More

    ಜಿಲ್ಲಾ ಅಧಿಕೃತ ಪ್ರತಿನಿಧಿಗಳ ಸಂಘದಿಂದ ಶ್ರದ್ಧಾಂಜಲಿ

    ಮೈಸೂರು: ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದಿಂದ ಚಿಕ್ಕ ಗಡಿಯಾರದ ಮುಂಭಾಗ ಶನಿವಾರ ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಗೌರವಾಧ್ಯಕ್ಷರೂ ಆಗಿದ್ದ ಮಾಜಿ ಶಾಸಕ ವಾಸು ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಸಂಘದ ಪ್ರಧಾನ ಕಾರ್ಯದರ್ಶಿ ಎ.ರವಿ ಮಾತನಾಡಿ, ವಾಸು ಅವರು ಸಮಾಜಮುಖಿಯಾಗಿ ಯಾವಾಗಲೂ ಚಿಂತಿಸುತ್ತಿದ್ದರು. ತಮ್ಮ ಬಳಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಶಾಸಕರಾಗಿದ್ದಾಗ ಮೈಸೂರಿನಲ್ಲಿ ಹಲವು ಶಾಶ್ವತ ಯೋಜನೆಗಳನ್ನು ತಂದು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ, ಮಹಾರಾಣಿ ಕಾಲೇಜು, ಟ್ರಾಮಾ ಸೆಂಟರ್, ಜಿಲ್ಲಾಸ್ಪತ್ರೆ, ಪಂಚಕರ್ಮ ಆಸ್ಪತ್ರೆ, ಆರ್ಯುವೇದ, ಇಎಸ್‌ಐ ಸೇರಿದಂತೆ ಹಲವು ಕಟ್ಟಡಗಳ ನಿರ್ಮಾಣಕ್ಕೆ ಕಾರಣಕರ್ತರು. ಅವರು ಈ ಆಸ್ಪತ್ರೆಗಳನ್ನು ತರದೆ ಹೋಗಿದ್ದರೆ ಕೋವಿಡ್ ಸಮಯದಲ್ಲಿ ಸಾಕಷ್ಟು ಸಾವು, ನೋವು ತಡೆಯಲು ಸಾಧ್ಯ ಆಗುತ್ತಿರಲಿಲ್ಲ ಎಂದು ಸ್ಮರಿಸಿದರು.
    ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ರವಿಕುಮಾರ್ ಮಾತನಾಡಿ, ವಾಸು ಅವರು ಪತ್ರಿಕಾರಂಗವನ್ನು ಲಾಭದಾಯಕ ಉದ್ಯಮ ಎಂದು ಭಾವಿಸಲಿಲ್ಲ. ಹಾಗಾಗಿ ಅವರು ನಡೆಸುತ್ತಿದ್ದ ಪತ್ರಿಕೆಗಳಿಗೆ ನಾಲ್ಕಾರು ಕುಟುಂಬಗಳ ಬದುಕು ನಡೆಯುತ್ತದೆ. ಪತ್ರಿಕಾ ವಿತರಕರ ಕುಟುಂಬಗಳ ಜೀವನವನ್ನು ಭದ್ರವಾಗಿಸಲು ಹಲವು ಯೋಜನೆ ರೂಪಿಸಿದ್ದರು ಎಂದರು.
    ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ ಅವರು ತಮ್ಮ ಹಾಗೂ ವಾಸು ಅವರ ಒಡನಾಟವನ್ನು ನೆನೆದರು. ಅವರ ಆದರ್ಶ ನಮಗೆ ದಾರಿದೀಪ ಎಂದರು. ವಿತರಕರ ಸಂಘದ ಅಧ್ಯಕ್ಷರಾದ ಸುರೇಶ್, ಉಪಾಧ್ಯಕ್ಷ ಶಾಂತೇಶ್, ಬಾಬು, ಸಹ ಕಾರ್ಯದರ್ಶಿ ಚಂದ್ರು, ವಿವಿಧ ಪತ್ರಿಕೆ ಪ್ರಸರಣ ವಿಭಾಗದ ಗೋಪಿನಾಥ್, ಗಣೇಶ, ಸಂತೋಷ್, ಕೃಷ್ಣ, ಗಿರೀಶ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಮದೇವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts