ಪಾರ್ಕ್ ಮಾಡಿದ ಕಾರಿನ ಕನ್ನಡಿಗಳಲ್ಲಿ ನಿಮ್ಮ ಮುಖ ನೋಡಿಕೊಳ್ತೀರಾ? ಇದು ಜಸ್ಟ್​ ಅಭ್ಯಾಸವಲ್ಲ, ಇದರ ಹಿಂದಿದೆ ಅಚ್ಚರಿ ಸಂಗತಿ! Glasses In Stores

ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಪದೇ ಪದೇ ಪ್ರತಿಬಿಂಬ ನೋಡಿಕೊಳ್ಳುವುದು ಕೇವಲ ಸೌಂದರ್ಯ ಪ್ರಜ್ಞೆಯಲ್ಲ, ಬದಲಾಗಿ ನಮ್ಮ ಮನಸ್ಸಿನ ಆಲೋಚನೆಗಳು ಮತ್ತು ಸಾಮಾಜಿಕ ವರ್ತನೆಯ ಪ್ರತಿಬಿಂಬವಾಗಿದೆ ಎಂದು ಮನೋವಿಜ್ಞಾನ ವಿವರಿಸುತ್ತದೆ.
Glasses In Stores
ಪಾರ್ಕ್ ಮಾಡಿದ ಕಾರಿನ ಕನ್ನಡಿಗಳಲ್ಲಿ ನಿಮ್ಮ ಮುಖ ನೋಡಿಕೊಳ್ತೀರಾ? ಇದು ಜಸ್ಟ್​ ಅಭ್ಯಾಸವಲ್ಲ, ಇದರ ಹಿಂದಿದೆ ಅಚ್ಚರಿ ಸಂಗತಿ!
Published on: 

Glasses In Stores : ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಂಗಡಿಗಳ ಗಾಜಿನಲ್ಲಿ ಅಥವಾ ಪಾರ್ಕ್ ಮಾಡಿದ ಕಾರುಗಳ ಕನ್ನಡಿಗಳಲ್ಲಿ ತಮ್ಮ ಪ್ರತಿಬಿಂಬ ಕಂಡ ತಕ್ಷಣ, ಅನೇಕರು ಅರಿವಿಲ್ಲದಂತೆಯೇ ಕೂದಲು ಸರಿಪಡಿಸಿಕೊಳ್ಳುವುದು, ಬಟ್ಟೆ ಸರಿಮಾಡಿಕೊಳ್ಳುವುದು ಅಥವಾ ಮುಖವನ್ನು ನೋಡಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಮೇಲ್ನೋಟಕ್ಕೆ ಇದೊಂದು ತೀರಾ ಸಾಮಾನ್ಯ ಅಥವಾ ಸಣ್ಣ ಅಭ್ಯಾಸದಂತೆ ಕಂಡರೂ, ಇದರ ಹಿಂದೆ ಆಳವಾದ ಮಾನಸಿಕ ಕಾರಣಗಳಿವೆ ಎನ್ನುತ್ತಾರೆ ತಜ್ಞರು.

ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಪದೇ ಪದೇ ಪ್ರತಿಬಿಂಬ ನೋಡಿಕೊಳ್ಳುವುದು ಕೇವಲ ಸೌಂದರ್ಯ ಪ್ರಜ್ಞೆಯಲ್ಲ, ಬದಲಾಗಿ ನಮ್ಮ ಮನಸ್ಸಿನ ಆಲೋಚನೆಗಳು ಮತ್ತು ಸಾಮಾಜಿಕ ವರ್ತನೆಯ ಪ್ರತಿಬಿಂಬವಾಗಿದೆ ಎಂದು ಮನೋವಿಜ್ಞಾನ ವಿವರಿಸುತ್ತದೆ.

Also Read
9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕಂತೆ: ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟು ಹೋದ ಪೊಲೀಸ್ ಪೇದೆ..! Policeman
Glasses In Stores

ಮನೋವಿಜ್ಞಾನದ ಪ್ರಕಾರ, ಹೀಗೆ ಪ್ರತಿಬಿಂಬ ನೋಡಿಕೊಳ್ಳುವ ವ್ಯಕ್ತಿಗಳು ಇತರರು ತಮ್ಮನ್ನು ಹೇಗೆ ಅಳೆಯುತ್ತಾರೆ ಅಥವಾ ತಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದರ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ. ತಜ್ಞರು ಇದನ್ನು 'ಸೆಲ್ಫ್-ಫೋಕಸ್ಡ್ ಅಟೆನ್ಷನ್' (Self-focused attention) ಅಥವಾ ಸ್ವಯಂ-ಕೇಂದ್ರಿತ ಗಮನ ಎಂಬ ಮಾನಸಿಕ ಸ್ಥಿತಿಗೆ ಹೋಲಿಸುತ್ತಾರೆ. ಅಂದರೆ, ವ್ಯಕ್ತಿಯು ತನ್ನ ಸ್ವಂತ ರೂಪ, ಆಲೋಚನೆಗಳು ಮತ್ತು ನಡವಳಿಕೆಯ ಮೇಲೆ ಅತಿಯಾಗಿ ಗಮನಹರಿಸುವ ಸ್ಥಿತಿ ಇದಾಗಿದೆ. ಇಂತಹವರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಾಗ ಕೇವಲ ತಮ್ಮನ್ನು ತಾವು ನೋಡಿಕೊಳ್ಳುವುದಿಲ್ಲ, ಬದಲಾಗಿ ತಮ್ಮ ರೂಪದ ಬಗ್ಗೆ ತಾವೇ ವಿಮರ್ಶೆ ಮಾಡಿಕೊಳ್ಳಲು ಮತ್ತು ನ್ಯೂನತೆಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಈ ಕುರಿತು ಸಿಂಗಾಪುರದಲ್ಲಿ ನಡೆದ ಅಧ್ಯಯನವೊಂದು ಕುತೂಹಲಕಾರಿ ಅಂಶಗಳನ್ನು ಹೊರಹಾಕಿದೆ. 2024ರಲ್ಲಿ 63 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಒಳಗೊಂಡು ನಡೆಸಲಾದ ಈ ಸಂಶೋಧನೆಯಲ್ಲಿ, ಕನ್ನಡಿಯಲ್ಲಿ ತಮ್ಮ ರೂಪವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದವರು ತಮ್ಮ ಸೌಂದರ್ಯದ ಬಗ್ಗೆ ಕಡಿಮೆ ತೃಪ್ತಿ ಹೊಂದಿರುವುದು ಕಂಡುಬಂದಿದೆ.

ವಿಶೇಷವಾಗಿ, ಈಗಾಗಲೇ ತಮ್ಮ ದೇಹದ ಆಕಾರ ಅಥವಾ ಸೌಂದರ್ಯದ ಬಗ್ಗೆ ಚಿಂತೆ ಮತ್ತು ಅಸಮಾಧಾನ ಹೊಂದಿರುವವರಲ್ಲಿ ಈ ಭಾವನೆ ಮತ್ತಷ್ಟು ತೀವ್ರವಾಗಿರುತ್ತದೆ. ಅತಿಯಾಗಿ ಪ್ರತಿಬಿಂಬವನ್ನು ಗಮನಿಸುವುದು ವ್ಯಕ್ತಿಯಲ್ಲಿ ಸ್ವಯಂ-ಅಸಮಾಧಾನವನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ಅಧ್ಯಯನವು ಸ್ಪಷ್ಟಪಡಿಸಿದೆ.

Also Read
ಸ್ಕೂಲ್ ರೀ-ಯೂನಿಯನ್‌ನಲ್ಲಿ ಚಿಗುರಿದ ಪ್ರೇಮ: ಅನುಮಾನದಿಂದ ಸಹಪಾಠಿ ಜತೆ ಸಂಬಂಧಿಯನ್ನೇ ಬರ್ಬರವಾಗಿ ಕೊಂದ ಪಾಪಿ! School Reunion
Glasses In Stores

ಇದಕ್ಕೂ ಮುನ್ನ 2019ರಲ್ಲಿ 'ಬಾಡಿ ಇಮೇಜ್' (Body Image) ಎಂಬ ಪ್ರತಿಷ್ಠಿತ ನಿಯತಕಾಲಿಕೆಯಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಸಹ ಇದೇ ರೀತಿಯ ಫಲಿತಾಂಶಗಳನ್ನು ನೀಡಿತ್ತು. ಆ ಸಂಶೋಧನೆಯಲ್ಲಿ ಭಾಗವಹಿಸಿದವರಿಗೆ ಐದು ನಿಮಿಷಗಳ ಕಾಲ ಕನ್ನಡಿಯನ್ನು ನೋಡುವಂತೆ ಸೂಚಿಸಲಾಗಿತ್ತು. ಈ ವೇಳೆ, ತಮ್ಮ ದೇಹದ ಯಾವ ಭಾಗಗಳು ತಮಗೆ ಇಷ್ಟವಿಲ್ಲವೋ ಅವುಗಳ ಮೇಲೆಯೇ ಹೆಚ್ಚು ಗಮನಹರಿಸಿದವರಲ್ಲಿ ಆತ್ಮಗೌರವ (Self-esteem) ಗಣನೀಯವಾಗಿ ಕುಸಿದಿರುವುದು ಪತ್ತೆಯಾಗಿದೆ. ಅಂದರೆ, ಕನ್ನಡಿಯ ಮುಂದೆ ಹೆಚ್ಚು ಸಮಯ ಕಳೆಯುವುದು ಮತ್ತು ನಕಾರಾತ್ಮಕ ಅಂಶಗಳತ್ತ ಗಮನಹರಿಸುವುದು ಮಾನಸಿಕ ಒತ್ತಡ ಹಾಗೂ ಕೀಳರಿಮೆಗೆ ದಾರಿ ಮಾಡಿಕೊಡಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಇತರರ ಮುಂದೆ ತಾವು ಅತ್ಯುತ್ತಮವಾಗಿ ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬ ಸಹಜ ಬಯಕೆಯೇ ಅನೇಕರನ್ನು ಹೀಗೆ ಕನ್ನಡಿ ನೋಡುವಂತೆ ಪ್ರೇರೇಪಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗೊಮ್ಮೆ ಈಗೊಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಂಡು ತಕ್ಷಣವೇ ಅಲ್ಲಿಂದ ಮುಂದೆ ಸಾಗುವುದು ಸಂಪೂರ್ಣವಾಗಿ ಸಹಜ ಪ್ರಕ್ರಿಯೆಯಾಗಿದ್ದು, ಇದನ್ನು ಮಾನಸಿಕ ಸಮಸ್ಯೆ ಅಥವಾ ಆತ್ಮವಿಶ್ವಾಸದ ಕೊರತೆ ಎಂದು ಭಾವಿಸಬೇಕಿಲ್ಲ. ಆದರೆ, ಪದೇ ಪದೇ ಪ್ರತಿಬಿಂಬ ನೋಡಿಕೊಳ್ಳುತ್ತಾ, ತಮ್ಮ ರೂಪದ ಬಗ್ಗೆ ತೀವ್ರ ನಿರಾಶೆ, ಆತಂಕ ಅಥವಾ ಕೀಳರಿಮೆ ಅನುಭವಿಸುತ್ತಿದ್ದರೆ, ಅದು ಖಂಡಿತವಾಗಿಯೂ ಗಮನಹರಿಸಬೇಕಾದ ಹಾಗೂ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸಬೇಕಾದ ವಿಷಯವಾಗಿದೆ, (ಏಜೆನ್ಸೀಸ್​).