More

    ಗಾಳಿ ಮಳೆಗೆ ಧರೆಗುರುಳಿದ ಮರಗಳು

    ತೀರ್ಥಹಳ್ಳಿ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಬುಧವಾರ ಬೆಳಗ್ಗೆವರೆಗೆ 37.5 ಮಿ.ಮೀ ಮಳೆ ಬಿದ್ದಿದೆ. ಗಾಳಿ-ಮಳೆಗೆ ತಾಲೂಕಿನ ಹಲವೆಡೆ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ಭಾರಿ ಗಾಳಿ ಮಳೆಯ ಕಾರಣ ಆಗುಂಬೆ ಭಾಗದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿದೆ.
    ಬೊಬ್ಳಿ ಸಮೀಪ ವಿದ್ಯುತ್ ಮಾರ್ಗದ ಮೇಲೆ ಮರವೊಂದು ಬಿದ್ದು ಕೊಂಡ್ಲೂರು ಮತ್ತಿತರ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಯೋಗಿಮಳಲಿ ಗ್ರಾಮದಲ್ಲಿ ಲಕ್ಷ್ಮಣ ಎಂಬುವವರ ಮನೆ ಮೇಲೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಮನೆಯ ಮಾಡಿಗೆ ಹಾನಿ ಸಂಭವಿಸಿದೆ. ಬುಕ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಳೆದ ಕೆಲ ದಿನಗಳಿಂದ ಗಾಳಿಯಿಂದಾಗಿ ಸುಮಾರು 50 ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ಮೆಸ್ಕಾಂ ಎಇಇ ಪ್ರಶಾಂತ್ ತಿಳಿಸಿದರು. ಕಳೆದ 24 ಗಂಟೆಗಳ ಅವಧಿಯಲ್ಲಿ ಆಗುಂಬೆ ಹೋಬಳಿಯಲ್ಲಿ 59.1 ಮಿಮಿ, ಕಸಬಾ 41.5 ಮಿಮಿ, ಅಗ್ರಹಾರ 36.5 ಮಿಮಿ, ಮುತ್ತೂರು 26.6 ಮಿಮಿ ಹಾಗೂ ಮಂಡಗದ್ದೆಯಲ್ಲಿ 23.4 ಮಿಮಿ ಮಳೆಯಾಗಿದೆ. ಜು.18ರವರೆಗಿನ ವಾಡಿಕೆಯ 1300 ಮಿಮಿ ಆಗಿದ್ದು 620 ಮಿಮಿ ಮಾತ್ರ ಮಳೆಯಾಗಿದೆ. ವಾಡಿಕೆಯ ಶೇ.52 ಮಳೆ ಕೊರತೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts