More

    ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ

    ಚಿತ್ರದುರ್ಗ: ನಗರದೆಲ್ಲೆಡೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು,ಜನರು ಸಹಕರಿಸಿದರೆ ಸುಂದರವಾದ ರಸ್ತೆಗಳು ನಿರ್ಮಾಣ ವಾಗುತ್ತವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ಮಂಗಳವಾರ ನಗರದ ಸ್ಟೇಡಿಯಂ ರಸ್ತೆಯಲ್ಲಿ ಅಪ್ಪರ್ ಭದ್ರಾ ಅನುದಾನದಲ್ಲಿ 5.5 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಲೋಕೋ ಪಯೋಗಿ ಇಲಾಖೆಯಿಂದ 4.5 ಕೋಟಿ ರೂ.ಅನುದಾನದಲ್ಲಿ ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಸ್ಟೇಡಿಯಂ ರಸ್ತೆಯ ಎರಡು ಬದಿಗಳಲ್ಲಿ ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಂಡು ಸಿಸಿ ರಸ್ತೆ ನಿರ್ಮಿಸಲಾಗುವುದು. ಒಂದು ಮರ ಕಡಿದರೆ ಬದಲಿಗೆ 10 ಸಸಿನೆಟ್ಟು ಪೋಷಿಸುವ ಕೆಲಸ ಮಾಡಲಾಗುತ್ತದೆ. ನನಗೂ ಪರಿಸರದೆಡೆ ಹೆಚ್ಚಿನ ಕಾಳಜಿ ಇದೆ. ಮರ ತೆಗೆಯುವ ಕಡೆ ಸಸಿ ನೆಡಲು ಸ್ಥಳಾವಕಾಶ ಮಾಡಿಕೊಳ್ಳ ಬೇಕು. ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಸಣ್ಣ,ಪುಟ್ಟ ವರ್ತಕರಿಗೆ ಆಗುವ ತೊಂದರೆ ಕಾಮ ಗಾರಿ ಪೂರ್ಣಾನಂತರ ಇರುವುದಿಲ್ಲವೆಂದರು.

    ಮಳೆ ಪರಿಸ್ಥಿತಿ ನೋಡಿಕೊಂಡು ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ತಿಳಿಸಿದರು. ವಿದ್ಯುತ್ ಕಂಬಗಳನ್ನು ಜನರಿಗೆ ತೊಂದರೆಯಾಗದಂತೆ ತುರ್ತಾಗಿ ಸ್ಥಳಾಂತರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರಸಭೆ ಸದಸ್ಯರಾದ ಶ್ರೀದೇವಿ ಚಕ್ರವರ್ತಿ,ಹರೀಶ್,ಶ್ರೀನಿವಾಸ್,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ರೈತರಾಜು,ಮುಖಂಡರಾದ ಪ್ರಶಾಂತ್,ಚಕ್ರವರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts