More

    ಬೊಮ್ಮಲಾಪುರದ ತ್ರೀಪುರಾಂತಕೀ ಅಮ್ಮನವರ ರಾಜಗೋಪುರ ಲೋಕಾರ್ಪಣೆ 15ಕ್ಕೆ

    ಕೊಪ್ಪ: ಸುಮಾರು 650 ವರ್ಷ ಇತಿಹಾಸ ಹೊಂದಿರುವ ಬೊಮ್ಮಲಾಪುರದ ತ್ರೀಪುರಾಂತಕೀ ಅಮ್ಮನವರ ಸನ್ನಿಧಿಯಲ್ಲಿ ಸುಮರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರವನ್ನು 15 ರಂದು ಶೃಂಗೇರಿಯ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ.
    ತ್ರಿಪುರಾಂತಕಿ ಅಮ್ಮನವರು ಮೂರ್ತಿಯಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತೀಯ ತ್ರಿಕೂಟವಾಗಿದ್ದು. ಈ ಮೂರು ದೇವರು ಒಂದೇ ಬಿಂಬದಲ್ಲಿ ಭಕ್ತಾಧಿಗಳಿಗೆ ಕಾಣಸಿಗುತ್ತಾರೆ. ಅದ್ದರಿಂದ ಇಲ್ಲಿ ದೇವರಿಗೆ ಪ್ರತಿ ವರ್ಷ ಮೂರು ರೀತಿಯಲ್ಲಿ ಪೂಜಾ ವಿಧಾನಗಳು ನಡೆಯುತ್ತದೆ.
    ಪ್ರಸ್ತುತ ದೇವಸ್ಥಾನ ಒರುವ ಸ್ಥಳದಲ್ಲಿ ಅಡಕೆ ರೂಪದ ಉದ್ಬವ ಶಿಲೆಗಳು ಇರುವ ಕಾರಣ ಮಲೆನಾಡಿಗರು ಅಡಕೆಯ ಅಧಿದೇವತೆ ಎಂದು ಸಹ ಅಮ್ಮನವರನ್ನು ಕರೆಯುತ್ತಾರೆ. ಇಂದು ನಡೆಯಲಿರುವ ರಾಜಗೋಪುರ ಉದ್ಘಾಟನೆ ಅಮಗವಾಗಿ ದೇವಾಲಯವನ್ನು ತಳಿರು-ತೋರಣ, ಹೂವಿನಿಂದ ಅಲಂಕರಿಸಲಾಗಿದೆ. ಸುಮಾರು ಮೂರು ಸಾವಿರ ಭಕ್ತಾಧಿಗಳು ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುವಂತೆ ಮಂಟಪ ಹಾಕಲಾಗಿದೆ. ಸೂರ್ಯ ದೇವಸ್ಥಾನದಿಂದ ಬೊಮ್ಮಲಾಪುರದವರೆಗೆ ಸ್ವಾಗತ ಗೋಪುರ ಜತೆಗೆ ಕೇಸರಿ ಬಾವುಟ ಮತ್ತು ಬಂಟಿಂಗ್ಸ್‌ಗಳಿಂದ ಶೃಂಗರಿಸಲಾಗಿದೆ.
    ಮಲೆನಾಡು ಭಾಗದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಸಾವಿರಾರು ಭಕ್ತಧಿಗಳು ಭಾಗಿಯಾಗಲಿದ್ದಾರೆ. ಶೃಂಗೇರಿ ಶ್ರೀಗಳು ಲೋಕಾರ್ಪಣೆ ಹಾಗೂ ದೇವತಾ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts