More

    ಪತ್ರಕರ್ತೆಯರಿಬ್ಬರಿಗೆ ಚೀನಾ ತೋರಿಸಿದ ಅಮೆರಿಕ ಅಧ್ಯಕ್ಷ – ಸುದ್ದಿಗೋಷ್ಠಿ ಅರ್ಧಕ್ಕೇ ಖತಂ!

    ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಸೋಮವಾರದ ತಮ್ಮ ಪತ್ರಿಕಾಗೋಷ್ಠಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೋದುದು ಈಗ ಜಗತ್ತಿನ ಗಮನ ಸೆಳೆದಿದೆ. ಏಷ್ಯನ್-ಅಮೆರಿಕನ್ ಪತ್ರಕರ್ತೆಯರಿಬ್ಬರು ಕೇಳಿದ ಪ್ರಶ್ನೆಗೆ ಉತ್ತರ ಚೀನಾದಿಂದಲೇ ಪಡೆಯಿರಿ ಎಂದು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.

    ಇದನ್ನೂ ಓದಿ: 533 ಜನರಿಗೆ COVID19 ಕೊಟ್ಟವ ಒಬ್ಬನೇ- ಘಾನಾದ ಅಧ್ಯಕ್ಷರ ಕಳವಳ !

    ಸಿಬಿಎಸ್​ ನ್ಯೂಸ್​ನ ವೈಟ್​ ಹೌಸ್ ಕರೆಸ್ಪಾಡೆಂಟ್​ ವೈಜಾ ಜಿಯಾಂಗ್​ ಅವರು, ಇಲ್ಲಿ ಅಮೆರಿಕದಲ್ಲಿ 80,000ಕ್ಕೂ ಹೆಚ್ಚು ಅಮೆರಿಕನ್ನರು ಕರೊನಾ ಸೋಂಕು ತಗುಲಿ ಮೃತಪಟ್ಟಿರುವ ಈ ಸಂದರ್ಭದಲ್ಲಿ ಕರೊನಾ ವೈರಸ್​ ಟೆಸ್ಟಿಂಗ್ ಅನ್ನು ಜಾಗತಿಕ ಸ್ಪರ್ಧೆಯಂತೆ ಯಾಕೆ ಕಾಣುತ್ತೀರಿ ಎಂದು ಅಧ್ಯಕ್ಷ ಟಂಪ್​ಗೆ ಪ್ರಶ್ನೆ ಕೇಳಿದ್ದರು.

    ಇದಕ್ಕೆ ಟ್ರಂಪ್​, ಬಹುಶಃ ನೀವು ಇದನ್ನು ಚೀನಾವನ್ನೇ ಕೇಳಬೇಕು. ಅದನ್ನು ನನ್ನ ಬಳಿ ಕೇಳಬೇಡಿ. ಚೀನಾವನ್ನೇ ಆ ಪ್ರಶ್ನೆ ಕೇಳಿ ಒಕೆ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲ, ಮುಂದಿನ ಪ್ರಶ್ನೆಗಾಗಿ ಸಿಎನ್​ಎನ್​ನ ವೈಟ್​ಹೌಸ್ ಕರೆಸ್ಪಾಂಡೆಂಟ್ ಕೈಟ್ಲನ್ ಕೊಲಿನ್ಸ್​ ಅವರತ್ತ ನೋಡಿದರು.

    ಇದನ್ನೂ ಓದಿ: VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!

    ಆದರೆ, ಇದೇ ವೇಳೆ, ತನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗಲಿಲ್ಲ ಎಂಬ ಕಾರಣಕ್ಕೆ ವೈಜಾ ಜಿಯಾಂಗ್​ ಪೂರಕ ಪ್ರಶ್ನೆಯಾಗಿ, “ಸರ್ ನೀವು ಇದನ್ನು ನನ್ನನ್ನೇ ಉದ್ದೇಶಿಸಿ ಯಾಕೆ ಹೇಳುತ್ತೀರಿ?” ಎಂದು ಕೇಳಿದರು. (ಜಿಯಾಂಗ್ ಅವರು ಎರಡು ವರ್ಷದವರಿದ್ದಾಗ ಚೀನಾದಿಂದ ಅಮೆರಿಕಕ್ಕೆ ಬಂದು ನೆಲೆಸಿದವರು.)

    ಕೂಡಲೇ ಪ್ರತಿಕ್ರಿಯಿಸಿದ ಟ್ರಂಪ್​, ಹೌದು ನಿಮಗೇ ಹೇಳ್ತಾ ಇರೋದು. ನಿಶ್ಚಿತವಾಗಿ ನಿನಗೇ ಹೇಳ್ತಾ ಇರೋದಲ್ಲ. ಆ ರೀತಿ ಕಿರಿಕಿರಿ ಉಂಟು ಮಾಡುವ ಪ್ರಶ್ನೆಗಳನ್ನು ಯಾರೇ ಕೇಳಿದರೂ ಅವರಿಗೂ ಇದನ್ನೇ ಹೇಳೋದು ಎಂದು ಉತ್ತರ ಕೊಟ್ಟರು. ಅದೇನೂ ಕಿರಿಕಿರಿ ಉಂಟುಮಾಡುವ ಪ್ರಶ್ನೆಯಲ್ಲ ಎಂದು ಜಿಯಾಂಗ್ ಹೇಳಿದ ಕೂಡಲೇ, ಅದಕ್ಕೆ ಯಾಕೆ ಅಷ್ಟು ಮಹತ್ವ ಕೊಡ್ತೀರಿ? ಎಂದು ಟ್ರಂಪ್ ಮರುಸವಾಲೆಸೆದರು. ಅಲ್ಲದೆ, ಬೇರೆ ಪ್ರಶ್ನೆಗಾಗಿ ಬೇರೊಬ್ಬ ವರದಿಗಾರರ ಕಡೆಗೆ ನೋಡಿದರು.

    ಇದನ್ನೂ ಓದಿ:  ಐಎಸ್​ಐಎಸ್ ಕಮಾಂಡರ್ ಜಿಯಾ ಉಲ್ ಹಕ್ ಸೇರಿ ಮೂವರು ಪ್ರಮುಖರು ಆಫ್ಘನ್​ನಲ್ಲಿ ಸೆರೆ

    ಈ ಸಂದರ್ಭದಲ್ಲಿ ಕೊಲಿನ್ಸ್​, ನಾನೂ ಎರಡು ಪ್ರಶ್ನೆ ಕೇಳುವುದಿದೆ ಎಂದರು. ಇಲ್ಲ ಉತ್ತರಿಸಲ್ಲ ಎಂದು ಟ್ರಂಪ್​ ಕೊಲಿನ್ಸ್​ಗೆ ಪ್ರತಿಕ್ರಿಯಿಸಿದರು. ಆದರೆ, ನೀವು ನನಗೆ ಅವಕಾಶ ಕೊಟ್ಟಿದ್ರಿ ಎಂದು ಕೊಲಿನ್ಸ್ ಹೇಳಿದಾಗ, ಹೌದು ಕೊಟ್ಟಿದ್ದೆ, ನೀವು ಬಳಸಿಕೊಳ್ಳಲಿಲ್ಲ. ಹಾಗಾಗಿ ಬೇರೆಯವರಿಗೆ ಅವಕಾಶ ಕೊಡ್ತಾ ಇದ್ದೇನೆ ಎಂದರು. ಇದಕ್ಕೆ ಕೊಲಿನ್ಸ್, ನಾನು ನನ್ನ ಸಹಪತ್ರಕರ್ತೆಯ ಪ್ರಶ್ನೆಗಳು ಮುಗಿಯದ ಕಾರಣ ಸುಮ್ಮನಿದ್ದೆ ಎಂದು ಹೇಳುತ್ತಿದ್ದಂತೆ, ಲೇಡಿಸ್ ಆ್ಯಂಡ್ ಜಂಟಲ್​ಮನ್ ಥಾಂಕ್ಯೂ ವೆರಿಮಚ್​ ಎಂದು ಹೇಳಿದ ಟ್ರಂಪ್ ಅವರು ಸುದ್ದಿಗೋಷ್ಠಿ ಅರ್ಧಕ್ಕೇ ಮೊಟಕುಗೊಳಿಸಿ ರೋಸ್​ ಗಾರ್ಡನ್​ನಿಂದ ಹೊರಟು ಹೋದರು. ಈ ವಿಷಯದ ಬಗ್ಗೆಯೇ ಅಲ್ಲಿನ ಮಾಧ್ಯಮಗಳೀಗ ಚರ್ಚೆ ಆರಂಭಿಸಿವೆ. (ಏಜೆನ್ಸೀಸ್)

    ತಬ್ಲಿಘಿಗಳನ್ನು ಭಯೋತ್ಪಾದಕರಂತೆ ಕಾಣಬೇಕು ಎಂದಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts