More

    ವಿಧಾನಸಭೆ ಅಧಿವೇಶನ ವೇಳೆ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಬಿಜೆಪಿ ಶಾಸಕ

    ಗುವಾಹಟಿ: ತ್ರಿಪುರಾ ವಿಧಾನಸಭೆ ಅಧಿವೇಶನದ ವೇಳೆ ಬಿಜೆಪಿ ಶಾಸಕ ನೀಲಿ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಬಾಗ್​ಬಾಸ್​ ಕ್ಷೇತ್ರದ ಬಿಜೆಪಿ ಶಾಸಕ ಜದವ್​ ಲಾಲ್​ನಾಥ್ ಬಜೆಟ್​​ ಅಧಿವೇಶನದ ವೇಳೆ ಚರರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ.

    ನೀಲಿ ಚಿತ್ರ ವೀಕ್ಷಣೆ ಕುರಿತು ಖುದ್ದು ಹಾಜರಾಗಿ ಸ್ಪಷ್ಟನೆ ನೀಡುವಂತೆ ಶಾಸಕ ಜದವ್​ ಲಾಲ್​ ನಾಥ್​ಗೆ ಸೂಚಿಸಿದೆ. ಅಶ್ಲೀಲ ಚಿತ್ರ ವೀಕ್ಷಣೆ ಕುರಿತು ಶಾಸಕ ನಾಥ್​ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಇದನ್ನು ಓದಿ: ಇಂದೋರ್​ನಲ್ಲಿ 25ಕ್ಕೂ ಹೆಚ್ಚು ಜನ ದೇವಸ್ಥಾನದ ಬಳಿ ಬಾವಿಗೆ ಬಿದ್ದ ಪ್ರಕರಣ; 8 ಜನ ಮೃತ…

    ಬಿಜೆಪಿ ಶಾಸಕರ ಈ ನಡೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಜದವ್​ ಲಾಲ್​ನಾಥ್​ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.

    ಇತ್ತೀಚಿಗೆ ಬಿಹಾರದ ರಾಜಧಅನಿ ಪಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆಗಳಲ್ಲಿ ಜಾಹಿರಾತು ಪ್ರಸಾರ ಮಾಡುವ ವೇಳೆ ನೀಲಿ ಚಿತ್ರ ಪ್ರದರ್ಶನವಾಗಿದ್ದಿ ಇತ್ತೀಚಿಗೆ ಸುದ್ದಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts