'ಕರುಪ್ಪು', 'ವಿಶ್ವನಾಥನ್​ ಅಂಡ್ ಸನ್ಸ್'​...​ ಮೂರು ಸಿನಿಮಾಗಳ ಸೂಪರ್​ಹಿಟ್​ ಬೆನ್ನಲ್ಲೇ ಫ್ಯಾನ್ಸ್​ಗೆ ನಟ ಸೂರ್ಯ ಭಾವುಕ ನುಡಿ | Actor Suriya

Actor Suriya
'ಕರುಪ್ಪು', 'ವಿಶ್ವನಾಥನ್​ ಅಂಡ್ ಸನ್ಸ್'​...​ ಮೂರು ಸಿನಿಮಾಗಳ ಸೂಪರ್​ಹಿಟ್​ ಬೆನ್ನಲ್ಲೇ ಫ್ಯಾನ್ಸ್​ಗೆ ನಟ ಸೂರ್ಯ ಭಾವುಕ ನುಡಿ | Actor Suriya
Published on: 

ಚೆನ್ನೈ: ದಕ್ಷಿಣ ಭಾರತ ಸಿನಿರಂಗದ ಸ್ಟಾರ್ ನಟ ಸೂರ್ಯ (Actor Suriya), ತಮ್ಮ ಚಲನಚಿತ್ರ ಆಯ್ಕೆಗಳ ಮೂಲಕವೇ ಚಿತ್ರಪ್ರೇಮಿಗಳನ್ನು ಸದಾ ಅಚ್ಚರಿಗೊಳಿಸುವ ವಿಶೇಷ ಕಲಾವಿದ. ಒಂದೇ ಮಾದರಿಯ ಪಾತ್ರಗಳಿಗೆ ಸೀಮಿತವಾಗದೆ, ವಿಭಿನ್ನ ಭಾಷೆಯ ನಿರ್ದೇಶಕರೊಂದಿಗೆ ಕೈಜೋಡಿಸಿ ವೈವಿಧ್ಯಮಯ ಕಥಾಹಂದರಗಳನ್ನು ಆಯ್ಕೆ ಮಾಡಿಕೊಳ್ಳುವ ಸೂರ್ಯ ಇದೀಗ ಮೂರು ಸಿನಿಮಾಗಳ ಬ್ಯಾಕ್​ ಟು ಬ್ಯಾಕ್​ ಹಿಟ್​ ಬೆನ್ನಲ್ಲೇ ಫ್ಯಾನ್ಸ್​ಗಳಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ

2026 ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲದೇ, ನಟ ಸೂರ್ಯ ಪಾಲಿಗೆ ಭರ್ಜರಿ ಯಶಸ್ವಿ ವರ್ಷವಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ. 'ಕರುಪ್ಪು', 'ವಿಶ್ವನಾಥ್ ಅಂಡ್​ ಸನ್ಸ್' ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾದ 'ಸೀನ್' ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಜತೆಗೆ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಗಳಿಕೆಯನ್ನು ಕಂಡಿವೆ. ಒಂದೇ ವರ್ಷದಲ್ಲಿ ಸತತ ಮೂರು ಸಿನಿಮಾಗಳ ಸಕ್ಸಸ್​ನಿಂದ ಸಖತ್ ಖುಷಿ ಆಗಿರುವ ನಟ, ಸಿನಿಪ್ರಿಯರು ಮತ್ತು ಅಭಿಮಾನಿಗಳ ಬೆಂಬಲಕ್ಕೆ ಥ್ಯಾಂಕ್ಯೂ ಎಂದಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸೂರ್ಯ, "ಪ್ರೀತಿಯ ಪ್ರೇಕ್ಷಕರೇ ಮತ್ತು ಅಭಿಮಾನಿಗಳೇ, ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದ. ನೀವು ಚಿತ್ರಮಂದಿರಗಳಿಗೆ ಬಂದು 'ಸೀನ್' ಸಿನಿಮಾ ವೀಕ್ಷಿಸಿದ್ದೀರಿ. ಅದನ್ನು ಸಂಭ್ರಮಿಸಿದ್ದೀರಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೀರಿ. ಎಲ್ಲ ದೃಷ್ಟಿಕೋನಗಳಿಂದ ವಿಮರ್ಶೆ ಮಾಡಿದ್ದೀರಿ. ಕೊನೆಗೆ ಈ ಸಿನಿಮಾವನ್ನು ದೊಡ್ಡ ಯಶಸ್ಸಿಗೆ ಕಾರಣವೂ ಆಗಿದ್ದೀರಿ" ಎಂದು ಹೇಳಿದರು.

ನಮಗಿಂತಲೂ ನಿಮ್ಮದೇ ಖುಷಿ ಹೆಚ್ಚು!

ಒಂದು ಸಿನಿಮಾ ಸಕ್ಸಸ್​ ಆದಾಗ ಅದರಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರತಂಡದ ಸದಸ್ಯರು ಸಹಜವಾಗಿಯೇ ಖುಷಿ ಪಡುತ್ತಾರೆ. ಆದರೆ, 'ಸೀನ್' ಸಿನಿಮಾದ ಯಶಸ್ಸಿಗೆ ಅಭಿಮಾನಿಗಳು ತೋರಿದ ಸಂಭ್ರಮ ಚಿತ್ರತಂಡದ ತೃಪ್ತಿ, ಸಂತೋಷಕ್ಕಿಂತಲೂ ಹೆಚ್ಚಾಗಿದೆ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇಡೀ ತಂಡದ ಪರವಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಮತ್ತು ಗೌರವ ಸಲ್ಲಿಸುವೆ" ಎಂದು ಹೇಳಿದ್ದಾರೆ.

ಇದೇ ವೇಳೆ, ತಮ್ಮ ಸಿನಿಮಾಗಳಿಗೆ ಬೆಂಬಲ ನೀಡಿದ ಚಿತ್ರಮಂದಿರಗಳ ಮಾಲೀಕರು, ಪತ್ರಿಕಾ ಮತ್ತು ಮಾಧ್ಯಮ ಸಂಸ್ಥೆಗಳು, ವಿಮರ್ಶಕರು, ಸೋಷಿಯಲ್ ಮೀಡಿಯಾ ಕಂಟೆಂಟ್​ ಕ್ರಿಯೇಟರ್ಸ್​ ಹಾಗೂ ವಿವಿಧ ಭಾಷೆಗಳ ಅಭಿಮಾನಿಗಳಿಗೂ ಸೂರ್ಯ ಧನ್ಯವಾದ ಹೇಳಿದ್ದಾರೆ. ಈ ವರ್ಷವನ್ನು ವಿಶೇಷವಾಗಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಮುಂದಿನ ಸಿನಿಮಾಗಳ ಮೂಲಕ ಮತ್ತೆ ಭೇಟಿಯಾಗೋಣ ಎಂದು ಧನ್ಯವಾದ ಅರ್ಪಿಸಿದ್ದಾರೆ.

Also Read
ಈ ಕಾಡಿನ ಹಸಿರು ಬ್ಯೂಟಿಗಿಂತ ಇಲ್ಲಿನ ಸಾವುಗಳೇ ಹುಟ್ಟಿಸುತ್ತೆ ಭಯ! ಅಯೋಕಿಗಹಾರ ಅರಣ್ಯದ ಹಿಂದಿದೆ ಒಂದು ಕರಾಳ ಸ್ಟೋರಿ | Suicide Forest
Actor Suriya

3 ಹಿಟ್​ ಸಿನಿಮಾಗಳ ಗಳಿಕೆ ಎಷ್ಟು?

ಆರ್.​ಜೆ. ಬಾಲಾಜಿ ನಿರ್ದೇಶನದ ಕರುಪ್ಪು ಸಿನಿಮಾ ಜಾಗತಿಕವಾಗಿ ಒಟ್ಟು 310 ಕೋಟಿ ರೂ. ಗಳಿಕೆ ಕಂಡರೆ, ವೆಂಕಿ ಅಟ್ಲೂರಿ ನಿರ್ದೇಶನದ ವಿಶ್ವನಾಥನ್​ ಅಂಡ್​ ಸನ್ಸ್​ ಚಿತ್ರವು ಒಟ್ಟಾರೆ 209 ಕೋಟಿ ರೂ. ಕಲೆಕ್ಷನ್ ಮಾಡಿತು. ಇನ್ನು ಈ ಚಿತ್ರಗಳ ಬಳಿಕ ರಿಲೀಸ್​ ಆದ ಸೀನ್ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ತೆರೆಕಂಡ 17 ದಿನಕ್ಕೆ ವಿಶ್ವಾದ್ಯಂತ 262 ಕೋಟಿ ರೂ. ಗಳಿಸಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ,(ಏಜೆನ್ಸೀಸ್). ​