9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕಂತೆ: ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟು ಹೋದ ಪೊಲೀಸ್ ಪೇದೆ..! Policeman

ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಲದೀಪ್ ಮತ್ತು ಸುಭಾಷ್ ಕುಮಾರ್ ಅವರ ಪುತ್ರಿ ಹೀನಾ ಅವರ ವಿವಾಹವು ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ವರನ ಕಡೆಯವರ ಬೇಡಿಕೆಯಂತೆ ವಧುವಿನ ಪೋಷಕರು ಮದುವೆಗಾಗಿ ಈಗಾಗಲೇ 9.5 ಲಕ್ಷ ರೂಪಾಯಿ ಮೌಲ್ಯದ ಕಾರೊಂದನ್ನು ಬುಕ್ ಮಾಡಿದ್ದರು.
Policeman
9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕಂತೆ: ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟು ಹೋದ ಪೊಲೀಸ್ ಪೇದೆ..!
Published on: 

ಚಂಡೀಗಢ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿಯನ್ನು ತಡೆಯಬೇಕಾದ ಪೊಲೀಸ್ ಅಧಿಕಾರಿಯೇ ( Policeman ) ವರದಕ್ಷಿಣೆ ದಾಹಕ್ಕೆ ಬಿದ್ದು ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ತಾನು ಕೇಳಿದಷ್ಟು ಬೆಲೆಬಾಳುವ ಐಷಾರಾಮಿ ಕಾರು ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆ ಮಂಟಪಕ್ಕೆ ಬಂದಿದ್ದ ವರ, ವಧು ಮತ್ತು ಆಕೆಯ ಕುಟುಂಬಸ್ಥರನ್ನು ತೀವ್ರವಾಗಿ ಅವಮಾನಿಸಿ ಮದುವೆಯನ್ನೇ ಮುರಿದುಕೊಂಡು ಹೊರನಡೆದಿದ್ದಾನೆ. ಈ ಘಟನೆಯಿಂದ ತೀವ್ರ ನೊಂದಿರುವ ವಧುವಿನ ತಂದೆ ಸುಭಾಷ್ ಕುಮಾರ್ ಅವರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವರನ ವಿರುದ್ಧ ದೂರು ದಾಖಲಿಸಿದ್ದಾರೆ.

Also Read
ಸ್ಕೂಲ್ ರೀ-ಯೂನಿಯನ್‌ನಲ್ಲಿ ಚಿಗುರಿದ ಪ್ರೇಮ: ಅನುಮಾನದಿಂದ ಸಹಪಾಠಿ ಜತೆ ಸಂಬಂಧಿಯನ್ನೇ ಬರ್ಬರವಾಗಿ ಕೊಂದ ಪಾಪಿ! School Reunion
Policeman

ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಲದೀಪ್ ಮತ್ತು ಸುಭಾಷ್ ಕುಮಾರ್ ಅವರ ಪುತ್ರಿ ಹೀನಾ ಅವರ ವಿವಾಹವು ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ವರನ ಕಡೆಯವರ ಬೇಡಿಕೆಯಂತೆ ವಧುವಿನ ಪೋಷಕರು ಮದುವೆಗಾಗಿ ಈಗಾಗಲೇ 9.5 ಲಕ್ಷ ರೂಪಾಯಿ ಮೌಲ್ಯದ ಕಾರೊಂದನ್ನು ಬುಕ್ ಮಾಡಿದ್ದರು. ಆದರೆ, ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ವರ ಕುಲ್ದೀಪ್ ತನಗೆ 9.5 ಲಕ್ಷದ ಕಾರು ಬೇಡ, 13 ಲಕ್ಷ ರೂಪಾಯಿ ಬೆಲೆಬಾಳುವ ಕಾರೇ ಬೇಕೆಂದು ಹಠ ಹಿಡಿದಿದ್ದಾನೆ.

ವರನ ಈ ದಿಢೀರ್ ಬೇಡಿಕೆಯಿಂದ ಕಂಗಾಲಾದ ವಧುವಿನ ಕುಟುಂಬಸ್ಥರು ತಾವು ಮೊದಲೇ ಬುಕ್ ಮಾಡಿದ್ದ ಕಾರನ್ನು ರದ್ದುಗೊಳಿಸಿ, 13 ಲಕ್ಷದ ಹೊಸ ಕಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಆ ಕಾರು ಲಭ್ಯವಾಗದ ಕಾರಣ ವಧುವಿನ ಮನೆಯವರು ಅಸಹಾಯಕರಾಗಿದ್ದರು.

ಮದುವೆ ನಿಶ್ಚಯವಾದ ದಿನದಿಂದಲೂ ವರನ ಕುಟುಂಬಸ್ಥರು ಕಾರು ಮತ್ತು ಚಿನ್ನಾಭರಣಗಳಿಗಾಗಿ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ವಧುವಿನ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ವರನಿಗೆ ಎರಡು ಪವನ್ ಚಿನ್ನದ ಸರ, ಆತನ ತಾಯಿಗೆ ನಾಲ್ಕು ಪವನ್ ಕಿವಿಯೋಲೆ, ಬೆಳ್ಳಿಯ ಕಾಲ್ಗೆಜ್ಜೆಗಳ ಜತೆಗೆ ವರನ ಸಹೋದರ ಮತ್ತು ಅತ್ತಿಗೆಗೂ ಚಿನ್ನಾಭರಣಗಳನ್ನು ನೀಡಲು ವಧುವಿನ ಕುಟುಂಬ ಒಪ್ಪಿಕೊಂಡು ಆರ್ಡರ್ ನೀಡಿತ್ತು. ಇದಲ್ಲದೆ, ಸುಮಾರು 1.32 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಸಹ ಖರೀದಿಸಿ ಸಿದ್ಧಪಡಿಸಲಾಗಿತ್ತು. ಮದುವೆಯ ಎಲ್ಲಾ ಸಿದ್ಧತೆಗಳಿಗಾಗಿ ವಧುವಿನ ತಂದೆ ಬರೋಬ್ಬರಿ 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಿದ್ದರು.

ಮದುವೆಯ ದಿನದಂದು ಸುಮಾರು 1,200 ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಸೇರಿದಂತೆ ಎಲ್ಲಾ ಶಾಸ್ತ್ರಗಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಮದುವೆ ಗಂಡಿನ ವೇಷದಲ್ಲಿ ಬರಬೇಕಿದ್ದ ಕುಲದೀಪ್, ತನ್ನ ತಾಯಿಯೊಂದಿಗೆ ಸಾಮಾನ್ಯ ಉಡುಪಿನಲ್ಲಿಯೇ ಮದುವೆ ಮಂಟಪಕ್ಕೆ ಆಗಮಿಸಿದ್ದಾನೆ. ಮಂಟಪಕ್ಕೆ ಕಾಲಿಟ್ಟ ತಕ್ಷಣವೇ ಆತ ತಾನು ಕೇಳಿದ್ದ 13 ಲಕ್ಷದ ಕಾರು ಎಲ್ಲಿ ಎಂದು ವಿಚಾರಿಸಿದ್ದಾನೆ. ಕಾರು ಇನ್ನೂ ಬಂದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಗಲಾಟೆಯ ಬೆನ್ನಲ್ಲೇ ವರ ಮತ್ತು ಆತನ ತಾಯಿ ಮದುವೆಯನ್ನು ರದ್ದುಗೊಳಿಸಿ, ಮಂಟಪದಿಂದ ವಾಪಸ್ ತೆರಳಿದ್ದಾರೆ.

Also Read
'ಕರುಪ್ಪು', 'ವಿಶ್ವನಾಥನ್​ ಅಂಡ್ ಸನ್ಸ್'​...​ ಮೂರು ಸಿನಿಮಾಗಳ ಸೂಪರ್​ಹಿಟ್​ ಬೆನ್ನಲ್ಲೇ ಫ್ಯಾನ್ಸ್​ಗೆ ನಟ ಸೂರ್ಯ ಭಾವುಕ ನುಡಿ | Actor Suriya
Policeman

ಮದುವೆಗೆ ವರನ ಕಡೆಯಿಂದ ಕೇವಲ 30 ಜನರು ಮಾತ್ರ ಆಗಮಿಸಿದ್ದರು. ವರ ಮದುವೆ ಮುರಿದುಕೊಂಡು ಹೊರನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮದುವೆಗೆ ಬಂದಿದ್ದ ವಧುವಿನ ಕಡೆಯ ಅನೇಕ ಸಂಬಂಧಿಕರು ತೀವ್ರ ಬೇಸರದಿಂದ ಊಟವನ್ನೂ ಮಾಡದೆ ಮನೆಗೆ ಮರಳಿದ್ದಾರೆ. ಸ್ನಾತಕೋತ್ತರ ಪದವೀಧರೆಯಾಗಿರುವ (MA) ವಧು ಹೀನಾ ಅವರಿಗೆ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ಇಡೀ ಸಮಾಜದ ಮುಂದೆ ತಮ್ಮ ಕುಟುಂಬದ ಮರ್ಯಾದೆ ಕಳೆದು, ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ದೆಹಲಿ ಪೊಲೀಸ್ ಪೇದೆ ಕುಲ್ದೀಪ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸುಭಾಷ್ ಕುಮಾರ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ, (ಏಜೆನ್ಸೀಸ್).