More

    ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನ ಆಚರಣೆ

    ಚಿಕ್ಕಮಗಳೂರು: ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂದು ಜಿಲ್ಲಾ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ ತಿಳಿಸಿದರು.

    ನಗರದ ಎಂ.ಜಿ.ರಸ್ತೆಯ ಬಸವಣ್ಣ ಗುಡಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಪಂಚಾಚಾರ್ಯ ಸೇವಾ ಸಮಿತಿ, ಗುಂಡಭಕ್ತ ಮಂಡಳಿಯಿAದ ಆಯೋಜಿಸಲಾಗಿದ್ದ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ೧೧೭ನೇ ಜನ್ಮದಿನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವತತ್ವ ಭಿತ್ತಿ ಇತಿಹಾಸದ ಸುವರ್ಣಾಕ್ಷರದಲ್ಲಿ ದಾಖಲಿಸುಂಥ ಸಾಧನೆಯನ್ನು ಸಿದ್ಧಗಂಗಾ ಶ್ರೀಗಳು ಮಾಡಿದ್ದಾರೆ. ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಶ್ರೀಗಳು ಮೀಸಲಿಟ್ಟಿದ್ದರು ಎಂದು ಹೇಳಿದರು.
    ಶ್ರೀ ಶಿವಕುಮಾರ ಸ್ವಾಮೀಜಿ ಅವರು ಹಸಿದು ಬಂದವರಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದರು. ೧೧೧ ವರ್ಷಗಳ ತುಂಬು ಜೀವನ ನಡೆಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ, ವಸತಿ ಕಲ್ಪಿಸಿ ಸಮಾಜಕ್ಕೆ ಮಾದರಿಗಿದ್ದರು. ಇಂಥ ಶ್ರೀಗಳ ಜಯಂತಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
    ವೀರಶೈವ ಸಮಾಜದ ಮುಖಂಡ ಜಿ.ವೀರೇಶ್ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಕೆಲಸದಲ್ಲಿದ್ದಾರೆ. ಪ್ರತಿ ವರ್ಷವು ಶ್ರೀಗಳ ಜನ್ಮದಿನದ ಅಂಗವಾಗಿ ಮಠಕ್ಕಾಗಮಿಸಿ ಕೈಲಾದ ಸೇವೆ ಸಲ್ಲಿಸಿ ಜನ್ಮದಿನವನ್ನು ಕುಟುಂಬದ ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ ಎಂದರು.
    ಜಾತಿ, ಧರ್ಮ ಮೀರಿ ಮಕ್ಕಳಿಗೆ ವಿದ್ಯಾದಾನ ಮಾಡಿ ಸಮಾಜದ ಏಳಿಗೆಗೆ ದುಡಿದಿರುವ ಶ್ರೀಗಳಿಗೆ ಸರ್ಕಾರ ಶೀಘ್ರದಲ್ಲೇ ಭಾರತ ರತ್ನ ನೀಡಿ ಗೌರವಿಸಬೇಕು. ಇಂಥ ಮಹಾನೀಯರು ಜನ್ಮವೆತ್ತ ನಾಡಿನಲ್ಲಿ ನಾವೆಲ್ಲರೂ ಜನಿಸಿರುವುದಕ್ಕೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ ನಗರ ವೀರಶೈವ ಸಮಾಜದ ಅಧ್ಯಕ್ಷ ಅಶೋಕ್, ಮುಖಂಡರಾದ ಎಂ.ಬಿ. ಅಶೋಕ್‌ಕುಮಾರ್, ಬಿ.ಆರ್.ಜಯಪ್ರಕಾಶ್, ಕಾಂತರಾಜ್, ಎ.ಎಸ್.ಎಸ್.ಆರಾಧ್ಯ, ಲೋಕೇಶ್, ಉಮೇಶ್, ಗಂಗಾಧರಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts