More

    ಸುರುಮನೆ ಜಲಪಾತದ ವೀಕ್ಷಣೆ ನಿಷೇಧಕ್ಕೆ ಆಗ್ರಹ

    ಕಳಸ: ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರುಮನೆ ಜಲಪಾತದ ವೀಕ್ಷಣೆ ನಿಷೇಧಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು.

    ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಸುತ್ತಮುತ್ತಲ ನಿವಾಸಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ಜಲಪಾತದ ವೀಕ್ಷಣೆಗೆ ಸಮಯದ ನಿರ್ಬಂಧ ಇಲ್ಲದಿರುವುದರಿಂದ ತಡರಾತ್ರಿವರೆಗೆ ಪಾರ್ಟಿಗಳನ್ನು ಮಾಡಿ ಮದ್ಯದ ಬಾಟಲಿಗಳನ್ನು ರಸ್ತೆ, ತೋಟ ಎಲ್ಲೆಂದರಲ್ಲಿ ಬಿಸಾಡಿ ಊರಿನ ಪರಿಸರವನ್ನು ಹಾಳುಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

    ಪ್ರತಿ ನಿತ್ಯ ನೂರಾರು ಪ್ರವಾಸಿ ವಾಹನಗಳು ಬರುತ್ತಿರುವುದರಿಂದ ಸ್ಥಳೀಯರಿಗೆ ರಸ್ತೆಯಲ್ಲಿ ಓಡಾಡಲು ಜಾಗವಿಲ್ಲದಂತಾಗಿದೆ. ಈ ಬಗ್ಗೆ ಪ್ರವಾಸಿರನ್ನು ಪ್ರಶ್ನಿಸಿದರೆ ಜಗಳವಾಡುತ್ತಾರೆ. ಮಹಿಳೆಯರು ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ನಿರ್ವಣವಾಗಿದೆ. ಈ ಬಗ್ಗೆ ಒಂದು ವರ್ಷಗಳ ಹಿಂದೆ ಇಲಾಖೆಗೆ ದೂರು ನೀಡಿದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಪ್ರವಾಸಿಗರು ಫಾಲ್ಸ್ ವೀಕ್ಷಣೆಗೆ ಬರುವುರಿಂದ ಜನರಿಗೆ ತೊಂದರೆಯಾಗುತ್ತಿರುವುದರಿಂದ ಅರಣ್ಯ ಇಲಾಖೆ ಪ್ರವಾಸಿಗರಿಗೆ ಫಾಲ್ಸ್ ವೀಕ್ಷಣೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದರು.

    ಆರ್​ಎಫ್​ಒ ವಿಜಯಕುಮಾರ್, ಸುಧೀರ್ ಅಬ್ಬುಗುಡಿಗೆ, ಸಂದೀಪ್, ವಿನಯಮೂರ್ತಿ, ಶರತ್, ಶ್ರೀಜಿತ್, ರಕ್ಷಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts