More

    ‘ಸಾರ್ವಜನಿಕರು ಸಹಕರಿಸಿ’ – ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ !

    ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ದಿಢೀರ್ ಮುಷ್ಕರದ ಪರಿಣಾಮ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸಚಿವ ಪ್ರತಿಕ್ರಿಯಿಸಿದ್ದು, ಏಕಾಕಿ ಬದಲಿ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ!

    ಕೊರೊನಾ ಸಂಕಷ್ಟದಿಂದ ಸಾರಿಗೆ ನಿಗಮ‌ ಸುಮಾರು ೩ ಸಾವಿರ ಕೋಟಿ‌ ರೂ ನಷ್ಟ ಅನುಭವಿಸಿದೆ. ಆದರೂ ನಿಗಮದ ನೌಕರರಿಗೆ ವೇತನ ಪಾವತಿಯಲ್ಲಿ ತೊಂದರೆ ಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಹಾಗೂ ನಿಗಮದ ಸಹಕಾರ ದೊಂದಿಗೆ ವೇತನ ಪಾವತಿ ಮಾಡಲಾಗಿದೆ. ಬೇರೆ ರಾಜ್ಯದಲ್ಲಿ ಶೇಕಡಾ ೨೫ ರಷ್ಟು‌ವೇತನ ಕಡಿತಗೊಳಿಸಿದರೂ ನಮ್ಮಲ್ಲಿ ನೌಕರರಿಗೆ ತೊಂದರೆಯಾಗದಂತೆ ಪೂರ್ಣ ವೇತನ ನೀಡಲಾಗಿದೆ. ನೌಕರರ ಬೇಡಿಕೆ ಬಗ್ಗೆ ಅಧಿಕಾರಿಗಳ ಸಭೆ ಕರೆಯಲಾಗಿದೆ.

    ಇದನ್ನೂ ಓದಿ:  ಗೋ ಹತ್ಯೆ ನಿಷೇಧ ಮಸೂದೆ ಜಾರಿಗೊಂಡ ಬೆನ್ನಲ್ಲೆ ಕಸಾಯಿ ಖಾನೆಗೆ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: 9 ಎತ್ತು, 2 ಎಮ್ಮೆ ಸಾವು

    ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂಬುದರ ಅರಿವು ನಮಗೂ ಇದೆ. ಆದರೆ, ನೌಕರರು ದಿಢೀರ್ ಮುಷ್ಕರಕ್ಕೆ ಇಳಿದ ಕಾರಣ ಏಕಾಏಕಿ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ಮನವಿ ಡಿಸಿಎಂ ಸವದಿ ಮನವಿ ಮಾಡಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಸಾರಿಗೆ​ ನೌಕರರ ಮುಷ್ಕರ – ಎಲ್ಲೆಲ್ಲಿ ಏನೇನು ಸ್ಥಿತಿಗತಿ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts