More

    ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕೋವಿಡ್ ವಿಚಾರದಲ್ಲಿ ಮೋದಿ ನಂಗೆ ಭೇಷ್ ಅಂದಿದ್ದಾರೆ ಅಂದ್ರು ಟ್ರಂಪ್ !

    ವಾಷಿಂಗ್ಟನ್: ವಿಶ್ವದ ಪ್ರಬಲ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲೂ ಭಾರತದ ಪ್ರಧಾನ ಮಂತ್ರಿಯ ಹೆಸರು ಬಳಕೆಯಾಗಿದ್ದು ಬಹುಶಃ ಇದೇ ಮೊದಲು. ರಿಪಬ್ಲಿಕ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಬಳಸಿದ್ದಾರೆ. ಅದೂ ಸುಖಾ ಸುಮ್ಮನೇ ಅಲ್ಲ, ಸ್ವತಃ ತಮ್ಮ ಆಡಳಿತವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಬಳಸಿಕೊಂಡಿದ್ದಾರೆ!

    ಚುನಾವಣಾ ಕಣದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜಾಯ್ ಬಿಡನ್​ ವಿರುದ್ಧ ವಾಗ್ದಾಳಿ ಮುಂದುವರಿಸಿದ ಟ್ರಂಪ್​, ಸ್ವೈನ್ ಫ್ಲೂ ಸೋಂಕು ಹರಡಿದಾಗ ಈ ಹಿಂದಿನ ಸರ್ಕಾರ ಅದನ್ನು ನಿರ್ವಹಿಸಿದ ರೀತಿಯೆ ಸರಿ ಇರಲಿಲ್ಲ. ಕರೋನಾ ಸೋಂಕನ್ನು ನಮ್ಮ ಆಡಳಿತ ಸಮರ್ಪಕವಾಗಿ ನಿರ್ವಹಿಸಿದೆ. ಕೋವಿಡ್ 19 ಟೆಸ್ಟಿಂಗ್​ ವಿಚಾರದಲ್ಲಿ ಭಾರತಕ್ಕಿಂತ ಬಹಳ ಮುಂದೆ ಇದ್ದೇವೆ ನಾವು. ದೊಡ್ಡ ದೊಡ್ಡ ರಾಷ್ಟ್ರಗಳು ನಡೆಸಿರುವ ಟೆಸ್ಟಿಂಗ್ ಅನ್ನು ಒಟ್ಟು ಸೇರಿಸಿದರೂ ಅಮೆರಿಕದ ಪ್ರಮಾಣಕ್ಕೆ ಸರಿಹೊಂದದು. ಕರೊನಾ ಟೆಸ್ಟಿಂಗ್​ನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತಕ್ಕಿಂತ 44 ದಶಲಕ್ಷ ಟೆಸ್ಟ್​ಗಳಷ್ಟು ಮುಂದೆ ಇದ್ದೇವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ, ಟೆಸ್ಟಿಂಗ್​ನಲ್ಲಿ ಏನು ಸಾಧನೆ ನಿಮ್ಮದು ಎಂದು ಭೇಷ್ ಹೇಳಿದ್ದಾರೆ ಗೊತ್ತ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

    ಇದನ್ನೂ ಓದಿ: ಲಡಾಕ್​ ಮುಖಭಂಗಕ್ಕೆ ಭಯಾನಕ ಸೇಡು ತೀರಿಸಬಹುದು ಕ್ಸಿ ಜಿನ್​ಪಿಂಗ್​ ಎನ್ನುತ್ತಿವೆ ವರದಿಗಳು
    ಅವರು ನೆವಡಾದ ರೆನೋದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಜಾಯ್​ ಬಿಡನ್​ ನೀಡಿದ ಹೇಳಿಕೆಯನ್ನಷ್ಟೇ ಜನರೆದುರು ಇರಿಸ್ತಾರೆ ಮಾಧ್ಯಮದವರು. ಅದಕ್ಕೆ ಮೋದಿಯವರ ಪ್ರತಿಕ್ರಿಯೆಯನ್ನೂ ನಾನಿಲ್ಲಿ ಉಲ್ಲೇಖಿಸಿದೆ ಎಂದೂ ಅವರು ಅದನ್ನೂ ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts