ಟ್ರೋಫಿ ತಯಾರಿಕಾ ಘಟಕ ಅಗ್ನಿಗೆ ಆಹುತಿ

blank

ಎನ್.ಆರ್.ಪುರ: ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಪ್ರಖ್ಯಾತ ಶೆಟ್ಟಿ ಮಾಲೀಕತ್ವದ ಟ್ರೋಫಿ (ಮೊಮೆಂಟೋ) ತಯಾರಿಕೆಯ ಸಣ್ಣ ಕೈಗಾರಿಕಾ ಘಟಕಕ್ಕೆ ಶುಕ್ರವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ.

blank

ಪ್ರಖ್ಯಾತ ಶೆಟ್ಟಿ 10 ವರ್ಷದ ಹಿಂದೆ ಮನೆಯ ಹಿಂಭಾಗದಲ್ಲಿ ಕ್ರೀಡಾ ಟ್ರೋಫಿಗಳು ಹಾಗೂ ನೆನಪಿನ ಕಾಣಿಕೆಗಳನ್ನು ತಯಾರಿಸುವ ಘಟಕ ಪ್ರಾರಂಭಿಸಿದ್ದರು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಕೈಗಾರಿಕಾ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ಯಂತ್ರಗಳು, ಟಿನ್‌ಗಳು ಹೊತ್ತಿ ಉರಿಯುವ ಶಬ್ದಕ್ಕೆ ಪಕ್ಕದ ಮನೆಯವರಿಗೆ ಎಚ್ಚರವಾಗಿ ತಕ್ಷಣ ಪ್ರಖ್ಯಾತ ಶೆಟ್ಟಿ ಕುಟುಂಬದವರನ್ನು ಎಚ್ಚರಿಸಿದ್ದಾರೆ. ಮನೆಯವರು ಮನೆಗೆ ಬೆಂಕಿ ತಗುಲದಂತೆ ಎಚ್ಚರವಹಿಸಿ ಕೊಪ್ಪ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲೇ ಜಿಗ್ ಸಾ ಮಿಷನ್, ಏರ್ ಕಂಪ್ರೆಷರ್, ಕಟಿಂಗ್ ಮಷಿನ್, ಟ್ರೋಫಿಗಳು, ವಿವಿಧ ಯಂತ್ರಗಳು, ಕೈಗಾರಿಕಾ ಘಟಕದ ಛಾವಣಿ ಸುಟ್ಟುಹೋಗಿವೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಗ್ರಾಮ ಲೆಕ್ಕಾಧಿಕಾರಿ ಪ್ರಿಯಾಂಕಾ, ಸೀತೂರು ಪಿಡಿಒ ಶ್ರೀನಿವಾಸ್, ಗ್ರಾಪಂ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.

Share This Article
blank

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

ನಿಮ್ಮ ಪತಿ ಬಿಗಿಯಾದ ಬೆಲ್ಟ್ ಧರಿಸುತ್ತಿದ್ದಾರಾ? ಅವರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಿ..belt

belt: ಇತ್ತೀಚಿನ ದಿನಗಳಲ್ಲಿ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ, ಬೆಲ್ಟ್ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು…

blank