ ಭಾರತ ಪ್ರವಾಸ ಸಕಾಲಿಕವಾದುದಾಗಿದ್ದು, ದ್ವಿಪಕ್ಷೀಯ ವ್ಯಾಪಾರದ ವಿಚಾರಗಳನ್ನು ಬಗೆಹರಿಸುವ ದೃಷ್ಟಿಯಿಂದ ಮಹತ್ವಪೂರ್ಣವಾದುದು ಎಂದು ಇಂಡಿಯನ್ ಡಯಾಸ್ಪೋರಾದ ಮುಖ್ಯಸ್ಥ ಭಾರತೀಯ ಅಮೆರಿಕನ್ ಎಂ.ಆರ್.ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

    ಯುಎಸ್​-ಇಂಡಿಯಾ ಸ್ಟ್ರಾಟಜಿಕ್​ ಫೋರಂನ ಅಧ್ಯಕ್ಷ ಮುಕೇಶ್ ಅಘಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಮೂವರು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಇದು ಅತೀಅವಶ್ಯವಾಗಿದ್ದು, ಧನಾತ್ಮಕ ಬೆಳವಣಿಗೆ. ಈ ಅಧ್ಯಕ್ಷರೂ ಅದನ್ನು ಗೌರವಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಎರಡು ಬಾರಿ 2010 ಮತ್ತು 2015ರಲ್ಲಿ ಭಾರತಕ್ಕೆ ಆಗಮಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts